spot_img
Friday, January 17, 2025
spot_img

ಪುಷ್ಪ 2 | ಅನಧಿಕೃತ ಚಿತ್ರ ಪ್ರದರ್ಶನ : ಬೆಂಗಳೂರಿನ 42 ಚಿತ್ರ ಮಂದಿರಗಳ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಆದೇಶ !

ಜನಪ್ರತಿನಿಧಿ (ಬೆಂಗಳೂರು) : ಬೆಂಗಳೂರಿನಲ್ಲಿ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ನಿಗಧಿತ ಸಮಯವಲ್ಲದೆ ಇತರೆ ಸಮಯದಲ್ಲೂ ಚಿತ್ರಪ್ರದರ್ಶನಗಳು ನಡೆಯುತ್ತಿದೆ ಎನ್ನುವುದು ಬುಕ್ ಮೈ ಶೋನಲ್ಲಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ನಗರದ ಸುಮಾರು 42 ಚಿತ್ರ ಮಂದಿರಗಳ ವಿರುದ್ಧ ಕ್ರಮಕ್ಕೆ ಆದೇಶಿಸಿದ್ದಾರೆ.

ಕರ್ನಾಟಕ ಸಿನಿಮಾ ರೆಗ್ಯೂಲೇಷನ್ ಕಾಯ್ದೆಯಡಿ ಚಿತ್ರಪ್ರದರ್ಶನವನ್ನು ಬೆಳಗ್ಗೆ 6:30 ರ ನಂತರ ಪ್ರಾರಂಭಿಸಬೇಕಾಗಿದ್ದು, ಅದರ ಕೆಲವೊಂದು ಚಿತ್ರಮಂದಿರಗಳಲ್ಲಿ ದಿನಾಂಕ  05.12. 2024 ರಂದು ಪುಷ್ಪ 2 ಚಲನಚಿತ್ರ ತೆರೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅನಧಿಕೃತವಾಗಿ ಚಿತ್ರಗಳನ್ನು ಬೆಳಗ್ಗಿನ 3:00 ಗಂಟೆಗೂ ಪ್ರದರ್ಶನ ಮಾಡುತ್ತಿರುವುದು  ಕಂಡುಬಂದಿದ್ದು, ಮಾತ್ರವಲ್ಲದೇ ಬುಕ್ ಮೈ ಶೋ ಆನ್‌ಲೈನ್ ಜಾಲತಾಣದ ಮೂಲಕ ಬೆಳಗಿನ 6:30 ರ ಪೂರ್ವವಾಗಿ ಚಿತ್ರಪ್ರದರ್ಶನದ ಶೋಗಳಿಗೆ ಟಿಕೆಟ್ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ನಿಯಮಬಾಹಿರ ಪ್ರದರ್ಶನಗಳನ್ನು ಮಾಡುವುದಕ್ಕೆ ಮುಂದಾಗಿರುವ ಚಿತ್ರಮಂದಿರಗಳ ವಿರುದ್ಧ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

ಕರ್ನಾಟಕ ಸಿನಿಮಾ ರೆಗ್ಯೂಲೇಷನ್ ಕಾಯ್ದೆಯಡಿ ನಿಯಮ 41 ರಂತೆ No License shall exhibit cinematograph shows before 6:30 am the last show should not commence after 10:30 pm 20 ನಿಯಮದಲ್ಲಿರುತ್ತದೆ. ಆದ್ದರಿಂದ, ನಿಯಮಾಬಾಹಿರವಾಗಿ ಅನಧಿಕೃತವಾಗಿ ನಿಗಧಿತ ಅವಧಿಯ ಪೂರ್ವ ದಿನಾಂಕ 05.12.2024 ರಂದು ಬುಕ್ ಮೈ ಶೋ ಆನ್‌ಲೈನ್ ನಲ್ಲಿ ಕಂಡ ಸುಮಾರು 42 ಚಿತ್ರಮಂದಿರಗಳಲ್ಲಿ ಟಿಕೆಟ್ ಮಾರಾಟ ಮಾಡುತ್ತಿರುವುದು ಕಂಡುಬಂದ್ದು, ಹಾಗೂ ಇದರೊಂದಿಗೆ ಯಾವುದಾದರೂ ಚಿತ್ರಮಂದಿರಗಳಲ್ಲಿ ಅವಧಿಪೂರ್ವ ಚಿತ್ರ ಪ್ರದರ್ಶನಗಳು ಆಗುತ್ತಿರುವುದು ಕಂದುಬಂದಲ್ಲಿ ಚಿತ್ರ ಪ್ರದರ್ಶನಗಳನ್ನು ಸ್ಥಗಿತಗೊಳಿಸಲು ಹಾಗೂ ಚಿತ್ರಮಂದಿರಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಬೆಂಗಳೂರು ನಗರ ಆಯುಕ್ತರು ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!