spot_img
Wednesday, April 1, 2026
spot_img

ಜಾಂಬೂರು ಶಾಲಾ ವಿದ್ಯಾರ್ಥಿಗಳಿಗೆ ರಾಜೇಂದ್ರ ಬೆಚ್ಚಳ್ಳಿ ಕೃಷಿತಾಕುವಿನಲ್ಲಿ ‘ಕೃಷಿಪಾಠ’!

ಸಿದ್ಧಾಪುರ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಜಾಂಬೂರು ಇಲ್ಲಿನ ವಿದ್ಯಾರ್ಥಿಗಳಿಗೆ ಪರಿಸರವನ್ನು ಸಂರಕ್ಷಣೆ ಅರಿವು ಮೂಡಿಸುವ ಸಲುವಾಗಿ ಧರಣಿ ಇಕೋ ಕ್ಲಬ್ ಕಾರ್ಯಕ್ರಮದ ಮೂಲಕ ಪ್ರಕೃತಿ ನಡಿಗೆ ಎಂಬ ಹೊರ ಸಂಚಾರ ಕಾರ್ಯಕ್ರಮವನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭೋಜು ಪೂಜಾರಿ ಚಾರಿಟೇಬಲ್ ಟ್ರಸ್ಟ್ ರಿ., ಬೆಚ್ಚಳ್ಳಿ ಇದರ ಅಧ್ಯಕ್ಷರು, ಪ್ರಗತಿಪರ ಕೃಷಿಕರು ಆದ ರಾಜೇಂದ್ರ ಪೂಜಾರಿ ಬೆಚ್ಚಳ್ಳಿಯವರ ಕೃಷಿ ತಾಕುವಿನಲ್ಲಿ ಆಯೋಜಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರು, ಸಹಶಿಕ್ಷಕರು, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರು ,ಹಾಗೂ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಜೇಂದ್ರ ಬೆಚ್ಚಳ್ಳಿಯವರು ವಿಧ್ಯಾರ್ಥಿಗಳಿಗೆ ನೀರಿನ ಮಹತ್ವ, ಪ್ರಾಮುಖ್ಯತೆ, ರಕ್ಷಣೆ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಿದರು. ನಂತರ ಸಾವಯವ ಗೊಬ್ಬರ ಹಾಗೂ ಮಣ್ಣಿನ ಸಂರಕ್ಷಣೆಯ ಬಗ್ಗೆ, ವಿವಿಧ ಜಾತಿಯ ಹಣ್ಣನ ತಳಿಗಳು, ಹೂವಿನ ತಳಿಗಳು, ಕಾಳುಮೆಣಸು, ತರಕಾರಿಯ ಬಗ್ಗೆ ಪರಿಚಯ ನೀಡಿದರು. ಮಕ್ಕಳಿಗೆ ಫಲಪುಷ್ಪ ಊಟದ ವ್ಯವಸ್ಥೆ, ಹಣ್ಣಿನ ಗಿಡಗಳನ್ನು ನೀಡುವುದರ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಉತ್ತಮ ಮಾರ್ಗದರ್ಶನ ನೀಡಿದರು

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!