18.2 C
New York
Thursday, September 29, 2022

Buy now

spot_img

ಕೊರೋನಾ ಹಿಂದಿರುವ ದುಷ್ಟ ಶಕ್ತಿ ಯಾವುದು ?

ಸಾಮಾನ್ಯವಾಗಿ ಯಾವುದಾದರೊಂದು ಘಟನೆ ಸಂಭವಿಸಿದಾಗ ಅದರ ಹಿಂದೆ ಒಂದು ದುಷ್ಟ ಶಕ್ತಿ ಅಡಗಿರುವುದು ಸ್ವಾಬಾವಿಕ. ಅದೇ ರೀತಿ ಕರೋನಾ ಹಿಂದಿರುವ ದುಷ್ಟಶಕ್ತಿ ಯಾವುದಾಗಿರಬಹುದು ಎಂಬ ಸಂಶಯ ಎಲ್ಲರಲ್ಲು ಶುರುವಾಗಿದೆ. ನಿಗೂಡವಾದ ವೈರಸ್ಸೊಂದನ್ನು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಭಯ ಹುಟ್ಟಿಸುವ ಕೆಲಸವನ್ನು ಯಾರಿಂದ ಆಗಿದೆ ಎನ್ನುವುದು ಕೂಡ ಜನರು ಆಲೋಚಿಸುವಂತಾಗಿದೆ. ಈ ವರೆಗೂ ಯಾವುದೇ ಲಸಿಕೆ ಕಂಡುಹಿಡಿಯದೇ 98 ಶೇಕಡಾ ಕರೋನಾ ಭಾದಿತರು ಗುಣಮುಖರಾಗುತ್ತಿದ್ದಾರೆ. ಸತ್ತವರು ಬಹುತೇಕ ಮಂದಿ ಇತರೆ ಖಾಯಿಲೆಗಳಲ್ಲಿ ಬಳಲುತ್ತಿರುವವರು. ಅಲ್ಲದೆ ಬೇರೆ ಬೇರೆ ಖಾಯಿಲೆಯವರಿಗೆ ಸೂಕ್ತ ಚಿಕಿತ್ಸೆ ದೊರೆಯದೇ ಅಸುನೀಗಿದರು. ಇದನ್ನು ಕೂಡ ಗಂಭೀರವಾಗಿ ಪರಿಗಣಿಸ ಬೇಕಾಗಿದೆ. ಪ್ರಪಂಚದ ಆಳುವ ವರ್ಗಗಳ ಬೇಜವಬ್ದಾರಿ ಕ್ರಮಗಳಿಂದಾಗಿ ಅವೈಜ್ಞಾನಿಕ ನೀತಿಗಳಿಂದಾಗಿ ಕರೋನಾ ವ್ಯಾಪಕವಾಗಿ ವ್ಯಾಪಿಸಿದೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಭಾರತ ಕೊರೊನಾವನ್ನು ತನ್ನ ಮೈಮೇಲೆ ಎಳೆದುಕೊಂಡಿದೆ. ಭಾರತದ ಕೋಟ್ಯಾಂತರ ಜನ ಇದರಿಂದಾಗಿ ಹಸಿವಿನಿಂದ ಬಳಲುವಂತಾಯಿತು. ಸಾವಿರಾರು ಜನಪ್ರಾಣ ಕಳೆದುಕೊಳ್ಳುವಂತಾಯಿತು. ಇದಕ್ಕೆಲ್ಲ ಯಾರು ಕಾರಣವೇನೆಂಬುದು ಪ್ರಶ್ನೆಯಾಗಿಯೇ ಉಳಿಯಲಿದೆ. ಭಾರತವೂ ಸೇರಿದಂತೆ ಜಗತ್ತಿನ ಆಳುವ ವರ್ಗಳಿಗೆ ಈ ಕರೋನಾ ವೈರಸ್ ದೊಡ್ಡ ಸವಾಲಾಗಿದೆ. ದುಷ್ಟ ಶಕ್ತಿಯ ಅಟ್ಟಹಾಸದ ಮುಂದೆ ಜಗತ್ತಿನ ಬಹುತೇಕ ರಾಷ್ಟ್ರಗಳು ಮಂಡಿಯೂರಿವೆ. ಕೊರೊನಾದಿಂದ ವ್ಯವಸ್ಥೆಯನ್ನು ಭಯಗೊಳಿಸಿ, ಜಗತ್ತಿನ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿರುವ ವ್ಯವಸ್ಥಿತ ಸಂಚು ನೆಡೆಯುತ್ತಿದೆ. ಇದರಿಂದಾಗಿ ಕೊರೊನಾವನ್ನು ಬಹುತೇಕ ಆಳುವ ವರ್ಗಗಳ ಜೊತೆಗೆ ಲೂಟಿಮಾಡಲು ಬಳಸಿಕೊಂಡಂತಾಗಿದೆ. ಸಾಮಾನ್ಯ ಖಾಯಿಲೆಯೊಂದು ರಾಜಕಾರಣಿಗಳ, ಅಧಿಕಾರಿಶಾಹಿಗಳ, ಆರೋಗ್ಯದಾತರ ಮನಸ್ಥಿತಿಯನ್ನು ದುರ್ಬಲಗೊಳಿಸಿದೆ. ಇದರ ಹಿಂದೆ ಖಜಾನೆ ಲೂಟಿಮಾಡುವ ಸಂಚು ಕೂಡ ಇದೆ. ಇದೀಗ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಬೇಕಾಗಿದೆ. ಬಹುರಾಷ್ಟ್ರೀಯ ಔಷದಿ ಕಂಪೆನಿಗಳ ಹುನ್ನಾರವೂ ಇದರಲ್ಲಿ ಇದೆ. ಕೊರೊನಾ ಹೆಚ್ಚದಂತೆಲ್ಲ ಅದು ಔಷದಿ ಕಂಪೆನಿಗಳಿಗೆ ಲಾಭವಾಗಲಿದೆ. ಕರೊನಾಕ್ಕೆ ಪೂರಕವಾದ ಎಲ್ಲಾ ಸಾಮಾಗ್ರಿಗಳ ಬೇಡಿಕೆ ಹೆಚ್ಚಾಗಲಿದೆ. ಇದೀಗ ಕೊರೊನಾ ವಿಚಾರದಲ್ಲಿ ಜನರ ಅನುಮಾನವೂ ಹೆಚ್ಚುತ್ತಿದೆ. ಇತರ ಖಾಯಿಲೆಗಳಿಗೆ ಚಿಕಿತ್ಸೆ ನೀಡದೆ, ಔಷದಿ ನೀಡದೆ ಅವರನ್ನು ಸತಾಯಿಸುವ, ಸಾಯಿಸುವ ಕೆಲಸ ನೆಡೆಯುತ್ತಿದೆ. ಮತ್ತೊಂದೆಡೆ ಕೊರೊನಾ ಎಂದು ಹೆದರಿಸಿ ಇತರ ಎಲ್ಲಾ ಚಿಕಿತ್ಸೆಯನ್ನು ನಿರಾಕರಿಸಲಾಗುತ್ತಿದೆ. ಜನರಿಂದ ಕೋಟಿ ಕೋಟಿ ಲೂಟಿಮಾಡಿದ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಹಿಂಜರಿಯುತ್ತಿವೆ. ಸಾಮಾನ್ಯ ಜ್ವರ ನೆಗಡಿಯನ್ನು ಕೊರೊನಾವೆಂದು ಬಿಂಬಿಸಲಾಗುತ್ತಿದೆ. ಗ್ರಾಮೀಣ ಭಾಗದ ಜನ, ರೈತರು, ಕೃಷುಕೂಲಿಕಾರರು ಇದಕ್ಕೆ ಬಲಿಯಾಗುತ್ತಿದ್ದಾರೆ. ಜನ ಕೊರೊನಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಕರೊನಾ ಹಿಂದೆ ಇರುವ ದುಷ್ಟ ಶಕ್ತಿಯನ್ನು ಮೊದಲು ಗುರುತಿಸಿ, ಅದರಿಂದ ಲೂಟಿ ಮಾಡುವವರ ವಿರುದ್ದ ಜನ ಸಂಘಟಿತರಗಿ ಹೋರಾಟ ಮಾಡಬೇಕಾಗಿದೆ.

-ಸುಬ್ರಹ್ಮಣ್ಯ ಪಡುಕೋಣೆ

ಸಂಪಾದಕರು, ಜನಪ್ರತಿನಿಧಿ ಪತ್ರಿಕೆ

Related Articles

Stay Connected

21,961FansLike
3,503FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!