Sunday, September 8, 2024

ನೂಜಾಡಿ: ವಿಶಾಲಾಕ್ಷಿ ಆನಂದರಾಮ ಭಟ್ ನೆಂಪು ಸ್ಮರಣಾರ್ಥ ಬಸ್ ತಂಗುದಾಣ ಉದ್ಘಾಟನೆ

 


ಕುಂದಾಪುರ, ಆ.22: ಜನರಲ್ಲಿ ಗ್ರಾಮದ ಅಭಿವೃದ್ದಿಯ ಬಗ್ಗೆ ಚಿಂತಿಸುವ, ಊರಿನ ಅಭಿವೃದ್ದಿಯ ಬಗ್ಗೆ ಸಹಾಯ ಮಾಡುವ ಮನಸು ಇರಬೇಕು. ಇದರಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಸಮಾಜಕ್ಕೆ ನಾವು ನೀಡುವ ಕೊಡುಗೆಗಳು ನಮ್ಮನ್ನು ಉತ್ತಮರನ್ನಾಗಿಸುತ್ತದೆ ಮತ್ತು ಅದೊಂದು ಮಹತ್ಕಾರ್ಯವಾಗುತ್ತದೆ ಎಂದು ಮಾಜಿ ಶಾಸಕರು, ಧಾರ್ಮಿಕ ಮುಖಂಡರು ಆದ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು.

ಅವರು ಗಣೇಶ ಚತುರ್ಥಿಯಂದು ನೂಜಾಡಿ ಎನ್.ಕೃಷ್ಣ ಭಟ್ ಅವರು ತಮ್ಮ ತಂದೆ-ತಾಯಿ ವಿಶಾಲಾಕ್ಷಿ ಆನಂದ ರಾಮ ಭಟ್ ಸ್ಮರಣಾರ್ಥ ಕೊಡಮಾಡಿದ ಬಸ್ ತಂಗುದಾಣವನ್ನು ಉದ್ಘಾಟಿಸಿ ಮಾತನಾಡಿದರು. ನೂಜಾಡಿ ಕೃಷ್ಣ ಭಟ್ಟರ ಸಮಾಜಮುಖಿ ಕೊಡುಗೆ ಗ್ರಾಮಸ್ಥರಿಗೆ ಉಪಯೋಗವಾಗಲಿದೆ ಎಂದು ಅಪ್ಪಣ್ಣ ಹೆಗ್ಡೆ ಅಭಿಪ್ರಾಯಪಟ್ಟರು.

ಸಮಾರಂಭದ ಅಧ್ಯಕ್ಷತೆಯನ್ನು ಕೊಲ್ಲೂರು ಮೂಕಂಬಿಕ ದೇವಳದ ಮಾಜಿ ಧರ್ಮದರ್ಶಿ ಕೆ.ರಮೇಶ ಗಾಣಿಗ ವಹಿಸಿದ್ದರು. ಇದೇ ಸಂದರ್ಭದಲ್ಲಿ ಬಸ್ ತಂಗುದಾಣ ನಿರ್ಮಾಣ ಮಾಡಲು ಸ್ಥಳದಾನ ಮಾಡಿದ ಶಿವರಾಮ ಪೂಜಾರಿ ದಂಪತಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮಸ್ಥರಾದ ಜಯಂತ ಶೆಟ್ಟಿ ನೂಜಾಡಿ, ವಿಜಯಾನಂದ ಶೆಟ್ಟಿ ನೂಜಾಡಿ, ಡಾ|ಚಂದ್ರಶೇಖರ ಶೆಟ್ಟಿ, ರಾಜೀವ ಶೆಟ್ಟಿ ಬಗ್ವಾಡಿ, ಶರತ್ ಕುಮಾರ್ ಶೆಟ್ಟಿ ನೂಜಾಡಿ ಮುಂತಾದವರು ಉಪಸ್ಥಿತರಿದ್ದರು.

ಶಿಕ್ಷಕರಾದ ಡಾ|ಕಿಶೋರ್ ಕುಮಾರ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ನೂಜಾಡಿ ಕೃಷ್ಣ ಭಟ್ ಕೃತಜ್ಞತೆ ಅರ್ಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!