spot_img
Thursday, December 5, 2024
spot_img

ಉಪ್ಪು ನೀರು ನುಗ್ಗುವ ತನಕ ಸುಮ್ಮನಿರುವುದೇಕೆ? ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸಲು ಮೀನಮೇಷ

ಜನಪ್ರತಿನಿಧಿ (ಬೈಂದೂರು): ಈಗಾಗಲೇ ಮಳೆಗಾಲ ಮುಗಿದು ನೀರಿನ ಒರತೆಗಳೆಲ್ಲ ಬತ್ತಿ ಹೋಗಿವೆ. ಕೃಷಿ ಭೂಮಿಗೆ 66 ಈಗ ನೀರಿನ ಅವಶ್ಯಕತೆ ಉಂಟಾಗತೊಡಗಿದೆ. ಈ ಸಮಯದಲ್ಲಿ ವೆಂಟೆಡ್ ಡ್ಯಾಂ, ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸಬೇಕಾದ ಅಗತ್ಯವಿದೆ. ಈ ಸಮಯದಲ್ಲಿ ಹಲಗೆ ಆಳವಡಿಸಿದರೆ ಸಾಕಷ್ಟು ಪ್ರಮಾಣದಲ್ಲಿ ನೀರು ಶೇಖರಣೆಯಾಗಲು ಸಾಧ್ಯವಿದೆ. ಆದರೆ ಸಂಬಂಧಪಟ್ಟ ಇಲಾಖೆಗಳು ಇನ್ನೂ ಕೂಡಾ ಈ ನಿಟ್ಟಿನಲ್ಲಿ ಮೌನ ವಹಿಸಿರುವುದು. ಈ ನಿಟ್ಟಿನಲ್ಲಿ ಇನ್ನೂ ಕೂಡಾ ಇಲಾಖೆ ಕಿಂಡಿ ಅಣೆಕಟ್ಟುಗಳ ಕಡೆ ಗಮನ ಹರಿಸದೇ ಇರುವುದು ಕಾಣಬಹುದಾಗಿದೆ.
ಈ ಬಾರಿ ಚೆನ್ನಾಗಿ ಮಳೆಯಾಗಿದ್ದರೂ ನೀರನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಇದ್ದರೆ ಕಷ್ಟವಾಗುತ್ತದೆ. ಇನ್ನು ಕೆಲವು ಗ್ರಾಮಗಳಿಗೆ ನೀರಿನ ಅವಶ್ಯಕತೆಯೂ ಹೆಚ್ಚಿದೆ. ಹೀಗಾಗಿ ಸಂಬಂಧಪಟ್ಟವರು ಎಚ್ಚರಿಕೆಯಿಂದ ಈ ಕಾರ್ಯ ಮಾಡಬೇಕು. ಕೃಷಿ ಚಟುವಟಿಕೆಗಳಿಗೆ ಪೂರಕವಾದ ನೀರು ಸಮುದ್ರ ಸೇರುವುದನ್ನು ತಪ್ಪಿಸಬೇಕು. ನದಿ, ಉಪನದಿಗಳ ಸಿಹಿ ನೀರಿಗೆ ಉಪ್ಪು ನೀರು ಸೇರುವುದು ಹಾಗೂ ನದಿ ನೀರು ಸಮುದ್ರ ಸೇರುವುದನ್ನು ತಡೆಯಲು ಮತ್ತು ಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ಅನೇಕ ಕಡೆಗಳಲ್ಲಿ ಕಿಂಡಿ ಅಣೆಕಟ್ಟುಗಳು, ಕಿಂಡಿ ಅಣೆಕಟ್ಟು ಸಹಿತ ಸೇತುವೆ ನಿರ್ಮಾಣ ಮಾಡಲಾಗಿದೆ. ಸಣ್ಣ ನೀರಾವರಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಲೋಕೋಪಯೋಗಿ ಇಲಾಖೆ あだ వివిధ ಇಲಾಖೆಗಳಿಂದ ನಿರ್ಮಾಣವಾಗಿರುವ ಕಿಂಡಿ ಅಣೆಕಟ್ಟುಗಳಿಗೆ ತಕ್ಷಣವೇ ಹಲಗೆ ಅಳವಡಿಸಿ ಸಿಹಿ ನೀರು ಸಂಗ್ರಹಕ್ಕೆ ಜಿಲ್ಲಾಡಳಿತ, ತಾಲೂಕು ಆಡಳಿತ ಮುಂದಾಗಬೇಕು ಎಂದು ಶಾಸಕ ಗುರುರಾಜ್ ಗಂಟೆಹೊಳೆ ಈಗಾಗಲೇ ಆಗ್ರಹಿಸಿದ್ದಾರೆ.
ಅನೇಕ ಕಡೆಗಳಲ್ಲಿ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಹಾಕದೆ ಇರುವುದರಿಂದ ಅಂತರ್ಜಲದ ಮೇಲೂ ಪರಿಣಾಮ ಬೀರಲಿದೆ. ಕೃಷಿಗೆ ನೀರಿನ ಕೊರತೆಯ ಭೀತಿಯು ಇದೆ. ಹಾಗೆಯೇ ನದಿಯೊಳಗೆ ಉಪ್ಪು ನೀರು ಸರಾಗವಾಗಿ ಹರಿಯುವುದರಿಂದ ನದಿ ಪಾತ್ರದ ನಿವಾಸಿಗಳ ಬಾವಿಯ ನೀರು ಕೂಡ ಉಪ್ಪಾಗುವ ಸಾಧ್ಯತೆ ಇದೆ. ಇದೆಲ್ಲಕ್ಕಿಂತಲೂ ಮಿಗಿಲಾಗಿ ಕ್ಷೇತ್ರದ ಕೃಷಿಗೆ ಅನುಕೂಲ ಆಗುವಂತೆ ತಕ್ಷಣವೇ ಅಣೆಕಟ್ಟುಗಳಿಗೂ ಹಲಗೆ ಅಳವಡಿಸುವ ಕೆಲಸ ತುರ್ತಾಗಿ ಆಗಬೇಕು ಎನ್ನುವ ಆಗ್ರಹ ವ್ಯಕ್ತವಾಗುತ್ತಿದೆ. ತಾಲೂಕು ಆಡಳಿತ ಎಲ್ಲಾ ಕಿ೦ಡಿ ಅಣೆಕಟ್ಟುಗಳಿಗೂ ಹಲಗೆ ಅಳವಡಿಸುವ ಕೆಲಸ ತುರ್ತಾಗಿ ಆಗಬೇಕು ಎನ್ನುವ ಆಗ್ರಹ ವ್ಯಕ್ತವಾಗುತ್ತಿದೆ.

ಮಳೆ ಕಡಿಮೆಯಾಗಿ 10-15 ದಿನ ಕಳೆದರೂ ಇನ್ನು ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸದೇ ಇರುವುದರಿಂದ ನದಿ, ಉಪನದಿಗಳ ನೀರು ಸಮುದ್ರ ಸೇರುತ್ತಿದ್ದು ಜಲ್ಲಾಡಳಿತ, ತಾಲೂಕು ಆಡಳಿತ ಕೂಡಲೇ ಎಚ್ಚೆತ್ತುಕೊಂಡು ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸಬೇಕು. ಅನೇಕ ಕಡೆಗಳಲ್ಲಿ ಕಿಂಡಿ ಅಣೆಕಟ್ಟುಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಗ್ರಾಮ ಪಂಚಾಯತಿಗಳು ಸೇರಿದಂತೆ ನಗರಾಡಳಿತ ಸಂಸ್ಥೆಗಳು ಇದರ ಬಗ್ಗೆ ಮುತುವರ್ಜಿ ವಹಿಸಬೇಕು. ತಮ್ಮ ವ್ಯಾಪ್ತಿಯಲ್ಲಿ ಇರುವ ಕಿಂಡಿ ಅಣೆಕಟ್ಟಿಗರ ಸರಿಯಾಗಿ ಹಲಗೆ ಹಾಕದೆ ಇರುವುದು ಅಥವಾ ಸಂಬಂಧಪಟ್ಟವರು ನಿರ್ವಹಣೆ ಮಾಡದೆ ಇರುವುದು ಕಂಡು ಬಂದಲ್ಲಿ ನನಗೆ ಅಥವಾ ನನ್ನ ಕಚೇರಿ ಗಮನಕ್ಕೆ ತರಬಹುದು. 

-ಗುರುರಾಜ ಗಂಟಿಹೊಳೆ, ಶಾಸಕರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!