Thursday, November 21, 2024

ಜಸ್ಟೀಸ್ ಕುನ್ಹಾ ಬಗ್ಗೆ ಪ್ರಹ್ಲಾದ್‌ ಜೋಶಿ ಹೇಳಿಕೆಗೆ ಕಾಂಗ್ರೆಸ್‌ ಖಂಡನೆ | ಜೋಶಿ ವಿರುದ್ಧ ರಾಜ್ಯಪಾಲರಿಗೆ ದೂರು

ಜನಪ್ರತಿನಿಧಿ (ಬೆಂಗಳೂರು) : ಕೋವಿಡ್ ಭ್ರಷ್ಟಾಚಾರಗಳ ಕುರಿತು ಮೈಕಲ್ ಕುನ್ಹಾ ಅವರ ಆಯೋಗದ ವರದಿಯಲ್ಲಿ ಮಾಜಿ ಸಿಎಂ ಬಿಎಸ್ ವೈ ಹಾಗೂ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ ಗೆ ಶಿಫಾರಸ್ಸು ಮಾಡಿರುವ ಬೆನ್ನಲ್ಲೇ ಜಸ್ಟೀಸ್ ಕುನ್ಹಾ ಅವರನ್ನ ಕಾಂಗ್ರೆಸ್ ಏಜೇಂಟ್ ಎಂದು ಪ್ರಹ್ಲಾದ್ ಜೋಶಿ ನೀಡಿರುವ ಹೇಳಿಕೆಯನ್ನು ಕಾಂಗ್ರೆಸ್ ತೀವ್ರ ಖಂಡಿಸಿದೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ರಾಜ್ಯ ಸರ್ಕಾರದ ಮುಖ್ಯ ವಕ್ತಾರ ದಿನೇಶ್ ಗುಂಡೂರಾವ್ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಇಂದು(ಸೋಮವಾರ) ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.

ಜೋಶಿ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಕೆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಿವೃತ್ತ ನ್ಯಾಯಮೂರ್ತಿಯಾಗಿ ಜಸ್ಟೀಸ್ ಕುನ್ಹಾ ಅವರು ಅತ್ಯಂತ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದವರು. ಗೌರವಾನ್ವಿತರ ಬಗ್ಗೆ ಕೇಂದ್ರ ಸಚಿವರಾಗಿ ಪ್ರಲ್ಹಾದ್ ಜೋಶಿ ವಯಕ್ತಿಕ ನಿಂದನೆ ಮಾಡಿ ಮಾತನಾಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಪ್ರಲ್ಹಾದ್ ಜೋಶಿ ಅವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ತಮ್ಮ ಹೇಳಿಕೆಗೆ ಪ್ರಲ್ಹಾದ್ ಜೋಶಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಕೇಂದ್ರ ಸಚಿವರು ಎಂದಾಕ್ಷಣ ಏನು ಬೇಕಾದರು ಮಾತನಾಡಬಹುದು ಎಂಬ ಅಹಂಕಾರ ಪ್ರವೃತ್ತಿಯಲ್ಲಿ ಪ್ರಲ್ಹಾದ್ ಜೋಶಿಯವರಿದ್ದಾರೆ. ಇತ್ತಿಚೆಗೆ ಜೋಶಿ ಅವರು ಹೇಳಿಕೆಗಳು ಅಹಂಕಾರದಿಂದ ಕೂಡಿವೆ. ಜಸ್ಟೀಸ್ ಆಗಿದ್ದವರನ್ನ ಕಾಂಗ್ರೆಸ್ ಏಜೆಂಟ್ ಎಂದರೆ ಏನರ್ಥ.. ಜೋಶಿಯವರು ರಾಜಕಾರಣಿಗಳಾದ ನಮ್ಮ ಮೇಲೆ ಮಾತನಾಡಲಿ. ಅಥವಾ ಕಾನೂನು ಹೋರಾಟ ನಡೆಸಲಿ. ಆದರೆ ಗೌರವಾನ್ವಿತ ನ್ಯಾಯಮೂರ್ತಿಗಳ ವೈಯಕ್ತಿಕ ನಿಂಧನೆ ಸರಿಯಲ್ಲ ಎಂದು ಗುಂಡೂರಾವ್‌ ಹೇಳಿದ್ದಾರೆ.

ಕುನ್ಹಾ ಅವರ ಆಯೋಗ ಅಂತಿಮ ವರದಿ ಸಲ್ಲಿಸುವ ಮುನ್ನ ಅವರ ಮೇಲೆ ಒತ್ತಡ ತರುವ ಪ್ರಯತ್ನವನ್ನ ಪ್ರಲ್ಜಾದ್ ಜೋಶಿ ನಡೆಸಿಸುತ್ತಿದ್ದಾರೆ. ಕುನ್ಹಾ ಅವರನ್ನ ಕಾಂಗ್ರೆಸ್ ಏಜೆಂಟ್ ಎಂದಿರುವುದು ಒತ್ತಡ ತಂತ್ರದ ಒಂದು ಭಾಗ. ವರದಿಯನ್ನ ವಿಮರ್ಷಿಸಲಿ. ಆದರೆ ಕುನ್ಹಾ ಅವರ ವೈಯಕ್ತಿಕ ನಿಂದನೆ ಸರಿಯಲ್ಲ. ಪ್ರಲ್ಜಾದ್ ಜೋಶಿ ಒಬ್ಬ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದವರು, ನಮ್ಮ ತನಿಖಾ ಆಯೋಗಗಳು, ವ್ಯವಸ್ಥೆಗಳ ವಿರುದ್ಧ ಮಾತನಾಡುತ್ತಿರುವುದು ದುರಂತ. ಈ ರೀತಿ ನಿಂದನೆಗಳನ್ನ ಮಾಡಿದರೆ ಮುಂದೆ ಯಾರು ಕೂಡ ತನಿಖೆ ನಡೆಸುವ ಜವಾಬ್ದಾರಿ ತೆಗೆದುಕೊಳ್ಳಲು ಮುಂದೆ ಬರದಿರುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಜೋಶಿ ವಿರುದ್ಧ ವಾಗ್ದಾಳಿ ನಡೆಸಿದರು.

ಕಮಿಷನ್ inquiry act 1952 ಪ್ರಕಾರ ಪ್ರಲ್ಹಾದ್ ಜೋಶಿ ಅವರ ಹೇಳಿಕೆ ಕಾನೂನು ಬಾಹಿರವಾಗಿದೆ. 6 ತಿಂಗಳ ವರೆಗೆ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಹೀಗಾಗಿ ಈ ವಿಚಾರವನ್ನ ರಾಷ್ಟ್ರಪತಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲು ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದೆ. ರಾಜ್ಯಪಾಲರು ನಮ್ಮ ಅಹಾವಾಲುಗಳನ್ನ ತಾಳ್ಮೆಯಿಂದ ಆಲೀಸಿದ್ದು, ಈ ರೀತಿಯ ವೈಯಕ್ತಿಕ ಹೇಳಿಕೆಗಳನ್ನ ನೀಡುವುದು ಸರಿಯಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಇದೇ ವೇಳೆ ಹೇಳಿದರು.

https://x.com/dineshgrao/status/1855946871451402625

 

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!