spot_img
Sunday, February 15, 2026
spot_img

ಮೋದಿಯವರೇ, ನಿಮ್ಮ ಆರೋಪ ಸುಳ್ಳು ಅಂತಾದರೇ, ರಾಜಕೀಯದಿಂದ ಹಿಂದೆ ಸರಿಯಲು ಸಿದ್ಧರಿದ್ದೀರಾ ? : ಸಿದ್ದರಾಮಯ್ಯ ಸವಾಲು

ಜನಪ್ರತಿನಿಧಿ (ಹಾವೇರಿ) : ಪ್ರಧಾನಿ ನರೇಂದ್ರ ಮೋದಿ ಅವರೇ ನೀವು ಮಹಾರಾಷ್ಟ್ರದಲ್ಲಿ ನಿಂತು ನಮ್ಮ ಸರ್ಕಾರದ ವಿರುದ್ಧ ಮಾಡಿರುವ ಆರೋಪವನ್ನು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ತೇನೆ, ಒಂದು ವೇಳೆ ನೀವು ಮಾಡಿರುವ ಆರೋಪ ಸುಳ್ಳು ಅಂತಾದರೆ ರಾಜಕೀಯ ಜೀವನದಿಂದ ಹಿಂದೆ ಸರಿಯಲು ನೀವು ಸಿದ್ಧರಿದ್ದೀರಾ ? ಎಂದು ಸಿಎಂ ಸಿದ್ದರಾಮಯ್ಯ ಸವಾಲೆಸೆದಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ-2024ಕ್ಕೆ ಪ್ರಚಾರ ನಡೆಸಿದ್ದು, ಈ ವೇಳೆ ಕಾಂಗ್ರೆಸ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮಹಾರಾಷ್ಟ್ರ ಚುನಾವಣೆಗಳಿಗಾಗಿ ಕಾಂಗ್ರೆಸ್ ಕರ್ನಾಟಕದ ಮದ್ಯದಂಗಡಿ ಮಾಲೀಕರಿಂದ 700 ಕೋಟಿ ರೂಪಾಯಿಗಳವರೆಗೆ ಸಂಗ್ರಹಿಸಿದೆ ಎಂದು ಆರೋಪಿಸಿದ್ದರು.

ಮಾತ್ರವಲ್ಲದೇ ಈ ವೇಳೆ ಕಾಂಗ್ರೆಸ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮಹಾರಾಷ್ಟ್ರ ಚುನಾವಣೆಗಳಿಗಾಗಿ ಕಾಂಗ್ರೆಸ್ ಕರ್ನಾಟಕದ ಮದ್ಯದಂಗಡಿ ಮಾಲೀಕರಿಂದ 700 ಕೋಟಿ ರೂಪಾಯಿಗಳವರೆಗೆ ಸಂಗ್ರಹಿಸಿದೆ ಎಂದು ಆರೋಪಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ಆರೋಪಕ್ಕೆ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕೊನೆಯ ದಿನದ ಬಹಿರಂಗ ಪ್ರಚಾರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಆರೋಪ ಮಾಡುವುದು ದೊಡ್ಡದಲ್ಲ, ಆದರೆ ಅದಕ್ಕೆ ಬದ್ಧನಾಗಿ ನಿಲ್ಲಬೇಕು. ನಿಮ್ಮಿಂದ ಇದು ಸಾಧ್ಯವೇ? ನನ್ನ ಸವಾಲು ಸ್ವೀಕರಿಸಿ ನೋಡೋಣ ಎಂದು ಮೋದಿ ಅವರಿಗೆ ಸವಾಲು ಹಾಕಿದ್ದಲ್ಲದೇ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಗಳು ಒಂದಾ ಎರಡಾ? ಗುತ್ತಿಗೆ ಕಾಮಗಾರಿಯಲ್ಲಿ ಲಂಚ, ಸರ್ಕಾರಿ ನೇಮಕಾತಿಗಳಲ್ಲಿ ಭ್ರಷ್ಟಾಚಾರ, ಮಹಾಪುರುಷರ ಪ್ರತಿಮೆ ನಿರ್ಮಾಣದಲ್ಲಿ ಗೋಲ್ಮಾಲ್‌, ಮಕ್ಕಳು ತಿನ್ನುವ ಮೊಟ್ಟೆಯೂ ಕಳ್ಳತನ ಹೀಗೆ ಸರ್ಕಾರದ ವಿವಿಧ ಇಲಾಖೆಗಳು ಸ್ಪರ್ಧೆಗೆ ಬಿದ್ದವರಂತೆ ಹಗರಣಗಳ ಮೇಲೆ ಹಗರಣ ಮಾಡಿ ಖಜಾನೆ ಲೂಟಿ ಮಾಡಿದ್ದವು ಎಂದು ಸಿಎಂ ಆರೋಪಿಸಿದ್ದಾರೆ.

ಆದರೆ ಇವೆಲ್ಲವನ್ನೂ ಮೀರಿದ್ದು ಕೊರೊನಾ ಕಾಲದ ಭ್ರಷ್ಟಾಚಾರ. ಜನಸಾಮಾನ್ಯರು ಚಿಕಿತ್ಸೆ ಸಿಗದೆ ಹಾದಿಬೀದಿಯಲ್ಲಿ ಸಾಯುತ್ತಿರುವಾಗ ಮುಖ್ಯಮಂತ್ರಿ, ಆರೋಗ್ಯ ಸಚಿವರು ಜನರ ಹೆಣದ ಮೇಲೆ ಹಣ ಲೂಟಿ ಮಾಡಿದ್ದಾರೆ. ನ್ಯಾ. ಮೈಕಲ್‌ ಡಿʼಕುನ್ಹಾ ಅವರ ಆಯೋಗ ನೀಡಿರುವ ವರದಿಯಲ್ಲಿ ಪಿಪಿಇ ಕಿಟ್‌ ಖರೀದಿಯಲ್ಲಿ ನಡೆದಿರುವ ಅಕ್ರಮ ಬಯಲಾಗಿದೆ. ಸಾವಿರಾರು ಜನರ ಹತ್ಯಾಕಾಂಡ ನಡೆಸಿರುವ ಇಂಥವರು ಇಂದು ನಿಮ್ಮ ಮುಂದೆ ನಿಂತು ಮತ ಕೇಳುತ್ತಿದ್ದಾರೆ. ಯೋಚಿಸಿ ಮತ ನೀಡಿ ಎಂದು ಮತದಾರರಿಗೆ ಅವರು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!