spot_img
Sunday, February 15, 2026
spot_img

ಐಎಎಸ್, ಕೆಎಎಸ್ ಆಕಾಂಕ್ಷಿಗಳಿಗೆ ಕುಂದಾಪುರದಲ್ಲಿ ಒಂದು ದಿನದ ಕಾರ್ಯಾಗಾರ ! ಎಲ್ಲಿ, ಯಾವಾಗ ? ಈಗಲೇ ಈ ಸುದ್ದಿ ನೋಡಿ.

ಜನಪ್ರತಿನಿಧಿ (ಕುಂದಾಪುರ) : ಬಿಲ್ಲವ ಸಮಾಜ ಸೇವಾ ಸಂಘ (ರಿ.) ಕುಂದಾಪುರ ಮತ್ತು                                                                                    ಶ್ರೀ ನಾರಾಯಣಗುರು ಶೈಕ್ಷಣಿಕ & ಸಾಂಸ್ಕೃತಿಕ ಟ್ರಸ್ಟ್ (ರಿ)ಕುಂದಾಪುರ ಇವರ ನೇತೃತ್ವದಲ್ಲಿ  ಐಎಎಸ್ ದರ್ಶನ  ಸಂಸ್ಥೆಯ ಮುಖ್ಯಸ್ಥರಾದ ದರ್ಶನ್ ಗರ್ತಿ ಕೆರೆ ಹೆಬ್ರಿಯವರು ನಡೆಸಿಕೊಡುವ ಐಎಎಸ್, ಕೆಎಎಸ್ ಹಾಗು ತತ್ಸಮಾನ ಪರೀಕ್ಷೆಯ ಒಂದು ದಿನದ ಕಾರ್ಯಗಾರವನ್ನು ಆಯೋಜಿಸಲಾಗಿದೆ.

ಈ ಕಾರ್ಯಾಗಾರದಲ್ಲಿ ಭಾಗವಹಿಸಲು ಬಯಸುವವರು ಪ್ರವೇಶಾತಿ ಪಡೆದುಕೊಳ್ಳಬೇಕಾಗಿದೆ. ಪ್ರವೇಶಾತಿಗಾಗಿ ಬಿಲ್ಲವ ಸಂಘ ಕುಂದಾಪುರದ ಶ್ರೀ ನಾರಾಯಣಗುರು ಕಲ್ಯಾಣ ಮಂಟಪದ ಕಛೇರಿಯಲ್ಲಿ ಅರ್ಜಿಯನ್ನು ಪಡೆದುಕೊಳ್ಳಬಹುದಾಗಿದೆ. ಮೊದಲು ಅರ್ಜಿ ಸಲ್ಲಿಸಿದ 300 ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ. ಕಾರ್ಯಗಾರವು ದಿನಾಂಕ: 23. ನವೆಂಬರ್ ಶನಿವಾರ, ಮಧ್ಯಾಹ್ನ 1:00 ಗಂಟೆಗೆ ಶ್ರೀ ನಾರಾಯಣ ಗುರು ಸಭಾಭವನ, ಕುಂದಾಪುರದಲ್ಲಿ ನಡೆಯಲಿದೆ. ಅರ್ಜಿ ಪೂರ್ಣಗೊಳಿಸಿ ಕಛೇರಿಗೆ ಸಲ್ಲಿಸುವ ಕೊನೆಯ ದಿನಾಂಕ  17-11-2024 ಆಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಯಾರೆಲ್ಲ ಭಾಗವಹಿಸಬಹುದು : ಪ್ರಥಮ ವರ್ಷದ ಪದವಿ ಪೂರ್ವ ತರಗತಿಯಿಂದ ಅಂತಿಮ ವರ್ಷದ ಪದವಿ ತರಗತಿವರೆಗಿನ 2023-2024ರ PUC/2PUC/DEGREE ಹಾಗೂ 2022-2023  ಹಿಂದಿನ ವರ್ಷದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಅವಕಾಶ  (ಕುಂದಾಪುರ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರದ  ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ). ಹೆಚ್ಚಿನ ಮಾಹಿತಿಗೆ 7975312962 & 9945196693 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!