spot_img
Wednesday, April 1, 2026
spot_img

ಆಲೂರು ಶಾಲೆ : ಐದು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಕುಂದಾಪುರ: ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹಾಗೂ ವಿದ್ಯಾಸಮುದ್ರ ತೀರ್ಥ ಪೌಢಶಾಲೆ ಕಿದಿಯೂರು ಇವರ ಸಹಯೋಗದೊಂದಿಗೆ ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪೌಢ ಶಾಲಾ ಕ್ರೀಡಾ ಕೂಟದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೂರು ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿ 7ನೇ ತರಗತಿ ನಿಧಿಶ್ರೀ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ 600 ಮೀ ಓಟದಲ್ಲಿ ಪ್ರಣಮ್ ದ್ವಿತೀಯ ಸ್ಥಾನ ಹಾಗೂ 4×100 ರಿಲೇಯಲ್ಲಿ ಮನಿಷಾ, ನಿಧಿಶ್ರೀ, ಶ್ರಾವ್ಯ, ಪ್ರಥ್ವಿ ಆಚಾರ್ಯ ಪ್ರಥಮ ಸ್ಥಾನ ಪಡೆದು ಐದು ವಿದ್ಯಾರ್ಥಿಗಳು ಶಿವಮೊಗ್ಗದಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾರೆ.

ಅಲ್ಲದೆ ಬಾಲಕರ ವಿಭಾಗದ 4×100 ಮೀ ರಿಲೇಯಲ್ಲಿ ಪ್ರೀತಮ್, ಪ್ರಣಮ್, ಅದ್ವಿತ್, ಪ್ರಣಯ್ ತೃತೀಯ ಸ್ಥಾನಪಡೆದಿದ್ದಾರೆ. 600 ಮೀ ಓಟದಲ್ಲಿ ಮನಿಷಾ ತೃತೀಯ ಸ್ಥಾನ ಪಡೆದಿರುತ್ತಾಳೆ. ಈ ಹಿಂದೆ ಎಸ್.ಎಂ.ಟಿ ಪ್ರೌಢ ಶಾಲೆ ಮಾವಿನಕಟ್ಟೆ ಇಲ್ಲಿ ನಡೆದ ಬೈಂದೂರು ಶೈಕ್ಷಣಿಕ ತಾಲೂಕಿನ ಕ್ರೀಡಾಕೂಟದಲ್ಲಿ ಬಾಲಕ ಮತ್ತು ಬಾಲಕಿಯರ ಎರಡೂ ವಿಭಾಗದಲ್ಲಿ ಹೆಮ್ಮಾಡಿ ಹೋಬಳಿಯ ಆಲೂರು ಶಾಲೆ ಸಮಗ್ರ ಪ್ರಶಸ್ತಿ ಪಡೆದು ಒಂಬತ್ತು ವಿದ್ಯಾರ್ಥಿಗಳು ಸ್ವರ್ಣ ಪದಕದೊಂದಿಗೆ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದರು.

ವಿದ್ಯಾರ್ಥಿಗಳಿಗೆ ಮುಖ್ಯಶಿಕ್ಷಕಿ ಲೀನಾ ಕಾರ್ಡಿನ್ ಅವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ವೀರೇಂದ್ರ ಜೋಗಿ ತರಬೇತಿ ನೀಡಿದ್ದರು. ತಂಡದ ವ್ಯವಸ್ಥಾಪಕರಾಗಿ ದಿನಕರ ದೇವಾಡಿಗ, ಕುಸುಮ ಭಾಗವಹಿಸಿದ್ದರು. ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ದತ್ತಾತ್ರೇಯ ಭಟ್ ವಿದ್ಯಾರ್ಥಿಗಳೊಂದಿಗೆ ಸಹಕರಿಸಿದ್ದರು. ವಿಜೇತ ವಿದ್ಯಾರ್ಥಿವೃಂದವನ್ನು ಎಮ್.ಎಸ್ ಮಂಜ ಚಾರಿಟೇಬಲ್ ಟ್ರಸ್ಟ್, ಎಸ್.ಡಿ.ಎಮ್.ಸಿ, ಅಧ್ಯಾಪಕ ವೃಂದ, ಹಳೆ ವಿದ್ಯಾರ್ಥಿ ಸಂಘ ಹಾಗೂ ಪೋಷಕ ವೃಂದ ಅಭಿನಂದಿಸಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!