spot_img
Thursday, December 5, 2024
spot_img

ಕುಂದಾಪುರ ಭಂಡಾರ್ಕಾಸ್ ಕಾಲೇಜು: ಅಭಿನಂದನ್ ಶೆಟ್ಟಿ ಮತ್ತು ಯು.ಎಸ್ ಶೆಣೈ ಅವರಿಗೆ ಸನ್ಮಾನ

ಕುಂದಾಪುರ: ನವೆಂಬರ್ 4ರಂದು ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಅಭಿನಂದನ ಶೆಟ್ಟಿ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾಗಿರುವ ಯು.ಸುರೇಂದ್ರ ಶೆಣೈ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಅಭಿನಂದನ ಶೆಟ್ಟಿ ಮಾತನಾಡಿ ಯಶಸ್ಸು, ಹಣ ಸ್ಥಾನ ಮಾನ ಮತ್ತು ಸಂಪತ್ತುಗಿಂತ ಮೊದಲು ಬದುಕಲು ಕಲಿಯಬೇಕು. ನಿಮ್ಮ ಮುಂದಿನ ಭವಿಷ್ಯ ರೂಪಿಸುವ ಅಂಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಜೀವನವನ್ನು ಸಾರ್ಥಕ್ಯಗೊಳಿಸುವತ್ತ ಗಮನ ಇರಬೇಕು. ನಕಾರಾತ್ಮಕವಾದ ಡ್ರಗ್ಸ್ ಮತ್ತು ಮಾದಕ ಜಗತ್ತಿನ ಕುರಿತು ಜಾಗೃತರಾಗಿರಬೇಕು. ಅವುಗಳಿಂದ ದೂರವಿದ್ದು ನಿಮ್ಮ ಹಿರಿಯರು ಪೋಷಕರು ಮತ್ತು ಶಿಕ್ಷಕರ ಒಳ್ಳೆಯ ಆಶಯವನ್ನು ಪರಿಪೂರ್ಣವಾಗಿ ಪೂರ್ಣಗೊಳಿಸಿ. ಶಿಕ್ಷಣ ಎಲ್ಲವನ್ನೂ ಕೊಡುತ್ತದೆ. ನೀವು ಈ ಶಿಕ್ಷಣದ ಮೂಲಕ ಶಿಸ್ತು ಮತ್ತು ಸಂಯಮ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಆಡಳಿತ ಮಂಡಳಿಯ ಸದಸ್ಯರಾದ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾಗಿರುವ ಯು. ಎಸ್ ಶೆಣೈ ಮಾತನಾಡಿ ನೀತಿವಂತರಾಗಿ ಬದುಕಬೇಕು. ಪಾಠ ಮತ್ತು ಪಾಠೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ಹಿರಿಯರು ಸಂತೋಷ ಮತ್ತು ಗೌರವ ಪಡುವ ಹಾಗೆ ಬೆಳೆಯಿರಿ ಎಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ. ದೇವದಾಸ ಕಾಮತ್ ವಹಿಸಿದ್ದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ರಾಜೇಂದ್ರ ತೋಳಾರ್, ಸದಾನಂದ ಚಾತ್ರ ಉಪಸ್ಥಿತರಿದ್ದರು.

ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಮ್.ಗೊಂಡ ವಂದಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸತ್ಯನಾರಾಯಣ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ ಗೋಪಾಲ ಕೆ ಸನ್ಮಾನಿತರನ್ನು ಪರಿಚಯಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!