spot_img
Wednesday, April 1, 2026
spot_img

“ಹೆಜ್ಜೆ ಗೆಜ್ಜೆ” ಮೊಗವೀರ ಸಾಂಸ್ಕೃತಿಕ ಸಿಂಚನ 2024: ಪೋಸ್ಟರ್ ಬಿಡುಗಡೆ

 

ಕುಂದಾಪುರ, (ಜನಪ್ರತಿನಿಧಿ ವಾರ್ತೆ) ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆಯ ಹಿರಿತನದಲ್ಲಿ, ಜಿ ಶಂಕರ್ ಪ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ ಇವರ ಸಹಯೋಗದಲ್ಲಿ, ಮೊಗವೀರ ಯುವ ಸಂಘಟನೆ ರಿ, ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ. ಇವರ ಆತಿಥ್ಯದಲ್ಲಿ ಡಿಸೆಂಬರ್ 7-2024ರಂದು ಕುಂದಾಪುರ ಮೊಗವೀರ ಭವನದಲ್ಲಿ ನಡೆಯುವ ಉಡುಪಿ ಜಿಲ್ಲಾ ಮಟ್ಟದ ಅಂತರ್ ಘಟಕಗಳ ಸಂಸ್ಕೃತಿಕ ಕಾರ್ಯಕ್ರಮ “ಹೆಜ್ಜೆ ಗೆಜ್ಜೆ” ಮೊಗವೀರ ಸಾಂಸ್ಕೃತಿಕ ಸಿಂಚನ-2024 ಇದರ ಮೊದಲ ಹಂತದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದಲ್ಲಿ ನೇರವೇರಿತು.

ಈ ಸಂದರ್ಭದಲ್ಲಿ ಮೊಗವೀರ ಯುವ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಜಯಂತ್ ಅಮೀನ್ ಕೊಡಿ, ಮೊಗವೀರ ಮಹಾಜನ ಸೇವಾ ಸಂಘ ರಿ., ಮುಂಬೈ ಬಗ್ವಾಡಿ ಹೋಬಳಿಯ ಅಧ್ಯಕ್ಷರಾದ ರಾಜು ಮೆಂಡನ್ ವಂಡ್ಸೆ, ಮೊಗವೀರ ಮಹಾಜನ ಸೇವಾ ಸಂಘ ರಿ, ಬಗ್ವಾಡಿ ಹೋಬಳಿ ಕುಂದಾಪುರ ಶಾಖಾ ಅಧ್ಯಕ್ಷರು ಉದಯ್ ಕುಮಾರ್ ಹಟ್ಟಿಯಂಗಡಿ, ಹೆಮ್ಮಾಡಿ ಘಟಕದ ಅಧ್ಯಕ್ಷರಾದ ದಿನೇಶ್ ಬಿ ಕಾಂಚನ್, ಜಿಲ್ಲಾ ಸಂಘಟನೆಯ ನಿಕಟ ಪೂರ್ವ ಅಧ್ಯಕ್ಷರಾದ ರಾಜೇಂದ್ರ ಹಿರಿಯಡ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಪುತ್ರನ್, ಮೊಗವೀರ ಮಹಾಜನ ಸೇವಾ ಸಂಘ ರಿ., ಮುಂಬೈ ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಮಾಜಿ ಅಧ್ಯಕ್ಷರಾದ ಎಮ್.ಎಮ್ ಸುವರ್ಣ ಅರಾಟೆ, ಎನ್.ಎಚ್ ಬಗ್ವಾಡಿ, ಮಹಾಜನ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಗಣೇಶ್ ಮೆಂಡನ್ ಮುಂಬೈ, ಶಾಖಾ ಕಾರ್ಯದರ್ಶಿ ಪ್ರಭಾಕರ್ ಸೇನಾಪುರ, ಜಿಲ್ಲಾ ಮಾಜಿ ಉಪಾಧ್ಯಕ್ಷ ರಮೇಶ ಕುಂದರ್ ಕೋಟ, ಜಿಲ್ಲಾ ಉಪಾಧ್ಯಕ್ಷರು ಹಾಗೂ ಹೆಮ್ಮಾಡಿ ಘಟಕದ ಉಸ್ತುವಾರಿ ರವೀಶ್ ಎಸ್ ಕೊರವಡಿ, ನಾಣು ಡಿ ಚಂದನ್ ಮುಂಬೈ, ಹೆಮ್ಮಾಡಿ ಘಟಕ ಸಾಂಸ್ಕೃತಿಕ ಕಾರ್ಯದರ್ಶಿ ಜಯಂತ್ ಕುಂದರ್, ಘಟಕದ ಕಾರ್ಯದರ್ಶಿ ಜಗದೀಶ್ ನೆಂಪು, ಬಗ್ವಾಡಿ ಹೋಬಳಿಯ ಸ್ತ್ರೀಶಕ್ತಿ ಅಧ್ಯಕ್ಷೆ ಶ್ಯಾಮಲಾ ಗೋಪಾಲ ಚಂದನ್, ಹೆಮ್ಮಾಡಿ ಘಟಕದ ಮಾಜಿ ಅಧ್ಯಕ್ಷರುಗಳಾದ ರಾಜು ಎನ್ ಶ್ರೀಯಾನ್, ವಾಸು ಜಿ ನಾಯ್ಕ್, ಮಾಜಿ ಗೌರವ ಅಧ್ಯಕ್ಷ ಆನಂದ್ ನಾಯ್ಕ್ ದೇವಲಕುಂದ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶೋಭಾ ಜಿ ಪುತ್ರನ್, ಹಾಗೂ ಸರ್ವ ಪದಾಧಿಕಾರಿಗಳು, ಮೊಗವೀರ ಮಹಾಜನ ಸೇವಾ ಸಂಘ ರಿ ಮುಂಬೈ ಬಗ್ವಾಡಿ ಹೋಬಳಿ ಸದಸ್ಯರು ಹಾಗೂ ಕುಂದಾಪುರ ಶಾಖಾ ಪದಾಧಿಕಾರಿಗಳು, ಬಗ್ವಾಡಿ ಹೋಬಳಿಯ ಸ್ತ್ರಿಶಕ್ತಿಯ ಸದಸ್ಯರುಗಳು ಉಪಸ್ಥಿತರಿದ್ದರು.

ಹೆಮ್ಮಾಡಿ ಘಟಕದ ಗೌರವ ಅಧ್ಯಕ್ಷರು ಮತ್ತು ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆಯ ಸಾಂಸ್ಕೃತಿಕ ಕಾರ್ಯದರ್ಶಿ ಲೋಹಿತಾಶ್ವ ಆರ್ ಕುಂದರ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!