spot_img
Wednesday, April 1, 2026
spot_img

ಉಡುಪಿ : ಗ್ರಾಮ ಪಂಚಾಯತ್‌ ಗಳ ಉಪ ಚುನಾವಣೆಗೆ ವೇಳಾಪಟ್ಟಿ ಪ್ರಕಟ

ಜನಪ್ರತಿನಿಧಿ (ಉಡುಪಿ) : ಉಡುಪಿ ಜಿಲ್ಲೆಯ ಗ್ರಾಮ ಪಂಚಾಯತ್‌ಗಳಲ್ಲಿ ಸದಸ್ಯರ ರಾಜೀನಾಮೆ, ನಿಧನದ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆಯ ವೇಳಾಪಟ್ಟಿ ನಿಗದಿಗೊಳಿಸಿ ರಾಜ್ಯ ಚುನಾವಣಾ ಆಯೋಗ ಆದೇಶಿಸಿದೆ.

ಕುಂದಾಪುರ ತಾಲೂಕಿನ 35 -ಅ ಮಾಸೆಬೈಲು ಗ್ರಾಮ ಪಂಚಾಯತಿಯ 1 ಸ್ಥಾನ, ಬ್ರಹ್ಮಾವರ ತಾಲೂಕಿನ ಕೋಟ ಗ್ರಾಮ ಪಂಚಾಯತಿಯ 1 ಸ್ಥಾನ, ಉಡುಪಿ ತಾಲೂಕಿನ ಬೊಮ್ಮರ ಬೆಟ್ಟು ಗ್ರಾಮ ಪಂಚಾಯತಿಯ 1 ಸ್ಥಾನ, 13-ಕೊಡಿಬೆಟ್ಟು ಗ್ರಾಮ ಪಂಚಾಯತಿಯ 1 ಸ್ಥಾನ, ಕಾರ್ಕಳ ತಾಲೂಕಿನ ಈದು ಗ್ರಾಮ ಪಂಚಾಯತಿಯ 1 sಸ್ಥಾನ, ನಲ್ಲೂರು ಗ್ರಾಮ ಪಂಚಾಯತಿಯ 1 ಸ್ಥಾನ, ನಿಟ್ಟೆ ಗ್ರಾಮ ಪಂಚಾಯತಿಯ 1 ಸ್ಥಾನ, ನೀರೆ ಗ್ರಾಮ ಪಂಚಾಯತಿಯ 3 ಸ್ಥಾನ, 5-ಕೆರ್ವಾಶೆ ಗ್ರಾಮ ಪಂಚಾಯತಿಯ 1 ಸ್ಥಾನ ಹಾಗೂ ಕಡ್ತಲ ಗ್ರಾಮ ಪಂಚಾಯತಿಯ 1 ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ವೇಳಾಪಟ್ಟಿಯನ್ನು ನಿಗಧಿಪಡಿಸಿ ರಾಜ್ಯ ಚುನಾವಣಾ ಆಯೋಗ ಆದೇಶಸಿದೆ.

ನಾಮಪತ್ರ ಸಲ್ಲಿಸಲು 2024 ರ ನವೆಂಬರ್ 6 ರಿಂದ ಪ್ರಾರಂಭವಾಗಲಿದ್ದು, ನವೆಂಬರ್ 12 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನ. ನವೆಂಬರ್ 13 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನವೆಂಬರ್ 15 ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳುವ ಕೊನೆಯ ದಿನವಾಗಿದೆ.

ಮತದಾನ ಅವಶ್ಯವಿದ್ದರೆ ನವೆಂಬರ್ 23ರ ಶನಿವಾರದಂದು ಮತದಾನವು ಬೆಳಗ್ಗೆ 7ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ.

ಮರು ಮತದಾನ ಅವಶ್ಯವಿದ್ದರೆ ಮರು ಮತದಾನವನ್ನು ನವೆಂಬರ್ 25 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಮತ ಎಣಿಕೆಯು ನವೆಂಬರ್ 26 ರಂದು ಬೆಳಗ್ಗೆ 8 ಗಂಟೆಯಿಂದ ತಾಲ್ಲೂಕಿನ ಕೇಂದ್ರ ಸ್ಥಳಗಳಲ್ಲಿ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!