spot_img
Wednesday, April 1, 2026
spot_img

ಚಿತ್ತೂರು ಶಾಲಾ ಶಿಕ್ಷಕ ಗುರುಪ್ರಸಾದ್‌ಗೆ ‘ಗುರುಶ್ರೀ’ ಪ್ರಶಸ್ತಿ

ಕುಂದಾಪುರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ತೂರು ಇಲ್ಲಿನ ಸಹಶಿಕ್ಷಕರಾದ ಗುರುಪ್ರಸಾದ್ ಇವರಿಗೆ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆ ನೀಡಿರುವ ಗುರು ಶ್ರೀ ಪ್ರಶಸ್ತಿ ಲಭಿಸಿದೆ.

ಬೈಂದೂರು ವಲಯದ ಪ್ರತಿಭಾವಂತ ಶಿಕ್ಷಕರಾದ ಇವರು ವಿವಿಧ ಪ್ರಕಾರದ ವಾದ್ಯಗಳನ್ನು ನುಡಿಸಬಲ್ಲರು; ಹಾಡಬಲ್ಲರು. ವಾದ್ಯ ಸಂಗೀತದಲ್ಲಿ ಒಂದು ಬಾರಿ ರಾಷ್ಟ್ರ ಮಟ್ಟಕ್ಕೆ ನಾಲ್ಕು ಬಾರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಸ್ತುತ ವರ್ಷ ಶಟಲ್ ಬ್ಯಾಡ್ಮಿಂಟನ್, ಕಿರು ನಾಟಕ, ಜನಪದ ನೃತ್ಯದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವುದು ಇವರ ಶ್ರೇಷ್ಠ ಸಾಧನೆ. ತರಗತಿ ಕೋಣೆಯಲ್ಲಿ ನಿರಂತರ ಹೊಸತನವನ್ನು ಯೋಚಿಸುವ ಶಿಕ್ಷಕರಾಗಿರುವ ಇವರು ಮಕ್ಕಳಿಗೆ ಅಚ್ಚುಮೆಚ್ಚಿನ ಶಿಕ್ಷಕ. ಇವರು ಸಮಾಜದ ಅಪೇಕ್ಷಿತ ಪರಿಸ್ಥಿತಿಗೆ ಅನುಗುಣವಾಗಿ ಪಾಠ ಪ್ರವಚನಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಪ್ರತಿಭಾವಂತ ಶಿಕ್ಷಕರು. ತನ್ನ ಪ್ರತಿಭೆಗಳನ್ನು ತನ್ನ ವಿದ್ಯಾರ್ಥಿಗಳಿಗೆ ಪ್ರಾಮಾಣಿಕವಾಗಿ ಕಲಿಸುವ ಉತ್ತಮ ಶಿಕ್ಷಕರಾಗಿ, ತಾಳ್ಮೆ ಸಹನೆಯಿಂದ ಎಲ್ಲರೊಡನೆ ಗೌರವಿತ ಸಂಬಂಧದಿಂದ ಬೆರೆಯುವ ಸದ್ಗುಣಿಯಾಗಿ ಶಾಲಾ ಪಾಠ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕ್ರಿಯಾಶೀಲ ಶಿಕ್ಷಕರಾಗಿ ಮಕ್ಕಳಿಗೆ ಪೋಷಕರಿಗೆ ಊರಿನವರಿಗೆ ಅಚ್ಚುಮೆಚ್ಚಿನ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರು, ಇವರ ಕಾರ್ಯತತ್ಪರತೆಗೆ, ಪ್ರಾಮಾಣಿಕ ಸೇವೆಗೆ ಪ್ರಶಸ್ತಿ ಲಭಿಸಿರುವುದು ಆರ್ಹವಾಗಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!