spot_img
Wednesday, January 22, 2025
spot_img

ವಕ್ಪ್ ಆಸ್ತಿ ವಿವಾದ : ಬಿಜೆಪಿ ಸರ್ಕಾರವೇ ನೇರ ಕಾರಣ : ವಿಕಾಸ್‌ ಹೆಗ್ಡೆ ಆರೋಪ

ಜನಪ್ರತಿನಿಧಿ (ಉಡುಪಿ) : ವಕ್ಫ್ ಆಸ್ತಿ ಹೆಸರಿನ ಗೊಂದಲಗಳಿಗೆ ಹಿಂದಿನ ಬಿಜೆಪಿ ಸರ್ಕಾರ ಕಾರಣ. ಅದೆಷ್ಟೋ ದೇವಸ್ಥಾನ, ಮಠ, ಮಂದಿರಗಳ ಹೆಸರಿನಲ್ಲಿ ಅದೆಷ್ಟೋ ಎಕ್ರೆಗಟ್ಟಲೆ ಆಸ್ತಿ ಇದೆ. ಆದರೆ ಅದರಲ್ಲಿ ಹೆಚ್ಚಿನವು ಖಾಸಗಿಯವರ ವಶದಲ್ಲಿ ಇದೆ ಅದೇ ರೀತಿ ವಕ್ಫ್ ಹೆಸರಿನಲ್ಲಿ ಅದೆಷ್ಟೋ ಆಸ್ತಿಯಿದೆ ಅದೂ ಕೂಡ ಖಾಸಗಿಯವರ ವಶದಲ್ಲಿ ಇದೆ. ಅನಾದಿಕಾಲದಿಂದಲೂ ಕೃಷಿ ಮಾಡಿಕೊಂಡಿರುವ, ಮನೆ, ಕೊಟ್ಟಿಗೆ ಇತ್ಯಾದಿ ಕಟ್ಟಿಕೊಂಡಿರುವವರನ್ನು ಯಾವುದೇ ಕಾರಣಕ್ಕೂ ಒಕ್ಕಲ್ಲೆಬ್ಬಿಸುವ ಕೆಲಸ ಆಗಲೇ ಬಾರದು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಹೇಳಿದ್ದಾರೆ.

ಪಹಣಿಯಲ್ಲಿ ಹೊಸದಾಗಿ ವಕ್ಫ್ ಹೆಸರನ್ನು ನಮೂದು ಮಾಡುವುದು ಕೂಡ ಅಕ್ಷಮ್ಯ ಇದಕ್ಕೆ ಮೂಲ ಕಾರಣ ಹಿಂದಿನ ಬಿಜೆಪಿ ಸರ್ಕಾರ. ಬಿಜೆಪಿ ಸರ್ಕಾರ ಇರುವಾಗಲೇ ಅತೀ ಹೆಚ್ಚು ರೈತರ ಪಹಣಿಯಲ್ಲಿ ವಕ್ಫ್ ಹೆಸರು ನಮೂದು ಆಗಿತ್ತು, ಇವತ್ತಿನ ಎಲ್ಲಾ ಗೊಂದಲಗಳಿಗೆ ಹಿಂದಿನ ಬಿಜೆಪಿ ಸರ್ಕಾರವೇ ಕಾರಣ. ಇವತ್ತು ಪಹಣಿಯಲ್ಲಿ ಹೊಸದಾಗಿ ವಕ್ಫ್ ಹೆಸರು ಸೇರ್ಪಡೆ ಆಗಿರುವುದರಿಂದ ಜನಸಾಮಾನ್ಯರು ಆತಂಕಕ್ಕೆ ಈಡಾಗಿದ್ದಾರೆ. ರಾಜ್ಯ ಸರ್ಕಾರ ಯಾರೂ ಆತಂಕ ಪಡಬೇಕಾದ ಅವಶ್ಯಕತೆ ಇರುವುದಿಲ್ಲ ಎನ್ನುವುದರ ಮೂಲಕ ಜನರ ಆತಂಕ ದೂರ ಮಾಡಿದೆ, ಆದಷ್ಟು ಬೇಗ ರಾಜ್ಯ ಸರ್ಕಾರ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಅವರು ಪತ್ರಿಕಾ ಹೇಳಿಕೆಯ ಮೂಲಕ ಆಗ್ರಹಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!