spot_img
Sunday, February 15, 2026
spot_img

ಮುಖ್ಯಮಂತ್ರಿಯಾಗಿ ವಿಪರೀತ ಭ್ರಷ್ಟಾಚಾರ ಮಾಡಿ ಅಧಿಕಾರ ಕಳೆದುಕೊಂಡವರು ಬಸವರಾಜ್ ಬೊಮ್ಮಾಯಿ :‌ ಸಿದ್ದರಾಮಯ್ಯ ವಾಗ್ದಾಳಿ

ಜನಪ್ರತಿನಿಧಿ (ಬೆಂಗಳೂರು) : ಮುಖ್ಯಮಂತ್ರಿಯಾಗಿ ವಿಪರೀತ ಭ್ರಷ್ಟಾಚಾರ ಮಾಡಿ ಅಧಿಕಾರ ಕಳೆದುಕೊಂಡಿದ್ದ ಬಸವರಾಜ್‌ ಬೊಮ್ಮಾಯಿ ಅವರು ನರೇಂದ್ರ ಮೋದಿ ಅವರ ಹೆಸರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ, ಸ್ವಂತ ಬಲದಿಂದ ಅಲ್ಲ. ಬೊಮ್ಮಾಯಿ ಸಿಕ್ಕಾಪಟ್ಟೆ ಲೂಟಿ ಮಾಡಿ ಹಣ ತುಂಬಿಕೊಂಡಿದ್ದಾರಲ್ಲಾ ಅದನ್ನು ಹಂಚೋಕೆ ಬರ್ತಾರೆ, ಹಂಚಲಿ ಬಿಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಚಿಲ್ಲೂರು ಬಡ್ನಿ ಗ್ರಾಮದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ರೈತರ ಕಷ್ಟ ಸುಖ ಗೊತ್ತಿಲ್ಲದ, ಹಳ್ಳಿ ಬದುಕು ಹೇಗಿರುತ್ತೆ ಎನ್ನುವುದೇ ಗೊತ್ತಿಲ್ಲದ ಬೊಮ್ಮಾಯಿ ಅವರ ಪುತ್ರ ಗೆದ್ದರೆ ಅವರು ನಿಮ್ಮ ಕೈಗೆ ಸಿಗ್ತಾರಾ? ನಿಮ್ಮ ಕಷ್ಟ ಕೇಳಿಸಿಕೊಳ್ತಾರಾ? ಬಡ ಜನರ ಬದುಕಿನ‌ ಕಷ್ಟಗಳೇ ಗೊತ್ತಿಲ್ಲದ ಶ್ರೀಮಂತಿಕೆಯ ಮಗನನ್ನು ಗೆಲ್ಲಿಸಿದರೆ ಕ್ಷೇತ್ರಕ್ಕೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಹೇಳಿದರು.

ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ, ಕ್ಷೇತ್ರಕ್ಕೆ ಏನಾದರೂ ಮಾಡಿದ್ದಾರಾ? ಮಾಡಿಲ್ಲ ಅನ್ನೋ ಕಾರಣಕ್ಕೆ ತಾನೆ ಅವರನ್ನು ಮನೆಗೆ ಕಳುಹಿಸಿದ್ದು. ಈಗ ಜನರ ಕಷ್ಟಗಳೇ ಗೊತ್ತಿಲ್ಲದ ಮಗನನ್ನು ಮುಂದೆ ಬಿಟ್ಟಿದ್ದಾರೆ. ಅಪ್ಪನಿಂದಲೇ ಕ್ಷೇತ್ರದ ಅಭಿವೃದ್ಧಿ ಆಗಲಿಲ್ಲ. ಇನ್ನು ಮಗನಿಂದ ಅಭಿವೃದ್ಧಿ ಆಗುತ್ತದಾ ? ಎಂದು ಪ್ರಶ್ನೆ ಕೇಳಿದರು.

ರೈತರ ಸಾಲ ಮನ್ನಾ ಮಾಡಿ ಎಂದು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೇಳಿದರೆ, ನಮ್ಮ ಬಳಿ ನೋಟು ಪ್ರಿಂಟ್ ಮಾಡುವ ಮೆಷಿನ್ ಇದೆಯಾ ಎಂದು ಕೇಳಿದ್ದರು. ಆದರೆ ನಾನು ರೈತರ ಸಾಲ ಮನ್ನಾ ಮಾಡಿದ್ದೆ. ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಶ್ರೀಮಂತರ ₹16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಆದರೆ ರೈತರ ಸಾಲ ಮನ್ನಾ ಮಾಡಲಿಲ್ಲ. ಕಾಂಗ್ರೆಸ್ಸಿನ ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದ ಕಾಲದಲ್ಲಿ ರೈತರ ಸಾಲ ಮನ್ನಾ ಮಾಡಿದ್ದರು. ಕಾಂಗ್ರೆಸ್ ಮಾತ್ರ ರೈತರ ಸಾಲ ಮನ್ನಾ ಮಾಡುವ ಚರಿತ್ರೆ ಹೊಂದಿದೆ ಎಂದು ಹೇಳಿದರು.

ನರೇಂದ್ರ ಮೋದಿ ಅವರು ದೇಶದ ಜನರಿಗೆ ಅನುಕೂಲ ಆಗುವಂತಹ ಒಂದೇ ಒಂದು ಕಾರ್ಯಕ್ರಮ ಮಾಡಿದ ಉದಾಹರಣೆ ನಿಮಗೆ ಗೊತ್ತಿದೆಯಾ? ಮತ್ತೆ ಯಾಕೆ ಈ ರಾಜ್ಯ ಬಿಜೆಪಿ ಪಕ್ಷಕ್ಕೆ ಮತ ಹಾಕಬೇಕು?  ನಾವು ರಾಜ್ಯದ 6 ಕೋಟಿ ಜನರಿಗೆ 56 ಸಾವಿರ ಕೋಟಿ ರೂಪಾಯಿಯನ್ನು ಗ್ಯಾರಂಟಿ ಯೋಜನೆಗಳ ಮೂಲಕ ಅವರ ಖಾತೆಗೆ ನೇರವಾಗಿ ಹಾಕುತ್ತಿದ್ದೇವೆ. ಭಾರತೀಯ ಜನತಾ ಪಾರ್ಟಿ ಅವರು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಏಕೆ ಕೊಡುತ್ತಿಲ್ಲ? ದಮ್ಮಿದ್ರೆ-ತಾಕತ್ತಿದ್ರೆ ಖ್ಯಾತಿಯ ಬೊಮ್ಮಾಯಿ ಏಕೆ ರಾಜ್ಯದ ಜನರಿಗೆ ಅನುಕೂಲ ಮಾಡಲಿಲ್ಲ? ಎಂದು ಕೇಳಿದರು.

ಏನಾದ್ರೂ ಮಾಡಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ತಾವು ಅಧಿಕಾರಕ್ಕೆ ಬರಬಹುದು ಎಂದು ಬೊಮ್ಮಾಯಿ ಕನಸು ಕಾಣುತ್ತಿದ್ದಾರೆ. ನಿಮ್ಮ ಕನಸು ನನಸಾಗಲ್ಲ ಬೊಮ್ಮಾಯಿಯವರೇ.  ನನಗೆ ದಮ್ಮು, ತಾಕತ್ತು ಕೊಡೋರು ರಾಜ್ಯದ ಜನರು. ರಾಜ್ಯದ ಮಹಿಳೆಯರು. ರಾಜ್ಯದ ಆರ್ಥಿಕತೆಗೆ ದಮ್ಮು-ತಾಕತ್ತು ಕೊಡೋರು ನೀವು, ನೀವು ಕಟ್ಟುವ ತೆರಿಗೆ  ಹಣದಿಂದ ತಾಕತ್ತು, ದಮ್ಮು ಬರ್ತದೆ. ಈ ಬಸವರಾಜ ಬೊಮ್ಮಾಯಿಗೆ ಇಷ್ಟೂ ತಿಳುವಳಿಕೆ ಇಲ್ವಲ್ಲಾ ಏನ್ ಮಾಡೋದು? ಎಂದು ಹೇಳಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!