spot_img
Wednesday, April 1, 2026
spot_img

‘ಹಿಂದಿ ಭಾಷೆಗೆ ಮಾತ್ರ ಯಾಕೆ ವಿಶೇಷ ಪ್ರಾಮುಖ್ಯತೆ ? : ʼಸುಪ್ರೀಂʼ ಪ್ರಶ್ನೆ | ಹಿಂದಿಯಲ್ಲೂ ಕಲಾಪ ನಡೆಸಬೇಕೆಂದು ಕೋರಿದ್ದ ಅರ್ಜಿ ತಿರಸ್ಕರಿಸಿದ ʼಸುಪ್ರೀಂʼ !

ಜನಪ್ರತಿನಿಧಿ (ನವ ದೆಹಲಿ) : ಸುಪ್ರೀಂ ಕೋರ್ಟ್‌ ಕಲಾಪಗಳು ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಇರಬೇಕು ಎನ್ನುವ ಸಂವಿಧಾನದ 348 (1)ನೇ ವಿಧಿಯನ್ನು ಪ್ರಶ್ನಿಸಿ, ಹಿಂದಿ ಭಾಷೆಯಲ್ಲೂ ಕಲಾಪ ನಡೆಸಬೇಕು ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್‌) ಅರ್ಜಿಯನ್ನು ಇಂದು (ಸೋಮವಾರ) ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಲೈವ್ ಲಾವರದಿ : ಸುಪ್ರೀಂ ಕೋರ್ಟ್‌ ನ ಮುಖ್ಯ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲ ಹಾಗೂ ಮನೋಜ್ ಮಿಶ್ರಾ ಈ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದರು.

‘ಹಿಂದಿ ಭಾಷೆಗೆ ಮಾತ್ರ ಯಾಕೆ ವಿಶೇಷ ಪ್ರಾಮುಖ್ಯತೆ’ ಎಂದು ಅರ್ಜಿದಾರರಿಗೆ ಸಿಜೆಐ ಚಂದ್ರಚೂಡ್ ಪ್ರಶ್ನಿಸಿದರು. ಅಲ್ಲದೆ ಸುಪ್ರೀಂ ಕೋರ್ಟ್‌ನಲ್ಲಿ ವೈವಿಧ್ಯತೆ ಇರುವ ದೇಶದ ಎಲ್ಲಾ ರಾಜ್ಯಗಳ ಅರ್ಜಿಗಳೂ ಸಲ್ಲಿಕೆಯಾಗುತ್ತವೆ. ಹಾಗಾದರೆ ನಾವು ಸಂವಿಧಾನದಲ್ಲಿ ಮಾನ್ಯತೆ ಲಭಿಸಿರುವ ಎಲ್ಲಾ ಭಾಷೆಗಳಲ್ಲೂ ಕಲಾಪ ನಡೆಸಬೇಕಾ? ಅದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ಸಂವಿಧಾನದ 348(1) ವಿಧಿಯ ಸಿಂಧುತ್ವವನ್ನು ನೀವು ಹೇಗೆ ಪ್ರಶ್ನಿಸಿದ್ದೀರಿ. ಅದು ಸಂವಿಧಾನ ಮೂಲ ಭಾಗವಾಗಿದೆ’ ಎಂದು ಚಂದ್ರಚೂಡ್ ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿರುವ ಭಾಷೆಯ ಸಮಸ್ಯೆಯು ನ್ಯಾಯದ ನಿರಾಕರಣೆಗೆ ಕಾರಣವಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.

ಹೆಚ್ಚಿನ ವಿಚಾರಣೆಗೆ ನಿರಾಕರಿಸಿದ ನ್ಯಾಯಪೀಠ, ಅರ್ಜಿಯನ್ನು ತಿರಸ್ಕರಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!