spot_img
Wednesday, November 19, 2025
spot_img

ನ.3ರಂದು ಕೋಣಿಯಲ್ಲಿ ಶ್ರೀ ಗುರು ಟಿಂಬರ್ & ಫರ್ನಿಚರ್‍ಸ್ ಉದ್ಘಾಟನೆ

ಕುಂದಾಪುರ: ಕುಂದಾಪುರ ತಾಲೂಕು ಕೋಣಿ ಗ್ರಾಮ ಪಂಚಾಯತ್ ಹತ್ತಿರ ಶ್ರೀ ಗುರು ಟಿಂಬರ್ & ಫರ್ನಿಚರ್‍ಸ್ ನವಂಬರ್ ೩ ಆದಿತ್ಯವಾರ ಬೆಳಿಗ್ಗೆ 10-30ಕ್ಕೆ ಉದ್ಘಾಟನೆಗೊಳ್ಳಲಿದೆ.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟನೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದುಬೈ ಉದ್ಯಮಿ ಹೆಗ್ಗುಂಜೆ ವಿಶ್ವನಾಥ ಹೆಗ್ಡೆ ವಹಿಸಲಿದ್ದಾರೆ.

ಶಾಸಕ ಕಿರಣ್ ಕುಮಾರ್ ಕೊಡ್ಗಿ, ಗುರುರಾಜ ಗಂಟಿಹೊಳೆ, ಜಯರತನ್ ಸೇವಾ ಟ್ರಸ್ಟ್ ಟ್ರಸ್ಟಿ ಮೊಳಹಳ್ಳಿ ದಿನೇಶ ಹೆಗ್ಡೆ, ಕುಂದಾಪುರ ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ, ಮಾಜಿ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್, ಕೋಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ ಭಂಡಾರಿ, ಗೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯೆ ಶ್ರೀಲತಾ ಸುರೇಶ ಶೆಟ್ಟಿ, ವಿಘ್ನೇಶ್ವರ ಪಾಲಿ ಪ್ರೊಡೆಕ್ಟ್ ಬೀಜಾಡಿ ಇದರ ಉದ್ಯಮಿ ಸುರೇಶ ಬೆಟ್ಟಿನ್, ಎಂ.ಡಿ.ಎಸ್ ಗುತ್ತಿಗೆದಾರರಾದ ಮ್ಯಾತಿವ್ ಡಿ ಸೋಜ, ಶಾಫಿಹಾಜಿ ಟಿಂಬರ್ ಟ್ರಡಿಂಗ್ ಕಂಪೆನಿ ಕೇರಳ ಇದರ ಎಚ್.ಎ.ಶಾಫಿಹಾಜಿ, ವಿಶ್ವಕರ್ಮ ಕರಕುಶಲ ಸಂಘ ಕುಂದಾಪುರ ಅಧ್ಯಕ್ಷರಾದ ಮಧುಕರ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಮಂಕಳ ಎಸ್.ವೈದ್ಯ, ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಗಿರಿಜಾ ಟೈಲ್ಸ್ ವರ್ಕ್ಸ್‌ನ ಜಯಕರ್ ಶೆಟ್ಟಿ, ಕೋಣಿ ಗ್ರಾ.ಪಂ.ಸದಸ್ಯ ದಿವಾಕರ ಶೆಟ್ಟಿ, ಕೋಣಿ ಗ್ರಾ.ಪಂ. ಉಪಾಧ್ಯಕ್ಷೆ ಸೌಮ್ಯ ಮೊಗವೀರ, ಬೀಜಾಡಿ ಗ್ರಾ.ಪಂ. ಅಧ್ಯಕ್ಷರಾದ ಪ್ರಕಾಶ್ ಜಿ.ಪೂಜಾರಿ ಶುಭಹಾರೈಸಲಿದ್ದಾರೆ.

ಶ್ರೀ ಗುರು ಟಿಂಬರ್ & ಫರ್ನಿಚರ್‍ಸ್ ಇಲ್ಲಿ ಉತ್ಕೃಷ್ಟ ಗುಣಮಟ್ಟಕ್ಕೆ ಒತ್ತು ನೀಡಲಾಗಿದೆ. ಪ್ರೀಮಿಯಂ ಗುಣಮಟ್ಟದ ಮರದ ಮಾರಾಟ, ಪ್ರೀಮಿಯಂ ಗುಣಮಟ್ಟದ ಮರವನ್ನು ಆರಿಸಿ ಮತ್ತು ಪೀಠೋಪಕರಣಗಳನ್ನು ನಿರ್ಮಿಸಿ ಕೊಡಲಾಗುವುದು. ಸಾಗುವನಿ, ಕಲಂಬೋಗಿ, ಬಿಲವರ, ಹೊನ್ನೆ, ಬೋಗಿ, ಹುನಲ್, ಆಕೇಶಿಯಾ, ಹಲಸು, ನೀಲಗಿರಿ ಎಲ್ಲಾ ತರಹದ ಕಟ್ ಸೈಜ್, ಮರದ ದಿಮ್ಮಿ ಹಾಗೂ ಬ್ಲಾಕ್ಸ್ ದೊರೆಯುತ್ತದೆ.

ಬಿಲ್ಡಿಂಗ್ ಸೆಂಟರಿಂಗ್ ವರ್ಕ್‌ಗೆ ಬೇಕಾಗುವ ಮಾವು, ದೂಪದ ಮರ ಹಾಗೂ ಊರು ಸಾಗುವನಿ ಮರಗಳು ದೊರೆಯುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಮಾಹಿತಿಗೆ 8904366129, 9916229913 ಸಂಪರ್ಕಿಸಬಹುದು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!