Sunday, November 3, 2024

ಕುಂದಾಪುರ : ಕೋಡಿ ಬೀಚ್‌ ನಲ್ಲಿ ಈಜಲು ಹೋದ ಇಬ್ಬರು ನೀರು ಪಾಲು !

ಜನಪ್ರತಿನಿಧಿ (ಕುಂದಾಪುರ) : ತಾಲೂಕಿನ ಕೋಡಿ ಬೀಚ್‌ ನಲ್ಲಿ ಈಜಲು ಹೋಗಿದ್ದ ಇಬ್ಬರು ನೀರುಪಾಲಾದ ಘಟನೆ ಇಂದು(ಶನಿವಾರ) ಬೆಳಗ್ಗೆ ನಡೆದಿದೆ.

ಇಬ್ಬರ ಪೈಕಿ ಒಬ್ಬರ ಮೃತದೇಹ ಪತ್ತೆಯಾಗಿದೆ. ನೀರು ಪಾಲಾಗಿರುವ ಇನ್ನೊಬ್ಬ ವ್ಯಕ್ತಿಯ ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ತಿಳಿದು ಬಂದಿದೆ.

ಒಬ್ಬ ವ್ಯಕ್ತಿಯನ್ನು ಬೆಂಗಳೂರು ಮೂಲದ ದಾಸರಹಳ್ಳಿ ನಿವಾಸಿ ಅಜಯ್‌ ಎಂದೂ ಇನ್ನೊಬ್ಬ ವ್ಯಕ್ತಿಯನ್ನು ಕುಂದಾಪುರದ ಆನಗಳ್ಳಿಯ ಸಂತೋಷ ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಬಂದಿದ್ದ ಗೆಳೆಯ ಅಜಯ್ ಎಂಬಾತನನ್ನು ಕೋಡಿ ಬೀಚ್‌ ಗೆ ಕರೆದುಕೊಂಡು ಹೋಗಿದ್ದಾರೆಂದು ತಿಳಿದುಬಂದಿದ್ದು, ಇಬ್ಬರೂ ಸಮುದ್ರಕ್ಕೆ ಇಳಿದಿದ್ದು, ಆಟವಾಡುತ್ತಿದ್ದ ಸಂದರ್ಭದಲ್ಲಿ ಸಮುದ್ರದ ಆಳೆತ್ತರದ ಅಲೆಗೆ ಸಿಲುಕಿ ಸಮುದ್ರ ಪಾಲಾಗಿರಬಹುದು ಎಂದು ಹೇಳಲಾಗುತ್ತಿದೆ.

ಯುವಕರು ಸಮುದ್ರ ಪಾಲಾಗಿರುವ ವಿಚಾರ ತಿಳಿದು ಸ್ಥಳೀಯ ಮೀನುಗಾರರು ಶೋಧ ಕಾರ್ಯ ನಡೆಸಿದ್ದು, ಸದ್ಯಕ್ಕೆ ಓರ್ವನ ಮೃತ ದೇಹವನ್ನು ಪತ್ತೆಯಾಗಿದೆ, ಇನ್ನೊಬ್ಬನ ಮೃತ ದೇಹದ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!