Thursday, November 21, 2024

ಯಕ್ಷಗಾನ ಕಲಾಕೇಂದ್ರ : ನಮ್ಮವರು ಪುಸ್ತಕ ಬಿಡುಗಡೆ

ಸಾಸ್ತಾನ: ಯಕ್ಷಗಾನ ಕಲೆ ಕೇವಲ ಮನೋರಂಜನೆ ಮಾತ್ರ ಅಲ್ಲ. ವ್ಯಕ್ತಿಯ ಪರಿಪೂರ್ಣವಾದ ವ್ಯಕ್ತಿತ್ವ ನಿರ್ವಹಣೆ ಹಾಗೂ ಬೆಳವಣಿಗೆಗೆ ಸಹಾಕಾರಿಯಾಗಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.

ಐರೋಡಿಯ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ವತಿಯಿಂದ ನಡೆದ ಕಲಾಕೇಂದ್ರದಲ್ಲಿ ಕಲಿತ ವಿದ್ಯಾರ್ಥಿಗಳ ಸಮಾವೇಶದಲ್ಲಿ ವಿದ್ಯಾರ್ಥಿಗಳ ವ್ಯಕ್ತಿಚಿತ್ರ ಪುಸ್ತಕನಮ್ಮವರುವನ್ನುಬಿಡುಗೊಡೆಗೊಳಿಸಿ‌ಅವರು ಮಾತನಾಡಿದರು.

ಯಕ್ಷಗಾನ ಬದುಕಿಗೆ ಆಸರೆ ಆಗುವ ಜೊತೆಗೆ ಸಂಸ್ಕ್ರತಿಯನ್ನು ಎತ್ತಿ ಹಿಡಿದ ದೊಡ್ಡ ಕಲೆ. ಈ ನಿಟ್ಟಿನಲ್ಲಿ ಯಕ್ಷಗಾನ ಕಲಾಕೇಂದ್ರವನ್ನು ಹುಟ್ಟು ಹಾಕಿದ ಹಾಗೂ ಬೆಳವಣಿಗೆಗೆ ಕಾರಣರಾದವರನ್ನು ಅಭಿನಂದಿಸುತ್ತೇವೆ ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಉಪೇಂದ್ರ ಸೋಮಯಾಜಿ, ಯಕ್ಷ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ, ಮಟಪಾಡಿ ಚಂದ್ರಶೇಖರ ಕಲ್ಕೂರ್ ಉಪಸ್ಥಿತರಿದ್ದರು.

ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಸ್ವಾಗತಿಸಿ, ಪ್ರಾಸಾವಿಕವಾಗಿ ಮಾತನಾಡಿದರು.ವಿದ್ಯಾರ್ಥಿ ಲಂಬೋದರ ಹೆಗಡೆ ನಿರೂಪಿಸಿದರು. ಸುಬ್ರಹ್ಮಣ್ಯ ಐತಾಳ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!