spot_img
Wednesday, April 1, 2026
spot_img

ಅಸಾಧ್ಯವನ್ನು ಸಾಧ್ಯಮಾಡುವ ಆತ್ಮವಿಶ್ವಾಸ

ಜೀವನದಲ್ಲಿ ಸಾಧನೆ ಮಾಡಲು ಅವಶ್ಯಕವಾಗಿರುವ ಅಂಶವೆಂದರೆ ಆತ್ಮವಿಶ್ವಾಸ. ಆತ್ಮವಿಶ್ವಾಸವಿಲ್ಲದಿದ್ದರೆ ಏನನ್ನು ಸಾಧಿಸಲು ಸಾಧ್ಯವಿಲ್ಲ. ಸಮಸ್ಯೆಗಳು ಬಂದಾಗ ಹೆದರಿದರೆ ಅವು ನಮ್ಮನ್ನು ಹೆದರಿಸುತ್ತವೆ. ಆತ್ಮವಿಶ್ವಾಸದಿಂದ ಎದುರಿಸಿದರೆ ಅವುಗಳು ಓಡಿಹೋಗುತ್ತವೆ.

ಕತ್ತಲಾದ ಮೇಲೆ ನಮ್ಮ ನೆರಳು ಕೂಡ ನಮ್ಮ ಜೊತೆ ಇರುವುದಿಲ್ಲ. ಹಾಗೆಯೇ ನಮ್ಮ ಜೀವನದ ಕಷ್ಟ-ನಷ್ಟಗಳಲ್ಲಿ ಸೋಲುಗಳಲ್ಲಿ ಯಾರು ನಮ್ಮ ಜೊತೆ ಇರುವುದಿಲ್ಲ. ಜೊತೆಗೆ ಇರುವುದೊಂದೇ ಆತ್ಮವಿಶ್ವಾಸ.

ಆತ್ಮವಿಶ್ವಾಸವೆಂದರೆ ಚಕ್ರದೊಳಗಿನ ಗಾಳಿ ಇದ್ದಂತೆ. ಗಾಳಿ ಖಾಲಿ ಆದರೆ ಗಾಡಿ ಮುಂದೆ ಸಾಗದು. ನಮ್ಮೊಳಗಿನ ಶಕ್ತಿ ಸಾಮರ್ಥ್ಯಗಳ ಬಗ್ಗೆ ನಮಗೆ ನಮ್ಮಲ್ಲೇ ನಂಬಿಕೆ ಇರೋದು ಆತ್ಮವಿಶ್ವಾಸ. ಬಿರುಗಾಳಿಗೆ ಸಿಕ್ಕಿ ಅಲುಗಾಡುತ್ತಿರುವ ಕೊಂಬೆಯ ಮೇಲೆ ಕುಳಿತಿರುವ ಹಕ್ಕಿಗೆ ತಾನೆಲ್ಲಿ ಬೀಳುತ್ತೇನೋ ಎಂಬ ಭಯವಿಲ್ಲ. ಏಕೆಂದರೆ ಅದು ನಂಬಿದ್ದು ತಾನು ಕುಳಿತಿರುವ ಮರದ ಕೊಂಬೆಯನ್ನಲ್ಲ, ಯಾವ ಕ್ಷಣದಲ್ಲೂ ಹಾರಿ ಹೋಗಲು ಸಿದ್ಧವಾಗಿರುವ ತನ್ನ ಬಲಿಷ್ಠ ರೆಕ್ಕೆಗಳನ್ನು.

ಛತ್ರಿಗೆ ಸುರಿಯುತ್ತಿರುವ ಮಳೆಯನ್ನು ನಿಲ್ಲಿಸುವ ಶಕ್ತಿಯಿಲ್ಲ. ಆದರೆ ಮಳೆಯ ಕೆಳಗೆ ನಿಂತುಕೊಳ್ಳುವ ಸಾಮರ್ಥ್ಯವನ್ನು ಖಂಡಿತವಾಗಿ ನೀಡುತ್ತದೆ. ಆತ್ಮವಿಶ್ವಾಸವೂ ಇದೇ ರೀತಿಯ ಕೆಲಸವನ್ನು ಮಾಡುತ್ತಿರುತ್ತದೆ. ಎಲ್ಲಾ ಬಾಗಿಲು ಮುಚ್ಚಿದಾಗಲೂ, ಎಲ್ಲೋ ಒಂದು ಬಾಗಿಲು ತೆರೆದುಕೊಳ್ಳುತ್ತದೆ ಎಂಬ ನಂಬಿಕೆಯೇ ಆತ್ಮವಿಶ್ವಾಸ.

ವ್ಯಕ್ತಿಯು ಆತ್ಮವಿಶ್ವಾಸವನ್ನು ಕಳೆದುಕೊಳ್ಳಲು ಕಾರಣ
ಕಷ್ಟ-ನಷ್ಟಗಳು, ಸೋಲು-ಬೀಳುಗಳು ಜೀವನದಲ್ಲಿ ಒಂದರ ಹಿಂದೆ ಒಂದರಂತೆ ಸಾಲು ಸಾಲಾಗಿ ಬಂದಾಗ ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಇದೆಲ್ಲಾ ಆಗದ ಕೆಲಸ ಎಂಬ ನಕಾರಾತ್ಮಕ ನಿರ್ಧಾರ. ನಮಗೆ ನಮ್ಮ ಮೇಲೆಯೇ ನಂಬಿಕೆ ಇಲ್ಲದಿದ್ದಾಗ, ಅಸಾಧ್ಯ ಸಮಸ್ಯೆಗಳು ಎದುರಾದಾಗ, ಸಂಕಷ್ಟಗಳ ಸುರಿಮಳೆ ಬಂದಾಗ; ಜೊತೆಗೆ ಹಲವರ ಟೀಕೆಗಳು, ಹಗುರವಾದ ಮಾತುಗಳು ಹಾಗೆಯೇ ಕೆಲವೊಮ್ಮೆ ಇತರರೊಂದಿಗೆ ನಾವು ಮಾಡಿಕೊಳ್ಳುವ ತುಲನೆ (comparison) ಯು ಕೂಡ ನಮ್ಮೊಳಗಿನ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ.

ಭೂಮಿಯ ಮೇಲೆ ಬಿದ್ದ ಬೀಜ, ಒಂದಲ್ಲ ಒಂದು ದಿನ ಫಲ ನೀಡಿಯೇ ನೀಡುತ್ತದೆ ಎನ್ನುವುದು ಆತ್ಮವಿಶ್ವಾಸ. ಇದನ್ನು ಹೊರಗಿನಿಂದ ಕೊಂಡುಕೊಳ್ಳಲಾಗದು. ಆತ್ಮವಿಶ್ವಾಸವೆಂಬ ಗಿಡ ಚಿಗುರಿ ಹೆಮ್ಮರವಾಗಲು; ಮೊದಲು ‘ಇದು ನಮ್ಮಿಂದ ಸಾಧ್ಯ’ ಎಂಬ ಬೀಜವನ್ನು ಮನಸ್ಸಿನೊಳಗೆ ಬಿತ್ತಬೇಕು.

-ರಶ್ಮಿ ಉಡುಪ ಮೊಳಹಳ್ಳಿ
SKVMS GFGC Kundapura Koteshwara

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!