spot_img
Wednesday, April 1, 2026
spot_img

ಕುಂದಾಪುರದಿಂದ ತಿರುಪತಿಗೆ ರೈಲು ಸ್ಲೀಪರ್ ಕೋಚ್ ರೂ. 510, ಎಸಿಕೋಚ್ ರೂ.1,100

ಜನಪ್ರತಿನಿಧಿ (ಕುಂದಾಪುರ) : ಕುಂದಾಪುರದಿಂದ ತಿರುಪತಿಗೆ ರೈಲು ಸಂಚಾರ ಆರಂಭಗೊಂಡಿದೆ. ವಾರಕ್ಕೆ ಎರಡು ಬಾರಿ ರೈಲು ಸಂಚರಿಸಲಿದೆ.

ಮುರುಡೇಶ್ವರದಿಂದ ಬುಧವಾರ ಶನಿವಾರ, ತಿರುಪತಿಯಿಂದ ಮಂಗಳವಾರ, ಶುಕ್ರವಾರ ವಾರಕ್ಕೆರಡು ದಿನ ಸಂಚಾರ ಮಾಡಲಿದೆ. ಮುರುಡೇಶ್ವರದಿಂದ ಮಧ್ಯಾಹ್ನ 3.20ಕ್ಕೆ ಹೊರಡುವ ರೈಲು 3.54ಕ್ಕೆ ಬೈಂದೂರು ತಲುಪಿ, 4.40ಕ್ಕೆ ಕುಂದಾಪುರಕ್ಕೆ ಬರಲಿದೆ. 5 ಗಂಟೆಗೆ ಬಾರಕೂರು, 5.20ಕ್ಕೆ ಉಡುಪಿ ತಲುಪಲಿದೆ. ಮಂಗಳೂರಿನಿಂದ ರಾತ್ರಿ 8.05 ಗಂಟೆಗೆ ಹೊರಟ ರೈಲು ತಿರುಪತಿಗೆ ರವಿವಾರ ಬೆಳಿಗ್ಗೆ 11.30ಕ್ಕೆ ರೇಣಿಗುಂಟ (ತಿರುಪತಿಗೆ 9ಕಿ.ಮೀ) ಹಾಗೂ ಹೈದರಬಾದಿನ ಕಾಚಿಗುಡಕ್ಕೆ ಸಂಜೆ 6 ಗಂಟೆಗೆ ತಲುಲಿದೆ. ಪೂರ್ವಾಹ್ನ 11.30ಕ್ಕೆ ರೇಣಿಗುಂಟ ನಿಲ್ದಾಣದಲ್ಲಿ ಇಳಿದು ಸಂಜೆಯ ದರ್ಶನ ಅಥವಾ ಮರುದಿನ ಬೆಳಿಗ್ಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಮರುದಿನ ಸಂಜೆ 4.45ಕ್ಕೆ ಇದೇ ರೈಲು ರೇಣಿಗುಂಟಕ್ಕೆ ಬಂದು ಉಡುಪಿಗೆ ಹೊರಡಲಿದೆ.

ಕುಂದಾಪುರದಿಂದ ತಿರುಪತಿಗೆ ಟಿಕೆಟ್ ದರ ಸ್ಲೀಪರ್ ಕೋಚ್‌ನಲ್ಲಿ 510 ರೂಪಾಯಿ, ಹವಾನಿಯಂತ್ರಿತ ಕೋಚ್‌ನಲ್ಲಿ 1.100 ರೂಪಾಯಿ, ಉಡುಪಿ ಜಿಲ್ಲೆಯಿಂದ ತಿರುಪತಿಗೆ ಸಾಕಷ್ಟು ಸಂಖ್ಯೆಯ ಭಕ್ತರು ಹೋಗುತ್ತಿದ್ದು ಈ ರೈಲು ವಿಸ್ತರಣೆಯಿಂದ ಅನುಕೂಲವಾಗಿದೆ. ಶನಿವಾರ ರೈಲು ಹೊರಡುವುದರಿಂದ ರವಿವಾರ ತಿರುಪತಿ ವೀಕ್ಷಣೆ ಮಾಡಲು ಸಾಧ್ಯವಾಗುತ್ತದೆ. ಕೈಗೆಟುಕುವ ದರದಲ್ಲಿ ತಿಮ್ಮಪ್ಪನ ದರ್ಶನ ಮಾಡಬಹುದಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!