spot_img
Wednesday, April 1, 2026
spot_img

ಕುಮಾರಸ್ವಾಮಿ, ಯಡಿಯೂರಪ್ಪ, ಜೋಶಿ ಮುಂತಾದವರಿಗೆ ನನ್ನ ಕಂಡರೆ ಉರಿ : ಸಿಎಂ ಸಿದ್ದರಾಮಯ್ಯ

ಜನಪ್ರತಿನಿಧಿ (ಮೈಸೂರು) : ೪೨ ವರ್ಷದ ರಾಕಕಾರಣದಲ್ಲಿ ಸಿದ್ದರಾಮಯ್ಯ ಎಂದೂ ಬಡವರಿಗೆ ಅನ್ಯಾಯ ಮಾಡಿಲ್ಲ. ನಯಾ ಪೈಸೆ ಲಂಚ ಪಡೆದ ಉದಾಹರಣೆ ಇಲ್ಲ. ನನ್ನ ಮೇಲೆ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಮಾಡುತ್ತಿರುವ ಸುಳ್ಳು ಆರೋಪ ಸಹಿಸುವಿರೆ ? ಎಂದು ಸಿಎಂ ಸಿದ್ದರಾಮಯ್ಯ ಸ್ವಕ್ಷೇತ್ರ ವರುಣಾ ಮತದಾರರನ್ನು ಪ್ರಶ್ನಿಸಿದ್ದಾರೆ.

ತಮ್ಮ ಸ್ವಕ್ಷೇತ್ರ ವರುಣಾದಲ್ಲಿ ೫೦೧ ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಹಾಗ ಉದ್ಘಾಟನಾ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ನನ್ನ ಜೀವನ ತೆರೆದ ಪುಸ್ತಕ. ಯಾರು ಬೇಕಾದರು ಓದಿಕೊಳ್ಳಬಹುದು. ಸಾರ್ವಜನಿಕರಿಂದ ಹಣ ಪಡೆದಿದ್ದರೆ ಒಂಭತ್ತು ಚುನಾವಣೆ ಗೆಲ್ಲಲು ಆಗುತ್ತಿತ್ತ? ಎಂದು ಪ್ರಶ್ನಿಸಿದ್ದಲ್ಲದೇ, ನನ್ನ ಭಾಮೈದ ತಂಗಿಗೆ ಅರಶಿನ ಕುಂಕುಮಕ್ಕೆ ಕೊಟ್ಟ ಜಮೀನನ್ನು ವಿವಾದ ಮಾಡಿದ್ದಾರೆ. ಅದಕ್ಕೆ ನಿವೇಶನವನ್ನೇ ವಾಪಾಸ್‌ ಕೊಟ್ಟಿದ್ದೇವೆ. ೪೦ ವರ್ಷದಿಂದ ಶಾಸಕನಾಗಿದ್ದರೂ ಸ್ವಂತ ಮನೆ ಇಲ್ಲ. ಮೈಸೂರಿನಲ್ಲಿ ಮರಿಸ್ವಾಮಿ ಎನ್ನುವವರ ಮನೆಯಲ್ಲಿದ್ದೇನೆ. ಈಗ ಸ್ವಂತ ಮನೆ ಕಟ್ಟಿಸುತ್ತಿದ್ದೇನೆ. ನೀವೆ ನಮ್ಮ ಮಾಲೀಕರು, ನೇವೇ ನಮ್ಮ ಯಜಮಾನರು. ನೀವು ಈಗ ನಮ್ಮ ಪರವಾಗಿ ಮಾತನಾಡಬೇಕಿದೆ ಎಂದು ಅವರು ಹೇಳಿದ್ದಾರೆ.

ಕುಮಾರಸ್ವಾಮಿ, ಜೋಶಿ, ಯಡಿಯೂರಪ್ಪ, ವಿಜಯೇಂದ್ರ ಹಾಗೂ ಮುಂತಾದವರಿಗೆ ನನ್ನ ನೋಡಿದರೇ ಹೊಟ್ಟೆ ಉರಿಯಾಗುತ್ತದೆ. ಮೂರು ವರ್ಷದಿಂದ ಮೈಸೂರಿನ ಕುವೆಂಪು ರಸ್ತೆಯಲ್ಲಿ ಮನೆ ಕಟ್ಟಿಸುತ್ತಿದ್ದೇನೆ. ಒಬ್ಬ ಮುಖ್ಯಮಂತ್ರಿ ಮೆಲೆ ಗೂಬೆ ಕೂರಿಸುವ ಕೆಲಸ ಆಗುತ್ತಿದೆ. ಕಾಯಾ ವಾಚಾ ಮನಸಾ ಪ್ರಾಮಾಣಿಕವಾಗಿ ರಾಜಕಾರಣದಲ್ಲಿ ಇದ್ದೇನೆ. ನನಗೆ ಜಾತಿ -ಧರ್ಮದ ಹಂಗಿಲ್ಲ. ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಮಾಡಲಿದ್ದೇನೆ ಎಂದು ಅವರು ಹೇಳಿದರು.

ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳನ್ನು ನಿಮ್ಮ ಆಶೀರ್ವಾದ ಇರುವವರೆಗೆ ಸಮರ್ಥವಾಗಿ ಎದುರಿಸುತ್ತೇನೆ. ಅವರ ಸುಳ್ಳು ಆರೋಪಗಳಿಗೆ ಜಗ್ಗುವುದಿಲ್ಲ. ಬಗ್ಗುವುದೂ ಇಲ್ಲ. ನನಗೆ ಕಾನೂನಿನ ಮೇಲೆ ಗೌರವವಿದೆ. ಅಲ್ಲಿಯೇ ನ್ಯಾಯ ಸಿಗುವ ವಿಶ್ವಾಸವಿದೆ. ನಾನು ಇರುವವರೆಗೂ ಬಡವರಿಗೆ ನ್ಯಾಯ ಕೊಡಿಸುತ್ತೇನೆ. ಎಂದಿಗೂ ಮತದಾರರಿಗೆ ಅಗೌರವ ತರುವ ಕೆಲಸ ಮಾಡುವುದಿಲ್ಲ ಎಂದು ಅವರು ಶಪಥ ಮಾಡಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!