Friday, October 18, 2024

ಶ್ರೀ ವೇಣುಗೋಪಾಲಕೃಷ್ಣ ಏಜುಕೇಶನಲ್ ಸೊಸೈಟಿ ಮೂಡುಕೇರಿ ಬಾರಕೂರು: ಪ್ರತಿಭಾ ಪುರಸ್ಕಾರ

ಬ್ರಹ್ಮಾವರ: ಬಡತನ ಸಾಧಕರೀಗೆ ವರವಾಗಿ ಪರಿಣಮಿಸಬೇಕು ಎಂದು ಡಾ ರಂಜಿತ್ ಕುಮಾರ್ ಹೇಳಿದರು.

ಭಾನುವಾರ ಬಾರಕೂರು ಶ್ರೀ ವೆಂಕಟೇಶ್ವರ ಸಭಾ ಭವನದಲ್ಲಿ ಶ್ರೀ ವೇಣುಗೋಪಾಲಕೃಷ್ಣ ಏಜುಕೇಶನಲ್ ಸೊಸೈಟಿ ಮೂಡುಕೇರಿ ಬಾರಕೂರು ಇವರ ವತಿಯಿಂದ ಪ್ರೇರಣ 2024 ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿ 10 ವರ್ಷದ ಹಿಂದೆ ಇಲ್ಲಿ ಪ್ರತಿಭಾ ಪುರಸ್ಕಾರ ಪಡೆದು ಉನ್ನತ ವ್ಯಾಸಂಗ ಮಾಡಿ ಇಂದು ವೈದ್ಯನಾಗಿ ವೇದಿಕೆ ಹಂಚಿಕೊಳ್ಳಲು ಸಂತಸದ ಜೊತೆಗೆ ,ವಿದ್ಯಾರ್ಥಿ ಜೀವನದಲ್ಲಿ ಮನೆಯವರು ಶಿಕ್ಷಕರು ಆರ್ಥಿಕ ಸಂಸ್ಥೆಯವರು ನೆರವು ನೀಡಬಹುದು ಆದರೆ ಕಠಿಣ ಶ್ರಮದ ಸಾಧನೆ ವಿದ್ಯಾರ್ಥಿಗಳದ್ದಾಗಿರುತ್ತದೆ ಎಂದರು.

ಸೋಮಕ್ಷತ್ರೀಯ ಗಾಣಿಗ ಸಮಾಜದ ಉಡುಪಿ, ಉತ್ತರಕನ್ನಡ, ಮತ್ತು ಶಿವಮೊಗ್ಗ ಜಿಲ್ಲೆಯ ಎಸ್ ಎಸ್ ಎಲ್ ಸಿ 35, ಪಿಯುಸಿ 30, ಪದವಿ ಮತ್ತು ಇಂಜಿನಿಯರಿಂಗ್‌ನ 31 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಟ್ಟು 8 ಲಕ್ಷದಷ್ಟು ಮೊತ್ತವನ್ನು ಧತ್ತಿನಿದಿಯಿಂದ ನೀಡಲಾಯಿತು.

ಸೋಮಕ್ಷತ್ರಿಯ ಗಾಣಿಗಸಮಾಜ ದುಬೈ ಇದರ ಅಧ್ಯಕ್ಷ ಅರುಣ್ ವಿ. ಹೋಟೇಲ್ ಉದ್ಯಮಿ ಗಣೇಶ್ ರಾವ್, ಸೂರ್ಯನಾರಾಯಣ ಗಾಣಿಗ, ಡಾ ,ಸ್ಪೂರ್ಥಿ ಮಟಪಾಡಿ, ಸತೀಶ್ ಗಾಣಿಗಾ ಕುಂದಾಪುರ, ರವಿರಾಜ್ ಕುಂಭಾಶಿ, ವಿಜಯ್, ಉದಯ ಕುಮಾರ್ ಉಡುಪಿ, ಜಯಂತಿ ವಾಸುದೇವ್ , ಮಾಲತಿ ದಿನೇಶ್, ಅನನ್ಯ ಸಾಲಿಗ್ರಾಮ ಸಮಿತಿಯ ಗೋಪಾಲ ಕೃಷ್ಣ ಕೋಟೇಶ್ವರ, ನಾರಾಯಣ ಹಂಗಳೂರು ಉಪಸ್ಥಿತರಿದ್ದರು.

ಶ್ರೀ ವೇಣುಗೋಪಾಲಕೃಷ್ಣ ಏಜುಕೇಶನಲ್ ಸೊಸೈಟಿ ಕಾರ್ಯದರ್ಶಿ ಗಣೇಶ್ ಚಲ್ಲೆಮಕ್ಕಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!