spot_img
Wednesday, January 22, 2025
spot_img

7ನೇ ಇಂಟರ್ ಕ್ಲಬ್ ಬಾಕ್ಸಿಂಗ್ ಚಾಂಪಿಯನ್‍ಶಿಪ್: ಉಡುಪಿ ಜಿಲ್ಲಾ ಅಮೆಚೂರ್ ಬ್ಯಾಕ್ಸಿಂಗ್ ಕೌನ್ಸಿಲ್ ಕುಂದಾಪುರದ ಹತ್ತು ಸ್ಪರ್ಧಾಳುಗಳಿಗೆ ಚಿನ್ನ, ಬೆಳ್ಳಿ, ಕಂಚು

ಕುಂದಾಪುರ: ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಮತ್ತು ಗ್ಲಾಡಿಯೇಟರ್ಸ್ ಬಾಕ್ಸಿಂಗ್ ಅಕಾಡೆಮಿ (ಖ) ಇವರ ಜಂಟಿ ಆಶ್ರಯದಲ್ಲಿ ದಿನಾಂಕ 11-10-2024 ನೇ ಶುಕ್ರವಾರ ಮತ್ತು 12-10-2024ನೇ ಶನಿವಾರದಂದು ಬೆಂಗಳೂರಿನ ಗ್ಲಾಡಿಯೇಟರ್ಸ್ ಬಾಕ್ಸಿಂಗ್ ಅಕಾಡೆಮಿ, ಡಾ.ಪುನೀತ್ ರಾಜ್‍ಕುಮಾರ್ ಮೈದಾನ, ವೆಂಕಟೇಶ್ವರಪ್ಪ ಲೇಔಟ್ ಇಲ್ಲಿ ನಡೆದ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಗುರುತಿಸಲ್ಪಟ್ಟ ಗ್ಲಾಡಿಯೇಟರ್ಸ್ ಬಾಕ್ಸಿಂಗ್ ಅಕಾಡೆಮಿಯಿಂದ ಆಯೋಜಿಸಲಾದ 7 ನೇ ಇಂಟರ್ ಕ್ಲಬ್ ಬಾಕ್ಸಿಂಗ್ ಚಾಂಪಿಯನ್‍ಶಿಪ್ ಪಂದ್ಯಾವಳಿ 2024 ಇದರಲ್ಲಿ ಭಾಗವಹಿಸಿದ ಉಡುಪಿ ಜಿಲ್ಲಾ ಅಮೆಚೂರ್ ಬ್ಯಾಕ್ಸಿಂಗ್ ಕೌನ್ಸಿಲ್ನ ಕುಂದಾಪುರದ ಹತ್ತು ಸ್ಪರ್ಧಿಗಳು ಭಾಗವಹಿಸಿ “1 ಚಿನ್ನದ ಪದಕ 3 ಬೆಳ್ಳಿಯ ಪದಕ 6 ಕಂಚಿನ ಪದಕ” ಗೆದ್ದಿದ್ದಾರೆ.

ಸ್ಪರ್ಧಿಗಳು ಗೃಷ್ಮೇಶ್ ಕುಂದರ್ ಕೋಟ ಮತ್ತು ಅಕ್ಷಯ್ ಹೆಮ್ಮಾಡಿ ಇವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಪದಕ ವಿಜೇತರು:
26-28 ಕೆಜಿ ಕಬ್ ಗ್ರೂಪ್ ಎ ಹುಡುಗರ ವಿಭಾಗದಲ್ಲಿ ತನುಷ್ ಎಂ ಭಂಡಾರಿ ಚಿನ್ನದ ಪದಕ, 81+ ಕೆಜಿ ಜೂನಿಯರ್ ಬಾಲಕರ ವಿಭಾಗದಲ್ಲಿ ತೇಜಸ್ ಎ ಬೆಳ್ಳಿ ಪದಕ, 50+ ಕೆಜಿ ಕಬ್ ಗುಂಪು ಎ ಹುಡುಗಿಯರ ವಿಭಾಗದಲ್ಲಿ ಶಿಖಾ ಬಿಜೂರ್ ಬೆಳ್ಳಿ ಪದಕ, 32-34 ಕೆಜಿ ಕಬ್ ಗುಂಪು ಎ ಹುಡುಗರ ವಿಭಾಗದಲ್ಲಿ ಶ್ರೀಶಾ ಬೆಳ್ಳಿ ಪದಕ, 50-52 ಕೆಜಿ ಜೂನಿಯರ್ ಬಾಲಕರ ವಿಭಾಗದಲ್ಲಿ ರೋಹನ್ ಕಂಚಿನ ಪದಕ
18-20 ಕೆಜಿ ಕಬ್ ಗುಂಪು ಡಿ ಹುಡುಗರ ವಿಭಾಗದಲ್ಲಿ ಸಂಭ್ರಮ್ ಎಸ್ ಕಂಚಿನ ಪದಕ, 50+ ಕೆಜಿ ಕಬ್ ಗುಂಪು ಎ ಹುಡುಗರ ವಿಭಾಗದಲ್ಲಿ ಸದ್ವಿನ್ ಶೆಟ್ಟಿ ಕಂಚಿನ ಪದಕ, 54-57 ಕೆಜಿ ಜೂನಿಯರ್ ಬಾಲಕರ ವಿಭಾಗದಲ್ಲಿ ಯಶ್ಚಿತ್ ಶೆಟ್ಟಿ ಕಂಚಿನ ಪದಕ, 38-40 ಕೆಜಿ ಕಬ್ ಗ್ರೂಪ್ ಎ ಹುಡುಗರ ವಿಭಾಗದಲ್ಲಿ ದಿಗಂತ್ ಕೆ ಕಂಚಿನ ಪದಕ, 44-46 ಕೆಜಿ ಜೂನಿಯರ್ ಬಾಲಕರ ವಿಭಾಗದಲ್ಲಿ ದಿವಿತ್ ಸುಜಿತ್ ಕುಮಾರ್ ಕಂಚಿನ ಪದಕ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!