Thursday, November 14, 2024

ಲಾಯರ್‌ ಜಗದೀಶ್‌, ರಂಜಿತ್‌ ಇಬ್ಬರೂ ಬಿಗ್‌ ಬಾಸ್‌ ಮನೆಯಿಂದ ಔಟ್‌ !

ಜನಪ್ರತಿನಿಧಿ (ಬೆಂಗಳೂರು) : ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್​​ಬಾಸ್ ಮನೆಯಿಂದ ಲಾಯರ್ ಜಗದೀಶ್ ಹಾಗೂ ರಂಜಿತ್ ಹೊರ ಬಿದ್ದಿದ್ದಾರೆ ಎಂಬ ಮಾಹಿತಿ ಈಗ ಲಭ್ಯವಾಗಿದೆ. ಮನೆಯಲ್ಲಿ ಜಗದೀಶ್‌ ಹಾಗೂ ರಂಜಿತ್‌ ಹೊಡೆದಾಡಿಕೊಂಡಿರುವ ಹಿನ್ನೆಲೆಯಲ್ಲಿ ಇಬ್ಬರಿಗೂ ಗೇಟ್‌ ಪಾಸ್‌ ಕೊಡಲಾಗಿದೆ ಎಂದು ಹೇಳಲಾಗುತ್ತಿದೆ.

ನಿನ್ನೆ(ಮಂಗಳವಾರ) ಎಪಿಸೋಡ್​​ನಲ್ಲೂ ಕೂಡ ದೊಡ್ಡ ಜಗಳವಾಗಿತ್ತು. ರಂಜಿತ್ ಮತ್ತು ಜಗದೀಶ್ ನಡುವೆ ನೇರಾನೇರ ಜಗಳ ಆಗಿತ್ತು. ಜಗದೀಶ್ ಮತ್ತು ಉಗ್ರಂ ಮಂಜು ನಡುವೆ ಜಗಳವಾಗಿತ್ತು. ಕೆಲವು ಪ್ರಾಥಮಿಕ ಮಾಹಿತಿ ಪ್ರಕಾರ ಮತ್ತೊಬ್ಬ ಸ್ಪರ್ಧಿ ಮಾನಸಾ ಅವರ ವಿಚಾರಕ್ಕೆ ಜಗಳ ಆಗಿದೆ ಎಂದು ಹೇಳಲಾಗುತ್ತಿದೆ.

ಈ ಮೂಲಕ ಕನ್ನಡ ಬಿಗ್​ಬಾಸ್​ ಇತಿಹಾಸದಲ್ಲಿ ಜಗಳ ಆಡಿಕೊಂಡು ಸ್ಪರ್ಧಿಗಳು ಹೊರಬಿದ್ದ ಮೂರನೇ ಪ್ರಕರಣ ಇದಾಗಿದೆ. ಈ ಹಿಂದೆ ಹುಚ್ಚ ವೆಂಕಟ್, ಸಂಯುಕ್ತಾ ಹೆಗಡೆ​ ಬಿಗ್​ಬಾಸ್ ಮನೆಯಿಂದ ಇದೇ ಕಾರಣಕ್ಕೆ ಹೊರಬಂದಿದ್ದರು. ಆದರೇ, ಈ ಬಗ್ಗೆ ಈವರೆಗೆ ಕಲರ್ಸ್‌ ಟೀಂ ಅಥವಾ ಬಿಗ್‌ ಬಾಸ್‌ ತಂಡ ಅಧಿಕೃತ ಮಾಹಿತಿ ನೀಡಿಲ್ಲ. ಆದಾಗ್ಯೂ ಬಿಗ್‌ ಬಾಸ್‌ ಟೀಂ ಮತ್ತು ಕಲರ್ಸ್‌ ಕನ್ನಡ ವಾಹಿನಿ ಈ ಬಗ್ಗೆ ಇನ್ನು ಕೆಲವು ಸಮಯದಲ್ಲಿ ಅಧಿಕೃತ ಮಾಹಿತಿ ನೀಡಬಹುದು ಎನ್ನಲಾಗುತ್ತಿದೆ.

ಜಗದೀಶ್ ಕಳೆದ ಮೂರ್ನಾಲ್ಕು ದಿನಗಳಿಂದ ತುಂಬಾ ಅಗ್ರೆಸೀವ್ ಆಗಿ ಆಟ ಆಡುತ್ತಿದ್ದರು. ಇತರೆ ಸ್ಪರ್ಧೆಗಳನ್ನು ಕೆರಳಿಸುವ ರೀತಿಯಲ್ಲಿ ಮಾತುಗಳನ್ನು ಆಡ್ತಿದ್ದಾರೆ ಅಂತಾ ಸ್ಪರ್ಧಿಗಳು ನೇರವಾಗಿ ಆರೋಪ ಮಾಡ್ತಿದ್ದರು. ಇದು ಅತಿರೇಕಕ್ಕೆ ಹೋಗಿ ಮನೆಯಿಂದನೇ ಹೊರ ಬೀಳುವ ಪರಿಸ್ಥಿತಿ ನಿರ್ಮಾಣ ಆಗಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!