spot_img
Thursday, April 2, 2026
spot_img

ಬೆಂಗಳೂರಿನ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ಮಹಾರತ್ನ ಕಂಪನಿಗಳ ಪಟ್ಟಿಗೆ ಸೇರ್ಪಡೆ !

ಜನಪ್ರತಿನಿಧಿ (ನವ ದೆಹಲಿ) : ದೇಶದ ಹೆಮ್ಮೆಯ ಉದ್ದಿಮೆಯಾದ ನಮ್ಮ ಬೆಂಗಳೂರಿನ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಈಗ ಮಹಾರತ್ನ ಕಂಪನಿಗಳ ಪಟ್ಟಿಗೆ ಸೇರ್ಪಡೆಯಾಗಿದೆ.

ಮಹಾರತ್ನ ಸ್ಥಾನಮಾನ ಪಡೆಯಲು ಕಂಪನಿಯ ಸರಾಸರಿ ವಹಿವಾಟು 25,000 ಕೋಟಿ ರೂ.ಗಿಂತ ಹೆಚ್ಚಿರಬೇಕು. 2023-24ರ ಅವಧಿಯಲ್ಲಿ ಎಚ್‌ಎಎಲ್ 7,595 ಕೋಟಿ ರೂ.ಗಳ ಬೃಹತ್ ಲಾಭ ಮತ್ತು 28,162 ಕೋಟಿ ರೂ.ಗಳ ವಾರ್ಷಿಕ ವಹಿವಾಟು ದಾಖಲಿಸಿದೆ.

ಈ ಸ್ಥಾನಮಾನದಿಂದ ಕಂಪನಿಗೆ ಹೆಚ್ಚಿನ ಸ್ವಾಯತ್ತೆ ದೊರಕಲಿದ್ದು ಕೇಂದ್ರದ ಬಜೆಟ್‌ ಅನುದಾನದ ಖಾತ್ರಿಗಾಗಿ ಕಾಯದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಬಹುದಾಗಿದೆ. ಈ ಪಟ್ಟಿಗೆ ದಾಖಲಾದ 14ನೇ ಕಂಪನಿ ಎಂಬ ಕೀರ್ತಿಗೆ ಎಚ್‌ಎಎಲ್‌ ಪಾತ್ರವಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!