spot_img
Wednesday, April 1, 2026
spot_img

ಬದುಕಿನಲ್ಲಿ ಯಶಸ್ಸು, ವೈಭವವನ್ನು ಪಡೆಯಲು ವಿದ್ಯೆಯೇ ಮೂಲ-ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀ

ನೆಲ್ಲಿಕಟ್ಟೆಯ ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿ ವತಿಯಿಂದ ರಜತ ಸಂಭ್ರಮದ ಶಾರದೋತ್ಸವ
ಕುಂದಾಪುರ:(ಜನಪ್ರತಿನಿಧಿ ವಾರ್ತೆ) ಬದುಕಿನಲ್ಲಿ ಯಶಸ್ಸು, ವೈಭವವನ್ನು ಪಡೆಯಲು ವಿದ್ಯೆಯೇ ಮೂಲ. ಕ್ಷಣಕ್ಷಣದ ಕಣವನ್ನೂ ವ್ಯರ್ಥ ಮಾಡದೇ ಆಸಕ್ತಿ, ಶ್ರದ್ದೆಯಿಂದ ವಿದ್ಯೆಯನ್ನು ಸಂಪಾದಿಸಿಕೊಂಡರೆ ಸುಖ ಸಂಪತ್ತುಗಳೆಲ್ಲವೂ ಲಭಿಸುತ್ತದೆ. ವಿದ್ಯೆಗೆ ಶ್ರೀದೇವಿಯ ಅನುಗ್ರಹವೂ ಅಗತ್ಯ. ತಾಯಿಯ ಅನುಗ್ರಹವಿದ್ದರೆ ಹುಟ್ಟು ಮೂಗನೂ ಉತ್ತಮ ವಾಗ್ಮಿಯಾಗಬಲ್ಲ, ಹುಟ್ಟು ಅಜ್ಞಾನಿಯೂ ಉತ್ತಮ ಜ್ಞಾನಿಯಾಗಬಲ್ಲ ಎಂದು ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠ, ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಜೈ ಭಾರತಿ ಶಾಲಾ ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿ ವತಿಯಿಂದ ರಜತ ಸಂಭ್ರಮದ ಶಾರದೋತ್ಸವದ ಅಂಗವಾಗಿ ನಡೆದ ಚಂಡಿಕಾ ಹೋಮ ಪೂರ್ಣಾಹುತಿಯಲ್ಲಿ ಭಾಗಿಯಾಗಿ ಆಶೀರ್ವಚನ ನೀಡಿದರು.
ವಿದ್ಯೆಯಿಂದ ಎಲ್ಲ ಬಂಧಗಳಿಂದ ವಿಮುಖರಾಗಲು ಸಾಧ್ಯ. ಹಾಗಾಗಿ ವಿದ್ಯೆಯನ್ನೇ ಶ್ರೇಷ್ಟ ಸಂಪತ್ತನ್ನಾಗಿ ಭಾವಿಸಬೇಕು. ಜೊತೆಯಲ್ಲಿ ನಾವು ಧರ್ಮದ ಪಥದಲ್ಲಿ ನಡೆಯಬೇಕು. ಜೀವನದುದ್ದಕ್ಕೂ ಧರ್ಮದ ನಡೆ‌ಇರಬೇಕು. ನಯ, ವಿನಯ ಬದುಕಿನಲ್ಲಿ ಶ್ರೇಷ್ಟವಾದುದು. ನಿರಂತರವಾದ ಪ್ರಯತ್ನ ಯಶಸ್ಸಿಗೆ ಕಾರಣವಾಗುತ್ತದೆ ಎಂದರು.
ಸಾರ್ವಜನಿಕವಾಗಿ ಕಳೆದ 25ವರ್ಷಗಳಿಂದ ಆಚರಿಸಲ್ಪಡುತ್ತಿರುವ ಶಾರದಾ ಮಾತೆಯ ಆರಾಧನೆ ಇಲ್ಲಿ ನಡೆಯುತ್ತಿದೆ. ಇದು ನಿರಂತರತೆಗೆ ತಾಯಿಯ ಆಶಿರ್ವಾದವೂ ಕಾರಣ. ವಿಶೇಷವಾಗಿ ಶಾರದೆಯ ಅನುಗ್ರಹ ಎಲ್ಲರಿಗೂ ಲಭ್ಯವಾಗುತ್ತದೆ. ಈ ಆಚರಣೆ ಮುಂದೆ ಸುವರ್ಣಮಹೋತ್ಸವ, ವಜ್ರಮಹೋತ್ಸವ, ಶತಮಾನೋತ್ಸವಗಳನ್ನು ಕಾಣಲಿ ಎಂದು ಶ್ರೀಗಳು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಚಂಡಿಕಾ ಹೋಮದ ಸೇವಾಕರ್ತರಾದ ಶ್ರೀಮತಿ ಉಜ್ವಲ ಮತು ಪ್ರದೀಪ್ ಕುಮಾರ್ ಶೆಟ್ಟಿ, ಅನ್ವಿ ಶೆಟ್ಟಿ ಮತ್ತು ಮನೆಯವರು ಗುಡಿಬೆಟ್ಟು ಉಪಸ್ಥಿತರಿದ್ದರು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಶಂಕರ್ ಶೇಟ್, ಕಾರ್ಯದರ್ಶಿ ಸುಬ್ರಹ್ಮಣ್ಯ ನೆಲ್ಲಿಕಟ್ಟೆ, ರಜತ ಸಂಭ್ರಮದ ಕಾರ್ಯದರ್ಶಿ ನವೀನ್ ಕುಮಾರ್ ಶೆಟ್ಟಿ ಶಾನ್ಕಟ್ಟ್, ಪದಾಧಿಕಾರಿಗಳು ಹಾಜರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!