Friday, October 18, 2024

ಐರಾವತ 2.0 ಮಾದರಿಯ 20 ಬಸ್‌ಗಳು ಕೆಎಸ್‌ಆರ್‌ಟಿಸಿಗೆ ಸೇರ್ಪಡೆ : ಐರಾವತ ಕ್ಲಬ್ ಕ್ಲಾಸ್ 2.0 ನೂತನ ವೋಲ್ವೋ ಬಸ್‌ಗಳ ವಿಶೇಷತೆ ಏನು ಗೊತ್ತಾ ?

ಜನಪ್ರತಿನಿಧಿ (ಬೆಂಗಳೂರು) : ಐರಾವತ 2.0 ಮಾದರಿಯ 20 ಬಸ್‌ಗಳು ಅಕ್ಟೋಬರ್‌ ಕೊನೆಯೊಳಗೆ ಕೆಎಸ್‌ಆರ್‌ಟಿಸಿಗೆ ಸೇರ್ಪಡೆಗೊಳ್ಳಲಿದೆ.

ಐರಾವತ ಕ್ಲಬ್ ಕ್ಲಾಸ್ 2.0 ನೂತನ ವೋಲ್ವೋ (9600 ಮಾದರಿ)ಯ ಬಸ್ ಗಳನ್ನು ಹೊಸಕೋಟೆ ಬಳಿಯಿರುವ ವೋಲ್ವೋ ಬಸ್ ತಯಾರಿಕಾ ಫ್ಯಾಕ್ಟರಿಗೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದೆ.

ಐರಾವತ ಕ್ಲಬ್ ಕ್ಲಾಸ್ 2.0 ಮಾದರಿಯ 20 ಬಸ್ಸುಗಳನ್ನು ಕೆ ಎಸ್ ಆರ್ ಟಿ ಸಿ ಯು ಈ ತಿಂಗಳ ಕೊನೆಯ ವಾರದಲ್ಲಿ ವಾಹನಗಳ ಸಮೂಹಕ್ಕೆ ಸೇರ್ಪಡೆಗೊಳಿಸಲಿದೆ.

ಕರ್ನಾಟಕವು ವಿವಿಧ ಮಾದರಿಯ ಅತ್ಯಾಧುನಿಕ ಬಸ್ಸುಗಳನ್ನು ಪ್ರಯಾಣಿಕರ ಬೇಡಿಕೆಗನುಣವಾಗಿ ಸೇರ್ಪಡೆ ‌ಗೊಳಿಸುತ್ತಿರುವುದರಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ.

ಕೆಎಸ್ಸಾರ್ಟಿಸಿ ಅಧ್ಯಕ್ಷರಾದ ಎಸ್ ಆರ್ ಶ್ರೀನಿವಾಸ್ (ವಾಸು), ಉಪಾಧ್ಯಕ್ಷರಾದ ಶ್ರೀ ಮೊಹಮ್ಮದ್ ರಿಜ್ವಾನ್ ನವಾಬ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವಿ.ಅನ್ಬುಕುಮಾರ್, ಡಾ. ಕೆ ನಂದಿನಿದೇವಿ, ಭಾಆಸೇ,‌ ನಿರ್ದೇಶಕರು( ಸಿಬ್ಬಂದಿ & ಭದ್ರತಾ), ನಿಗಮದ ಹಿರಿಯ ಅಧಿಕಾರಿಗಳು, ವೋಲ್ವೋ ಕಂಪನಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬಸ್‌ ವಿಶೇಷತೆ: ಬಸ್ಸಿನ ಒಳಗೆ ಪ್ರಯಾಣಿಕರ ಆಸನದ ಎರಡೂ ಬದಿಯಲ್ಲಿ ನೀರಿನ ಪೈಪ್‌ಗಳಿದ್ದು, 30 ನಾಜಲ್‌ಗಳಿಂದ ನೀರು ಸರಬರಾಜು ಆಗಿ ಬೆಂಕಿ ಅವಘಡ ನಿಯಂತ್ರಿಸುವ ವ್ಯವಸ್ಥೆ ಇದಾಗಿದೆ.

ಶೇ. 3.5ರಷ್ಟು ಅಧಿಕ ಉದ್ದ ಇರುವ ಬಸ್‌ನಲ್ಲಿ ಪ್ರಯಾಣಿಕರ ಆಸನಗಳ ನಡುವಿನ ಅಂತರ ಹೆಚ್ಚಿಸಲಾಗಿದೆ. ವಿಶಾಲ ಲಗೇಜು ಸ್ಥಳಾವಕಾಶ, ಅತ್ಯಾಧುನಿಕ ಮೊಬೈಲ್‌ ಚಾರ್ಜಿಂಗ್‌ ಪಾಯಿಂಟ್‌, ಉತ್ತಮ ಹವಾನಿಯಂತ್ರಣ ವ್ಯವಸ್ಥೆ ಇದೆ.

ಬಸ್‌ ಹಿಂಭಾಗದಲ್ಲಿ ಫಾಗ್‌ ಲೈಟ್‌ ಅಳವಡಿಸಿರುವುದರಿಂದ ರಾತ್ರಿ ವೇಳೆಯಲ್ಲಿ ಹೆಚ್ಚಿನ ಸುರಕ್ಷತೆ ಇರುತ್ತದೆ.

ಚಾಲಕರಿಗೆ ಸುಲಭವಾಗಿ ಕೈಗೆಟಕುವ ಚಾಲಕ ನಿಯಂತ್ರಣಗಳು ಮತ್ತು ಸ್ವಿಚ್‌ಗಳನ್ನು ಹೊಂದಿದೆ. ಬಾಗಿಲಿನ ಮೂಲಕ ಪಾದಚಾರಿಗಳನ್ನು ಸುಲಭವಾಗಿ ಚಾಲಕರು ಗಮನಿಸುವ ವ್ಯವಸ್ಥೆ ಇದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!