Thursday, November 14, 2024

ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ‘ಹುಲಿ ಕುಣಿತ’

ಕುಂದಾಪುರ: ಡಾ| ಬಿ.ಬಿ. ಹೆಗ್ಢೆ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ ೧೦/೧೦/೨೦೨೪ ಗುರುವಾರ, ಜೇಸಿ‌ಐ ಕುಂದಾಪುರ ಸಿಟಿ ಮತ್ತು ಕಿಯೋನಿಕ್ಸ್, ಚರ್ಚ್ ರಸ್ತೆ ಕುಂದಾಪುರ ಇವರ ಸಹಕಾರದೊಂದಿಗೆ ಚೌಡೇಶ್ವರಿ ಟೈಗರ್ಸ್ ಟಿ.ಟಿ. ರಸ್ತೆ ಕುಂದಾಪುರ ಇವರಿಂದ ಹುಲಿವೇಷ ಕುಣಿತ ಪ್ರದರ್ಶನ ನಡೆಯಿತು.

ಕಾಲೇಜಿನ ಪ್ರಾಚಾರ್ಯರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಜೇಸಿ‌ಐ ಸಿಟಿ ಕುಂದಾಪುರದ ಅಧ್ಯಕ್ಷ ಶ್ರೀ ರಾಘವೇಂದ್ರ ಕುಲಾಲ್ ಹೆಮ್ಮಾಡಿ, ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ಕಾರ್ಯಕ್ರಮ ಪ್ರಾಯೋಜಕರಾದ ಹರ್ಷವರ್ಧನ್ ಶೆಟ್ಟಿ, ಮಾಲಕರು ಕಿಯೋನಿಕ್ಸ್, ಚರ್ಚ್ ರಸ್ತೆ ಕುಂದಾಪುರ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಡಾ| ಸೋನಿ, ಜೇಸಿ ವಿಜಯ ಭಂಡಾರಿ, ಜೇಸಿ ರಾಜು ಪೂಜಾರಿ, ಉಪ-ಪ್ರಾಂಶುಪಾಲ ಡಾ| ಚೇತನ್ ಶೆಟ್ಟಿ ಕೋವಾಡಿ, ಕಾರ್ಯಕ್ರಮವನ್ನು ಸಂಘಟಿಸಿದ ಲಲಿತಾಕಲಾ ಸಂಘದ ಸಂಯೋಜಕಿ ಶ್ರೀಮತಿ ದೀಪಿಕಾ. ಜಿ. ರವಿನಾ ಸಿ, ಪೂಜಾರಿ, ನಿರ್ಮಲಾ ಬಿ. ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!