Friday, October 18, 2024

ಬಗ್ವಾಡಿಯಲ್ಲಿ ‘ಮನೆಮನದಲ್ಲಿ ಮಹಿಷಾಸುರಮರ್ದಿನಿ’: ಅಪರೂಪದ ಭಕ್ತಿ ಅಭಿಯಾನ ಸಂಪನ್ನ

ಕುಂದಾಪುರ: ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಸಂಪನ್ನಗೊಂಡಿತು. ನಿತ್ಯ ಎರಡು ಚಂಡಿಕಾ ಹೋಮ, ಅನ್ನಸಂತರ್ಪಣೆ, ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ರಾತ್ರಿ 16 ಬಾರಿ ದೇವಿ ಶ್ಲೋಕದ ನಮಸ್ಕಾರ ಪೂಜೆಯೊಂದಿಗೆ ದೇವಿಯ ನಾಮಸ್ತುತಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.
ಶರನ್ನವರಾತ್ರಿಯಲ್ಲಿ ಇದೇ ಪ್ರಥಮ ಬಾರಿಗೆ ಬಗ್ವಾಡಿಯಲ್ಲಿ ಮನೆಮನದಲ್ಲಿ ಮಹಿಷಾಸುರಮರ್ದಿನಿ ವಿಶೇಷ ಭಕ್ತಿ ಅಭಿಯಾನ ಅದ್ಭುತ ಯಶಸ್ಸು ಗಳಿಸಿತು. ನವರಾತ್ರಿಯ ಪ್ರಾರಂಭದ ದಿನ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನವರಾತ್ರಿಯ ಕೊನೆಯ ದಿನ ಕಾರ್ಯಕ್ರಮದ ಸಮಾರೋಪ ನಡೆಯಿತು. ಬಗ್ವಾಡಿ ಗ್ರಾಮದ 200 ಮನೆಗಳಿಗೆ ಶ್ರೀದೇವಿ ಮಹಿಷಾಸುರಮರ್ದಿನಿ ದೇವರು ಭಜನಾ ತಂಡಗಳೊಂದಿಗೆ ತೆರಳಿ ಭಕ್ತರ ಮನೆಯಲ್ಲಿ ಪೂಜೆ ಸ್ವೀಕರಿಸುವ ವಿಶೇಷ ಕಾರ್ಯಕ್ರಮ ಇದಾಗಿತ್ತು. ನವರಾತ್ರಿಯ ಸಮಯದಲ್ಲಿ ಸಾಕ್ಷಾತ್ ಭಗವತಿಯೇ ಮನೆಗೆ ಬರುವುದನ್ನು ಪ್ರತೀ ಮನೆಯವರು ಕೂಡಾ ಅತ್ಯಂತ ಭಕ್ತಿ, ಗೌರವದಿಂದ ಬರ ಮಾಡಿಕೊಂಡು ಭಕ್ತಿಯಿಂದ ಪೂಜೆ ಸಲ್ಲಿಸಿ ಪುನೀತರಾದರು. ದಿನದಿಂದ ದಿನಕ್ಕೆ ಮಹಿಷಾಸುರಮರ್ದಿನಿ ಮನೆಮನೆಗೆ ತೆರಳುವ ಸಂದರ್ಭದ ಮೆರವಣಿಗೆಗೆ ಸಾರ್ವಜನಿಕರ ಭಾಗವಹಿಸುವಿಕೆ ಹೆಚ್ಚಾಗುತ್ತಲೇ ಹೋಯಿತು. ಬ್ಯಾಂಡ್ ವಾದ್ಯಘೋಷ ಮತ್ತಿತ್ತರ ಆಕರ್ಷಣೆಗಳು ಮೆರವಣಿಗೆಗೆ ಇನ್ನಷ್ಟು ಮೆರಗು ನೀಡಿತು.
ಮನೆಮನದಲ್ಲಿ ಮಹಿಷಾಸುರಮರ್ದಿನಿ ಕಾರ್ಯಕ್ರಮಕ್ಕೆ ಅಭೂತಪೂರ್ವ ಜನಮನ್ನಣೆ ದೊರಕಿದೆ. ಎಲ್ಲಾ ಮನೆಗಳಲ್ಲಿಯೂ, ಮನಗಳಲ್ಲಿಯೂ ಶ್ರದ್ದಾಭಕ್ತಿ, ಅಂತಃಕರಣ ಶುದ್ಧತೆಯಿಂದ ದೇವಿಯನ್ನು ಬರ ಮಾಡಿಕೊಳ್ಳುತ್ತಿರುವುದು ಕಂಡು ಬಂತು. ಬಗ್ವಾಡಿ ಗ್ರಾಮದ 200 ಮನೆಗಳಿಗೆ ದೇವಿ ಹೋಗಿದ್ದು ಇದೊಂದು ದಾಖಲೆಯೇ ಸರಿ. ದೇವಿಯನ್ನು ತಮ್ಮ ಮನೆಯೊಳಗೆ ಬರಮಾಡಿಕೊಳ್ಳಲು ಶ್ರದ್ಧಾಭಕ್ತಿ, ಮನೆಯ ವಾತಾವರಣ ಸ್ವಚ್ಛತೆ, ಸಗಣಿ ಸಾರಿಸಿ ದೇವಿಯನ್ನು ಹೊತ್ತಿರುವ ವ್ಯಕ್ತಿಯ ಪಾದ ತೊಳೆದು ದೇವಿಯನ್ನು ಸ್ವಾಗತಿಸುತ್ತಿರುವುದು ಕಂಡು ಬಂತು.
ಒಂದು ಮನೆಯಲ್ಲೊಂದು ತಮ್ಮ ಮನೆಯ ಧ್ವಾರಬಾಗಿಲು ಚಿಕ್ಕದಾಗಿದ್ದು ದೇವಿಯನ್ನು ಒಳಗೆ ಕರೆತಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ನಿರ್ಮಾಣವಾಗುತ್ತಿದ್ದ ಹೊಸಮನೆಯಲ್ಲಿಯೇ ದೇವಿಯನ್ನು ಆರಾಧಿಸಿದ್ದು ಒಂದು ಉದಾಹರಣೆಯಾದರೆ ದಿನ ಹಲವಾರು ಕಿ,ಮೀ ದೂರವನ್ನು ಕ್ರಮಿಸಲು ಭಜನಾ ತಂಡಗಳು,ಪುಟಾಣಿ ಮಕ್ಕಳು, ಭಕ್ತ ಜನ ಉತ್ಸುಕವಾಗಿ ಕ್ರಮಿಸಿದ್ದು ವಿಶೇಷ. ಕೆಲವೊಂದು ಮನೆಗಳಿಗೆ ಮೈಲುಗಟ್ಟಲೆ ದೂರ ನಡೆದು ದಣಿವು ಕಾಣದೆ ಭಜನೆ ನೆರವೇರಿಸಿದ್ದು , ನವರಾತ್ರಿ ಒಂಭತ್ತು ದಿನಗಳು ಕೂಡಾ ಬೇರೆ ಬೇರೆ ಕಾರ್ಯಬಾಹುಳ್ಯವಿದ್ದರೂ ಜನ ಅತೀ ಉತ್ಸಾಹದಿಂದ ಭಾಗವಹಿಸುತ್ತಿದ್ದುದು ವಿಶೇಷವೇ ಸರಿ. ಸ್ಥಳೀಯ ವಿಕಲಚೇತನ ದೇವಿಯ ಸದ್ಭಕ್ತರೊಬ್ಬರು ದೇವಿಗೆ ಸಮರ್ಪಿತವಾದ ಕಾಯಿ, ಅಕ್ಕಿಯನ್ನು ತನ್ನ ತ್ರಿಚಕ್ರ ಸೈಕಲ್ ಮೂಲಕವೇ ದೇವಸ್ಥಾನಕ್ಕೆ ಸಾಗಿಸುವ ತನ್ನು ಭಕ್ತಿ ಹಾಗೂ ತನ್ನ ಪಾಲ್ಗೊಳ್ಳುವಿಕೆ ಮೆರೆದರು.
ಅ.11ರಂದು ನಡೆದ ಮಹಾನವಮಿಯಂದು ಮನೆಮನದಲ್ಲಿ ಮಹಿಷಾಸುರಮರ್ದಿನಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದವರನ್ನು ಗೌರವಿಸಲಾಯಿತು. ಭಜನಾ ಕಾರ್ಯಕ್ರಮಗಳ ನೇತೃತ್ವ ವಹಿಸಿ ಮಾರ್ಗದರ್ಶನ ಮಾಡಿದ ಕುಂದಾಪುರ ತಾಲೂಕು ಭಜನಾ ಮಂಡಳಿಗಳ ಒಕ್ಕೂಟದ ಮಾಜಿ ಅಧ್ಯಕ್ಷರಾದ ಜಯಕರ ಪೂಜಾರಿ ಗುಲ್ವಾಡಿ ಹಾಗೂ ಮಹಾಜನ ಸಂಘದ ಮಾಜಿ ಶಾಖಾಧ್ಯಕ್ಷರಾದ ಎಂ.ಎಂ.ಸುವರ್ಣ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಕುಂದಾಪುರ ಶಾಖಾಧ್ಯಕ್ಷರಾದ ಉದಯ ಕುಮಾರ್ ಹಟ್ಟಿಯಂಗಡಿ ಅವರ ಕಲ್ಪನೆಯಾದ ಮನೆಮನದಲ್ಲಿ ಮಹಿಷಾಸುರಮರ್ದಿನಿ ಕಾರ್ಯಕ್ರಮದ ಅತ್ಯಂತ ಯಶಸ್ಸು ಕಂಡಿದ್ದು ಇದರ ಯಶಸ್ಸಿಗೆ ಕಾರಣರಾದ ಎಲ್ಲರನ್ನು ಅಭಿನಂದಿಸಿ, ಕೃತಜ್ಞತೆ ಸಲ್ಲಿಸಿ ಮಾತನಾಡಿದ ಉದಯ ಕುಮಾರ್ ಹಟ್ಟಿಯಂಗಡಿ ಅವರು, ಮನೆಮನದಲ್ಲಿ ಮಹಿಷಾಸುರಮರ್ದಿನಿ ಪರಿಕಲ್ಪನೆಯನ್ನು ಅದ್ಭುತವಾಗಿ ಮೂಡಿ ಬರುವಲ್ಲಿ ಸಹಕಾರ ನೀಡಿ ಕಾರ್ಯಕ್ರಮದ ಯಶಸ್ಸಿಗೆ ಕಾರಣಿಕರ್ತರಾದ ಎಲ್ಲರಿಗೂ, ಬಗ್ವಾಡಿಯ ಗ್ರಾಮಸ್ಥರಿಗೂ, ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ ಅವರು, ಮುಂದೆಯೂ ಕೂಡಾ ದೇವಸ್ಥಾನದ ಕಾರ್ಯಕ್ರಮದಲ್ಲಿ ಎಲ್ಲರ ಸಹಕಾರವಿರಲಿ ಎಂದು ಹೇಳಿದ ಅವರು ಶರನ್ನವರಾತ್ರಿಯ ಸಂದರ್ಭದಲ್ಲಿ ಭರತನಾಟ್ಯ ವಿವಿಧ ಲಲಿತಾಕಲಾ ಸೇವೆ ಸಲ್ಲಿಸಿದರಿಗೆ ಧನ್ಯವಾದ ಸಲ್ಲಿಸಿದರು.
ದೇವಸ್ಥಾನದ ಪ್ರಧಾನ ಅರ್ಚಕರಾದ ಗಿರೀಶ್ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು.
ಮನೆಮನದಲ್ಲಿ ಮಹಿಷಾಸುರಮರ್ದಿನಿ ಕಾರ್ಯಕ್ರಮದ ಗ್ರಾಮ ಪ್ರತಿನಿಧಿಗಳಾದ ಸಂತೋಷ ಶೆಟ್ಟಿ (ಹೊಸ್ಮನೆ ಬಗ್ವಾಡಿ) ಪ್ರದೀಪ, ಸತೀಶ ಶೆಟ್ಟಿ, ಸೂಲಿಯಣ್ಣ ಶೆಟ್ಟಿ(ಪಡುಮನೆ) ಜನಾರ್ದನ ಆಚಾರ್, ಸಂಜೀವ ಮೊಗವೀರ, ಅಶೋಕ ಪೂಜಾರಿ (ಗುರುಟಿಕೆರೆಮನೆ) ಶಾರದಾ ಪೂಜಾರಿ, ರಾಧಾಕೃಷ್ಣ ಗಾಣಿಗ (ಉಗ್ರಾಣಿಮನೆ) ಮಹೇಶ ಮೊಗವೀರ, ಶಂಕರ ಭಟ್ (ಬೈಲೂರು ಭಟ್ರಮನೆ), ಶ್ರೀಧರ ಮೊಗವೀರ ಬಗ್ವಾಡಿ, ಭವಾನಿ ಮೊಗವೀರ, ಶಾರದಾ ಮೊಗವೀರ, ಗಣೇಶ ಮೊಗವೀರ (ಹೆಮ್ಮಾಡಿ ಮನೆ) ಉದಯ ಮೊಗವೀರ, ಯಶೋಧ ಮೊಗವೀರ, ನಾಗರಾಜ ಪೂಜಾರಿ (ದಾಸನಹಿತ್ಲು) ಚೆನ್ನ ನಾಯ್ಕ್, ಬಸವರಾಜ್, ಪ್ರಕಾಶ್ ಆಚಾರ್ (ಅಕ್ಸಾಲಿಮನೆ) ಮಂಜುನಾಥ ಆಚಾರ್ ಹಾಗೂ ದೇವಸ್ಥಾನದ ಪ್ರತಿನಿಧಿಗಳಾದ ಆನಂದ ಕೆ.ನಾಯ್ಕ್ (ಬಗ್ವಾಡಿ ಕ್ರಾಸ್ ದೇವಲ್ಕುಂದ) ಎಮ್.ಆರ್ ನಾಯ್ಕ್, ಗಜೇಂದ್ರ, ಲೋಹಿತಾಶ್ವ ಆರ್ ಕುಂದರ್ ಬಾಳಿಕೆರೆ, ರಾಜು ಶ್ರೀಯಾನ್, ರಾಜು ಮರಕಾಲ, ಬಿ.ಆರ್ ನಾಯ್ಕ್ ಸುಳ್ಸೆ, ರಾಜು ಮೆಂಡನ್, ಶೋಭಾ ಜಿ.ಪುತ್ರನ್, ಪ್ರಭಾಕರ ಸೇನಾಪುರ, ಉಮೇಶ, ಸತೀಶ ಮೊಗವೀರ, ದಿನೇಶ ಕಾಂಚನ್ ಬಾಳಿಕೆರೆ, ಪ್ರವೀಣ್ ಗಂಗೊಳ್ಳಿ, ಸುರೇಶ ವಿಠಲವಾಡಿ, ನಾಗೇಶ ಪಿ.ಕಾಂಚನ್ ಬೆದ್ರಾಡಿಮನೆ ನಾಡಾ, ಎಮ್.ಎಮ್.ಸುವರ್ಣ, ಸಂಜೀವ ಬಗ್ವಾಡಿ, ಜಗದೀಶ ಮಾರ್ಕೊಡು ಕೋಟೇಶ್ವರ, ಸದಾನಂದ ಬಳ್ಕೂರು, ಸತೀಶ ಎಂ.ನಾಯ್ಕ, ಶೇಖರ ಚಾತ್ರಬೆಟ್ಟು, ಪುಂಡಲೀಕ ಬಂಗೇರ, ರಾಮನಾಯ್ಕ್ ಬೀಜಾಡಿ,ವಿಠಲ ಕಾಂಚನ್, ಸುಧಾಕರ ಕಾಂಚನ್ ಕುಂದಾಪುರ, ದಿವಾಕರ ಮೆಂಡನ್, ನಾರಾಯಣ ತೆಂಕಮನೆ ಅವರು ಸಹಕರಿಸಿದ್ದರು.
ನಾಗರಾಜ ದುಗ್ಗಿಮನೆ, ನರಸಿಂಹ ಮೊಗವೀರ, ನಂದ್ಯಪ್ಪ ಶೆಟ್ಟಿ, ಸದಾಶಿವ, ಸಂಜೀವ ಪೂಜಾರಿ, ಶ್ಯಾಮಲಾ ಜಿ.ಚಂದನ್, ಸುಮಿತ್ರಾ ಎ. ಮೊಗವೀರ, ಶೋಭಾ ಜಿ.ಪುತ್ರನ್, ಗಿರಿಜಾ ಮೊಗವೀರ, ಸುಮತಿ ಯು.ಹಟ್ಟಿಯಂಗಡಿ, ಬೇಬಿ ಜಿ.ನಾಯ್ಕ, ಸುಮತಿ ಬಿ.ಮೊಗವೀರ, ರೇಣುಕಾ ಆರ್ ಮೊಗವೀರ, ಸುಮ, ಭಾಗ್ಯ, ಪೂರ್ಣಿಮಾ, ಶೋಭಾ ಡಿ ಕಾಂಚನ್, ಜಗದೀಶ ನೆಂಪು, ರಮೇಶ ಕುಂದರ್, ರತ್ನಾ ಆರ್ ಕುಂದರ್, ಬಗ್ವಾಡಿ ದೇವಸ್ಥಾನದ ಮೆನೇಜರ್ ವಾಸು ಜಿ. ನಾಯ್ಕ್, ಸಿಬ್ಬಂದಿಗಳಾದ ರಾಘವೇಂದ್ರ, ಪವಿತ್ರಾ, ಮೊಗವೀರ ಸ್ತ್ರೀಶಕ್ತಿ ಮತ್ತು ಮಹಿಷಾಸುರಮರ್ದಿನಿ ಭಜನಾ ತಂಡ, ಮೊಗವೀರ ಯುವ ಸಂಘಟನೆ ಹಾಗೂ ಶಾಖಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಮನೆಮನದಲ್ಲಿ ಮಹಿಷಾಸುರಮರ್ದಿನಿ ಪ್ರಾರಂಭದಂದು ಮೊಗವೀರ ಮಹಾಜನ ಸೇವಾ ಸಂಘ ಮುಂಬಯಿ ಇದರ ಅಧ್ಯಕ್ಷರಾದ ರಾಜು ಮೆಂಡನ್ ವಂಡ್ಸೆ ಹಾಗೂ ಪದಾಧಿಕಾರಿಗಳು, ಮುಂಬಯಿಯ ಭಕ್ತರು ಭಾಗವಹಿಸಿದ್ದರು.
ಮನೆಮನದಲ್ಲಿ ಮಹಿಷಾಸುರಮರ್ದಿನಿ ಕಾರ್ಯಕ್ರಮದಲ್ಲಿ ಜೈ ಶ್ರೀ ಮಾತಾ ಕುಣಿತ ಭಜನೆ ಮಂಡಳಿ ಹಕ್ರೆಮಠ ಕೊಡೇರಿ, ಶ್ರೀ ರಾಹುತೇಶ್ವರ ಭಜನಾ ಮಂಡಳಿ ಯಡ್ತರೆ, ಶ್ರೀ ಯಕ್ಷಿ ಭಜನಾ ಮಂಡಳಿ ಮಾವಿನಕಟ್ಟೆ ಕರ್ಕುಂಜೆ, ಶ್ರೀ ಭ್ರಮರಿ ಬೊಬ್ಬರ್ಯ ಭಜನಾ ಮಂಡಳಿ ಬಳ್ಕೂರು, ಶ್ರೀ ರಾಮ iಕ್ಕಳ ಕುಣಿತ ಭಜನಾ ಮಂಡಳಿ ಆರಾಟೆ, ಮಹಾಂಕಾಳಿ ಭಜನಾ ಮಂಡಳಿ ಗಂಗೊಳ್ಳಿ, ಶ್ರೀ ದುರ್ಗಾ ಭಜನಾ ಮಂಡಳಿ ಐರೋಡಿ ಸಾಸ್ತಾನ, ಶ್ರೀರಾಮಾಂಜನೇಯ ಭಜನಾ ಮಂಡಳಿ ಕಂಚಗೋಡು, ತ್ರಾಸಿ, ಶ್ರೀ ಸೀತಾರಾಮ ಭಜನಾ ಮಂಡಳಿ ಕೋಡಿ, ಪಂಚವರ್ಣ ಭಜನಾ ಮಂಡಳಿ ಅಂಕದಕಟ್ಟೆ ಈ ತಂಡದವರು ಭಾಗವಹಿಸಿದ್ದರು.
ದೇವಸ್ಥಾನದಲ್ಲಿ ನಿತ್ಯ ಕುಳಿತು ಭಜನೆ ನೆಡೆದಿದ್ದು ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿ ಹೆಮ್ಮಾಡಿ, ಶ್ರೀರಾಮ ಭಜನಾ ಮಂಡಳಿ ಅರಾಟೆ ಹೊಸಾಡು, ಶ್ರೀ ಸ್ವಾಮಿ ಭಜನಾ ಮಂಡಳಿ ಮಂಕಿ, ಶ್ರೀ ನಂದಿಕೇಶ್ವರ ಭಜನಾ ಮಂಡಳಿ ಹಾಡಿಗರಡಿ, ಶ್ರೀ ಲಕ್ಷ್ಮೀವೆಂಕಟರಮಣ ಭಜನಾ ಮಂಡಳಿ ತಗ್ಗರ್ಸೆ, ಶ್ರೀ ಮಹಾಲಿಂಗೇಶ್ವರ ಕಾಳಿಂಗ ಸುಬ್ರಹ್ಮಣ್ಯ ಭಜನಾ ಮಂಡಳಿ, ಕನ್ನಿಕಾ ವಿದ್ಯಾಭಾರತಿ ಭಜನಾ ಮಂಡಳಿ ಕಂಡ್ಲೂರು ಶ್ರೀ ಹರಿ ಭಜನಾ ಮಂಡಳಿ ಕೋಡಿ, ಶ್ರೀ ರಾಮ ಗಣಪತಿ ಅಯ್ಯಪ್ಪ ಭಜನಾ ಮಂಡಳಿ ತ್ರಾಸಿ ಹಾಗೂ ಶ್ರೀ ಮಹಿಷಾಸುರಮರ್ದಿನಿ ಭಜನಾ ಮಂಡಳಿ ಬಗ್ವಾಡಿ ಇವರಿಂದ ನಿತ್ಯ ಭಜನೆ ನಡೆಯಿತು. ಜಗದೀಶ ನೆಂಪು ನೇತೃತ್ವದಲ್ಲಿ ಸ್ಯಾಕ್ಸೋಪೋನ್ ವಾದನ ನಡೆಯಿತು.
ಅ.5ರಂದು ನಾಡೋಜ ಡಾ.ಜಿ.ಶಂಕರ್ ಅವರ 69ನೇ ಜನ್ಮದಿನದ ಅಂಗವಾಗಿ 69 ಮಂದಿಯಿಂದ ತುಪ್ಪ ದೀಪದ ಅರ್ಚನೆ ನಡೆಯಿತು. ಒಟ್ಟಾರೆಯಾಗಿ ಈ ಬಾರಿ ಶರನ್ನವರಾತ್ರಿ ಮಹೋತ್ಸವ ಬಗ್ವಾಡಿಯಲ್ಲಿ ಸ್ಮರಣಾರ್ಹವಾಗಿ ಮೂಡಿಬಂತು.

 

 

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!