Friday, October 18, 2024

ಪ್ರತಿಷ್ಠಿತ ಸ್ಟಾರ್ ಹೆಲ್ತ್ ಇನ್ಶೂರೆನ್ಸ್‌ ಕಂಪನಿಯ ಗ್ರಾಹಕರ ಮಾಹಿತಿ ಹ್ಯಾಕ್‌ !

ಜನಪ್ರತಿನಿಧಿ (ಬೆಂಗಳೂರು) : ದೇಶ ದಪ್ರತಿಷ್ಠಿತ ಇನ್ಶೂರೆನ್ಸ್‌ ಕಂಪೆನಿಗಳಲ್ಲಿ ಒಂದಾದ ಸ್ಟಾರ್ ಹೆಲ್ತ್ ಇನ್ಶೂರೆನ್ಸ್‌ ಕಂಪನಿಯ 31 ಮಿಲಿಯನ್‌ಗೂ ಹೆಚ್ಚು ಗ್ರಾಹಕರ ವೈಯಕ್ತಿಕ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಡೇಟಾವನ್ನು 1.50 ಲಕ್ಷ ಡಾಲರ್ ಗೆ ಮಾರಾಟಕ್ಕೆ ಲಭ್ಯವಿರುವುದಾಗಿ ಹ್ಯಾಕರ್ ಒಬ್ಬ ಹೇಳಿಕೊಂಡಿರುವುದಾಗಿ ವರದಿಯಾಗಿದೆ.

xenZen ಎಂದು ಗುರುತಿಸಲಾದ ಹ್ಯಾಕರ್‌ ಗ್ರಾಹಕರ ಜನ್ಮ ದಿನಾಂಕ, ಫೋನ್ ಸಂಖ್ಯೆ, ಪ್ಯಾನ್ ಕಾರ್ಡ್ ಸೇರಿದಂತೆ ಇತರ ವಿವರಗಳನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದರಿಂದ ವಿಮಾ ಕಂಪನಿಯ ಗ್ರಾಹಕರು ಆಘಾತಕ್ಕೊಳಗಾಗುವಂತಾಗಿದೆ.

ದುರುದ್ದೇಶಪೂರಿತ ಸೈಬರ್ ದಾಳಿಗೆ ಗ್ರಾಹಕರು ಬಲಿಯಾಗಿದ್ದಾರೆ ಪರಿಣಾಮ ಕೆಲವು ಡೇಟಾಗೆ ಅನಧಿಕೃತ ಹಾಗೂ ಅಕ್ರಮ ಪ್ರವೇಶವಾಗಿದೆ ಎಂದು ವಿಮಾ ಕಂಪನಿ ಸುದ್ದಿ ಸಂಸ್ಥೆ TNIE ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ.

ಗ್ರಾಹಕರು ಯಾವುದೇ ರೀತಿಯಲ್ಲಿ ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಲ್ಲಾ ಸೇವೆಗಳು ಅಡ್ಡಿಯಿಲ್ಲದೆ ಮುಂದುವರಿಯುತ್ತವೆ ಎಂದು ಸ್ಪಷ್ಪಪಡಿಸುತ್ತೇವೆ. ಸೈಬರ್ ಭದ್ರತೆ ತಜ್ಞರ ನೇತೃತ್ವದಲ್ಲಿ ಸಂಪೂರ್ಣ ಮತ್ತು ಕಠಿಣವಾದ ವಿಧಿವಿಜ್ಞಾನ ತನಿಖೆ ನಡೆಯುತ್ತಿದೆ. ತನಿಖೆಯ ಪ್ರತಿಯೊಂದು ಹಂತದಲ್ಲೂ ಸರ್ಕಾರ ಮತ್ತು ನಿಯಂತ್ರಕ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಕಂಪನಿ ಹೇಳಿದೆ.

ಮದ್ರಾಸ್ ಹೈಕೋರ್ಟ್ ಸಂಪರ್ಕಿಸಿದ್ದು, ಸಂಬಂಧಿತ ಮಾಹಿತಿಗೆ ಪ್ರವೇಶವನ್ನು ನಿಷ್ಕ್ರಿಯಗೊಳಿಸಲು ಕೆಲವು ಮೂರನೇ ವ್ಯಕ್ತಿಗಳು ಸೇರಿದಂತೆ ಎಲ್ಲರಿಗೂ ನಿರ್ದೇಶನ ನೀಡಿದೆ. ನ್ಯಾಯಾಲಯದ ಆದೇಶವನ್ನು ಶ್ರದ್ದೆಯಿಂದ ಪಾಲಿಸುತ್ತಿದ್ದೇವೆ ಎಂದು ಕಂಪನಿ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!