spot_img
Sunday, February 15, 2026
spot_img

ಬೆಣ್ಣೆಕುದ್ರು ದೇವಸ್ಥಾನ: ಶಾಶ್ವತ ನಿತ್ಯ ಅನ್ನ ಸಂತರ್ಪಣೆಗೆ ಚಾಲನೆ

ಬಾರಕೂರು: ಬೆಣ್ಣೆಕುದ್ರು ಶ್ರೀ ಕುಲ ಮಹಾಸ್ತ್ರೀ ಅಮ್ಮನವರ ದೇವಸ್ಥಾನದಲ್ಲಿ 3ನೇ ನವರಾತ್ರಿಯ ಶುಭ ಸಂದರ್ಭದಲ್ಲಿ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಪ್ರತಿನಿತ್ಯ ನಿರಂತರ ಅನ್ನದಾನ ಸೇವೆ ನಡೆಸುವ ಸದುದ್ದೇಶದಿಂದ ಶಾಶ್ವತ ನಿತ್ಯ ಅನ್ನ ಸಂತರ್ಪಣೆಗೆ ಆಡಳಿತ ಮಂಡಳಿಯ ಅಧ್ಯಕ್ಷರಾದ ನಾಡೋಜ ಡಾ. ಜಿ ಶಂಕರ್ ಹಾಗೂ ಕ್ಷೇತ್ರಾ ಡಳಿತ ಸಮಿತಿ ಅಧ್ಯಕ್ಷರಾದ ಆನಂದ್ ಸಿ.ಕುಂದರ್ ಅವರು ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಕೆಂಜ ಶ್ರೀಧರ ತಂತ್ರಿಗಳ ಉಪಸ್ಥಿತಿಯಲ್ಲಿ ಕುಲ ಗುರುಗಳಾದ ಮಾಧವ ಮಂಗಲ ಗುರು ಮಂದಿರದಲ್ಲಿ ಸಾಮೂಹಿಕ ಪ್ರಾರ್ಥನೆ ಯೊಂದಿಗೆ ಶ್ರೀ ಕುಲಮಹಾಸ್ತ್ರೀ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ ಶಾಶ್ವತ ನಿತ್ಯ ಅನ್ನ ಸಂತರ್ಪಣೆಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ದ.ಕ ಮೊಗವೀರ ಮಹಾ ಜನ ಸಂಘದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್, ಬಾರ್ಕೂರು ಬೆಣ್ಣೆಕುದ್ರು ಮೊಗವೀರ ಸಂಯುಕ್ತ ಸಭಾದ ಅಧ್ಯಕ್ಷರಾದ ಸತೀಶ್ ಎಸ್ ಅಮೀನ್, ಉಪಾಧ್ಯಕ್ಷರಾದ ರಾಜೇಂದ್ರ ಸುವರ್ಣ ಹಿರಿಯಡ್ಕ, ಪ್ರಸಾದ್ ಕಾಂಚನ್, ಕ್ರಷ್ಣ ಮೂರ್ತಿ ಮರಕಾಲ, ಕಿಟ್ಟಪ್ಪ ಅಮೀನ್, ಮಂಜುನಾಥ್ ಸುವರ್ಣ, ಶಾಶ್ವತ ಅನ್ನದಾನ ನಿಧಿ ಸಮಿತಿಯ ಸಂಚಾಲಕರಾದ ಶಿವರಾಮ ಕೋಟ, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾದ ಜಯಂತ ಅಮೀನ್, ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಗಿರಿಧರ್ ಸುವರ್ಣ, ಆನಂದ್ ಎಂ ಸುವರ್ಣ, ಶಿವ ಟಿ ಕರ್ಕೇರಾ, ಮೊಗವೀರ ಗ್ರಾಮ ಸಭೆಯ ಅಧ್ಯಕ್ಷರಾದ ಸಂದೀಪ್ ಕುಂದರ್ ಮತ್ತು ಪದಾಧಿಕಾರಿಗಳು, ಮೊಗವೀರ ಯುವಕ ಸಂಘದ ಅಧ್ಯಕ್ಷರಾದ ರವೀಂದ್ರ ಎಸ್ ಕರ್ಕೇರಾ ಮತ್ತು ಪದಾಧಿಕಾರಿಗಳು, ಮೊಗವೀರ ಮಹಿಳಾ ಸಂಘ ಬೆಣ್ಣೆಕುದ್ರು -ಬಾರ್ಕೂರು ಇದರ ಅಧ್ಯಕ್ಷರಾದ ಶ್ರೀಮತಿ ಲಲಿತಾ ಮತ್ತು ಪದಾಧಿಕಾರಿಗಳು, ಪ್ರಮುಖರಾದ ಶಂಕರ್ ಸಾಲಿಯಾನ್, ಸಂಜೀವ ಎಂ. ಕೋಟ, ಶ್ರೀ ಸುರೇಶ್ ಕಾಂಚನ್ ಬಾರಿಕೆರೆ ಕೋಟ , ಕೃಷ್ಣ ಮೈಂದನ್, ಕೋಟ ವಲಯದ ಎಲ್ಲ ಪದಾಧಿಕಾರಿಗಳು ಕೇಂದ್ರ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ 69ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಾಡೋಜ ಡಾ ಜಿ ಶಂಕರ್ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!