Tuesday, October 22, 2024

ಬಿ. ಅಪ್ಪಣ್ಣ ಹೆಗ್ಡೆ ನೇತೃತ್ವದಲ್ಲಿ ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆ ಸ್ಥಾಪನೆ

ಕುಂದಾಪುರ, ಅ.4: ಕುಂದಾಪ್ರ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಬೆಳವಣಿಗೆ ಹಾಗೂ ಅಧ್ಯಯನಕ್ಕಾಗಿ ಬಸ್ರೂರು ಅಪ್ಪಣ್ಣ ಹೆಗ್ಡೆಯವರ ನೇತೃತ್ವದಲ್ಲಿ ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆ ಸ್ಥಾಪನೆಗೆ ನಿರ್ಧರಿಸಲಾಗಿದೆ.

ಕುಂದ ಕನ್ನಡದ ಅಪಾರ ಸಾಹಿತ್ಯಿಕ, ಸಾಂಸ್ಕೃತಿಕ, ಜಾನಪದ ಸಂಪತ್ತನ್ನು ಉಳಿಸುವ ದೃಷ್ಟಿಯಿಂದ ಹಾಗೂ ಕುಂದ ಕನ್ನಡದ ಎಲ್ಲಾ ಲೇಖಕರ ಕೃತಿಗಳನ್ನು ಸಂಗ್ರಹಿಸುವ, ಕಲಾವಿದರ ಮಾಹಿತಿ ಸಂಗ್ರಹಿಸುವ, ಕುಂದಾಪ್ರ ಕನ್ನಡ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ವೇದಿಕೆ ಸ್ಥಾಪಿಸಲಾಗಿದೆ.

ವೇದಿಕೆಯ ಸಂಚಾಲಕರಾಗಿ ಯು. ಎಸ್. ಶೆಣೈ ಕಾರ್ಯ ನಿರ್ವಹಿಸಲಿದ್ದಾರೆ.
ಡಾ| ಉಮೇಶ್ ಪುತ್ರನ್, ಆವರ್ಸೆ ಸುಧಾಕರ ಶೆಟ್ಟಿ, ಕಿಶೋರ್ ಕುಮಾರ್ ಕಲಾ ಕ್ಷೇತ್ರ, ಸಾಲಗದ್ದೆ ಶಶಿಧರ ಶೆಟ್ಟಿ, ಕೃಷ್ಣಪ್ರಸಾದ ಅಡ್ಯಂತಾಯ, ಜೋನ್ ಡಿಸೋಜಾ, ಅಶೋಕ ಕುಮಾರ್ ಶೆಟ್ಟಿ ಸಂಸಾಡಿ, ವಿಶ್ವನಾಥ ಕರಬ, ನಿತ್ಯಾನಂದ ಶೆಟ್ಟಿ ಅಂಪಾರು ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ. ಕಾನೂನು ಸಲಹೆಗಾರರಾಗಿ ಟಿ. ಬಿ. ಶೆಟ್ಟಿಯವರನ್ನು ಆಯ್ಕೆ ಮಾಡಲಾಗಿದೆ. ಖಜಾಂಚಿಯಾಗಿ ಕೆ. ಆರ್. ನಾಯ್ಕ್ ಹಾಗೂ ಲೆಕ್ಕ ಪರಿಶೋಧಕರಾಗಿ ಎನ್. ಶಾಂತಾರಾಮ ನಾಯಕ್ ಆಯ್ಕೆಯಾದರು.

ಕುಂದಾಪ್ರ ಕನ್ನಡ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಿದ ಹಲವು ಹಿರಿಯರು, ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಮಾರ್ಗದರ್ಶಕರು ಹಾಗೂ ಸಲಹೆಗಾರರನ್ನಾಗಿ ಆಹ್ವಾನಿಸಲು ನಿರ್ಧರಿಸಲಾಗಿದೆ.

ಕುಂದಾಪುರ ಬಂಟರ ಯಾನೆ ನಾಡವರ ಸಂಘದ ಗಿಳಿಯಾರು ಕುಶಲ ಹೆಗ್ಡೆ ಸಭಾ ಭವನದಲ್ಲಿ ನಡೆದ ಸಭೆಯಲ್ಲಿ, ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆಯ ಸದಸ್ಯರಾಗುವ ಮೂಲಕ ಸರ್ವ ಕುಂದ ಕನ್ನಡಿಗರು ಸಹಕಾರ ನೀಡಬೇಕೆಂದು ಅಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆಯವರು ಅಪೇಕ್ಷಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!