Thursday, November 14, 2024

ಡಾ. ಸುರೇಶ್‌ ಶಾನಭೋಗ ರಿಗೆ 2024ರ ಅಶೋಕ ಪ್ರಶಸ್ತಿ !

ಜನಪ್ರತಿನಿಧಿ (ಗೋವಾ) : ಗೋವಾದ ವಿವಿಧ ಇಲಾಖೆಗಳಲ್ಲಿ ನಿರ್ದೇಶಕರಾಗಿ ಸೇವೆಗೈದ ಕನ್ನಡಿಗ ಡಾ. ಸುರೇಶ್‌ ಶಾನಭೋಗ್‌ ಅವರಿಗೆ 2024ರ ಅಶೋಕ ಪ್ರಶಸ್ತಿ ದೊರಕಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯ ಇಂಡಿಯಾ ಹ್ಯಾಬಿಟೇಟಸ್‌ ಸೆಂಟರ್‌ ನಲ್ಲಿ ಸಪ್ಟೆಂಬರ ೩೦ ರಂದು ಆಯೋಜಿಸಿದ್ದ ಸಮಾರಂಭದಲ್ಲಿ ಅವರಿಗೆ ಅಶೋಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಾ. ಅಶೋಕ್‌ ಶಾನಭೋಗ್‌ ಅವರಿ ಗೋವಾ ರಾಜ್ಯ ಸರ್ಕಾರದ ವಿವಿಧ ಇಲಖೆಗಳ ನಿರ್ದೇಶಕರಾಗಿ ರಾಜ್ಯ ಹಾಗೂ ರಾಷ್ಟ್ರಕ್ಕೆ ನೀಡಿರುವ ಅತ್ಯುತ್ತಮ ಕೊಡುಗೆಗಾಗಿ ಈ ಅತ್ಯುನ್ನತ ಪ್ರಶಸ್ತಿ ಲಭಿಸಿದೆ.

ನಿಸ್ವಾರ್ಥ ಸೇವೆ ಹಾಗೀ ಸರಳ ವ್ಯಕ್ತಿತ್ವ ಹೊಂದಿರುವ ಶಾನಭೋಗ್‌ ಅವರಿಗೆ ಈ ಪ್ರಶಸ್ತಿ ಲಭಿಸಿದ್ದು, ಅವರ ಸೇವೆಗೆ ಈಗಾಗಲೇ ಅನೇಕ ಗೌರ, ಸನ್ಮಾನಗಳು ಲಭಿಸಿವೆ.

ಇನ್ನು, ಡಾ. ಸುರೇಶ್‌ ಶಾನಭೋಗ್‌ ಅವರು, ಗೋವಾ ಸರ್ಕಾರದ ಉನ್ನತ ಹುದ್ದೆಯಾದ ಗಣಿ ಇಲಾಖೆಯ ನಿರ್ದೇಶಕರಾಗಿ, ನಾಗರಿಕ ವಿಮಾನ ಇಲಾಖೆಯ ನಿರ್ದೇಶಕರಾಗಿ, ಪಿಪಿಪಿ ನಿರ್ದೇಶಕರಾಗಿ, ಯೋಜನಾ ನಿರ್ದೇಶಕರಾಗಿ, ಹಣಕಾಸು ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಲ್ಲದೇ ಅನೇಕ ಪ್ರಮುಖ ಹುದ್ದೆಗಳ್ಲಿ ಕಾರ್ಯ ನಿರ್ವಹಿಸಿ ಕೂಡ ಅವರಿಗೆ ಅನುಭವವಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!