Sunday, October 13, 2024

ಕುಂದನಾಡು ರೈತ ಉತ್ಪಾದಕ ಕಂಪೆನಿ ಮಹಾಸಭೆ: ಶೀಘ್ರ ಬ್ಯಾಂಕಿಂಗ್ ವ್ಯವಹಾರ ಆರಂಭ

ಕುಂದಾಪುರ :ಕುಂದನಾಡು ರೈತ ಉತ್ಪಾದಕ ಕಂಪನಿ ಯಶಸ್ವಿಯಾಗಿ ಮುನ್ನೆಡೆಯುತ್ತಿದೆ. ವಂಡ್ಸೆಯಲ್ಲಿ ಸ್ವಂತ ಜಮೀನು ಖರೀದಿ ಮಾಡಿದ್ದು ಕೃಷಿ ಉತ್ಪನ್ನ ಖರೀದಿ ಕೇಂದ್ರ ಆರಂಭ ಮಾಡಲಾಗುವುದು. ಕಂಪೆನಿ ಆರ್ಥಿಕವಾಗಿ ಪ್ರಗತಿ ಸಾಧಿಸುವ ಕಾರಣದಿಂದ ಬ್ಯಾಂಕಿಂಗ್ ವ್ಯವಹಾರ ಆರಂಭ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಕುಂದನಾಡು ರೈತ ಉತ್ಪಾದಕ ಕಂಪೆನಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಹೇಳಿದರು.
ಅವರು ವಂಡ್ಸೆ ಶ್ರೀಯಾ ಕನ್ವನ್ಶನ್ ಹಾಲ್‍ನಲ್ಲಿ ನಡೆದ ಕುಂದನಾಡು ರೈತ ಉತ್ಪಾದಕ ಕಂಪನಿ ನಿ., ವಂಡ್ಸೆ ಹೋಬಳಿ, ಅಂಪಾರು ಇದರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಸ್ಥೆ ಈಗಾಗಲೇ ಶುದ್ಧ ತೆಂಗಿನ ಎಣ್ಣೆ ತಯಾರಿಸಿ ಮಾರಾಟ ಮಾಡುತ್ತಿದೆ. ಸಂಘದ ಸದಸ್ಯರು ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರಕ್ಕೆ ಖರೀದಿಸಲಾಗುತಿದೆ. ಗುಣಮಟ್ಟದ ಕೃಷಿ ಪರಿಕರಗಳ ಮಾರಾಟ ಮಾಡಲಾಗುತಿದೆ. ರಸಗೊಬ್ಬರ, ಕೀಟನಾಶಕ, ಶೀಲಿಂದ್ರನಾಶಕಗಳ ಮಾರಾಟ ಮಾಡಲಾಗುತಿದೆ. ಕೆಲವೊಂದು ಕೃಷಿ ಯಂತ್ರೋಪಕರಣಗಳು ಬಾಡಿಗೆಗೆ ಲಭ್ಯವಿದೆ, ಅಡಿಕೆ ನರ್ಸರಿ ಕೆಂಚನೋರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಲ್ಲಿ ಗುಣಮಟ್ಟದ ಅಡಿಕೆ ಸಸಿಗಳು ಲಭ್ಯವಿದೆ ಎಂದರು.
ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಚಂದ್ರಶೇಖರ ನಾಯಕ್ ಮಾಹಿತಿ ನೀಡಿದರು.
ಸದಸ್ಯರು ಕುಂದನಾಡು ಕಂಪೆನಿ ವತಿಯಿಂದ ಭತ್ತ ಖರೀದಿ ಮಾಡಲೇಬೇಕು, ಸಂಸ್ಕರಣೆ, ದಾಸ್ತಾನು ಇಡಲು ಅವಕಾಶಗಳನ್ನು ಮಾಡಿಕೊಳ್ಳಬೇಕು ಎಂದು ಸದಸ್ಯರು ಸಲಹೆ ನೀಡಿದರು. ಸಂಸ್ಥೆಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಮೈಲುತುತ್ತು ಮತ್ತು ಸುಣ್ಣವನ್ನು ಸಂಸ್ಥೆಯಿಂದಲೇ ಖರೀದಿಸುವಂತಾಗಲು ಪೂರಕ ವ್ಯವಸ್ಥೆ ಮಾಡಬೇಕು ಎನ್ನುವ ಸಲಹೆಯನ್ನು ರೈತರು ನೀಡಿದರು. ಬ್ಯಾಂಕಿಂಗ್ ವಿಭಾಗ ವಂಡ್ಸೆಯಲ್ಲಿ ಆರಂಭ ಮಾಡುವ ಬಗ್ಗೆ ನಿರ್ಣಯ ಮಾಡಯಿತು. ಸಂಸ್ಥೆಯ ಉತ್ಪನ್ನಗಳಿಗೆ ಉತ್ತಮ ಪ್ರಚಾರ ನೀಡಿ ಮಾರಾಟ ಮಾಡುವ ಬಗ್ಗೆ ನಿರ್ಣಯ ಮಾಡಲಾಯಿತು. ಕಾಡು ಪ್ರಾಣಿಗಳ ಹಾವಳಿ, ವಾರಾಹಿ ಬಲದಂಡೆ ಯೋಜನೆ ಆರಂಭದ ಬಗ್ಗೆ ಸಂಬಂಧಪಟ್ಟ ವೇದಿಕೆಯಲ್ಲಿ ವಿಚಾರ ಪ್ರಸ್ತಾಪಿಸುವಂತೆ ಸದಸ್ಯರು ಸೂಚಿಸಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಚಂದ್ರಶೇಖರ ಉಡುಪ ಕೆಂಚನೂರು, ನಿರ್ದೇಶಕರಾದ ಸಂತೋಷ ಕುಮಾರ್ ಶೆಟ್ಟಿ ಬಲಾಡಿ, ಸದಾಶಿವ ಶೆಟ್ಟಿ ಶಂಕರನಾರಾಯಣ, ವಿವೇಕ್ ಭಂಡಾರಿ ಗುಲ್ವಾಡಿ, ಶರತ್ ಕುಮಾರ್ ಶೆಟ್ಟಿ ದೇವಲ್ಕುಂದ, ಉದಯ ಜಿ.ಪೂಜಾರಿ ಚಿತ್ತೂರು, ಸತೀಶ ಶೆಟ್ಟಿ ಹಕ್ಲಾಡಿ, ಗೋವರ್ದನ ಶೆಟ್ಟಿ ಇಡೂರು, ವಿಜಯ ಶೆಟ್ಟಿಗಾರ್ ಮಚ್ಚಟ್ಟು, ಶ್ರೀಮತಿ ಅನುರಾಧಾ ಸೇನಾಪುರ, ಶ್ರೀಮತಿ ಮಲ್ಲಿಕಾ ಶೆಟ್ಟಿ ಅಂಪಾರು, ಶ್ರೀಮತಿ ಜ್ಯೋತಿ ಶೆಟ್ಟಿ ಮೂಡುಬಗೆ, ನೂತನ ನಿರ್ದೇಶಕ ಸರ್ವೋತ್ತಮ ಶೆಟ್ಟಿ ಇಡೂರು ಉಪಸ್ಥಿತರಿದ್ದರು.
ಜ್ಯೋತಿ, ಸುಮಿತ್ರಾ, ಸ್ಮಿತಾ ಪ್ರಾರ್ಥನೆ ಮಾಡಿದರು. ಉದಯ ಜಿ.ಪೂಜಾರಿ ಚಿತ್ತೂರು ವರದಿ ಮಂಡಿಸಿದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಅಜಿತ್ ಆಚಾರ್ ಮಹಾಸಭೆಯ ತಿಳುವಳಿಕೆ ಪತ್ರ, ಜಮಾ ಖರ್ಚು, ಆಡಿಟ್ ಆರ್ಥಿಕ ತಖ್ತೆಯನ್ನು ಸಭೆಗೆ ಮಂಡಿಸಿದರು. ಉಪಾಧ್ಯಕ್ಷರಾದ ಚಂದ್ರಶೇಖರ ಉಡುಪ ಕೆಂಚನೂರು ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!