Saturday, October 12, 2024

ಗೋಪಾಲಕೃಷ್ಣ ವಿ.ಸೇ.ಸ.ಸಂಘದ ಮಹಾಸಭೆ | 11.5%  ಡಿವಿಡೆಂಡ್ ಘೋಷಣೆ

ಕುಂದಾಪುರ:  ಗೋಪಾಲಕೃಷ್ಣ ವಿ.ಸೇ.ಸ. ಸಂಘದ ಮಹಾಸಭೆಯು ಸೆ. 22 ರಂದು ಸಂಘದ ಅಧ್ಯಕ್ಷರಾದ ಕೆ. ರಮೇಶ್ ಗಾಣಿಗ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ 17 ವರ್ಷಗಳಿಂದ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯುತ್ತಾ ಬಂದಿದ್ದು, ಸದಸ್ಯರಿಗೆ ಉತ್ತಮ ಸೇವೆ ನೀಡುತ್ತಾ ಬಂದಿದೆ. ಪ್ರಧಾನ ಕಛೇರಿಯನ್ನೊಳಗೊಂಡಂತೆ 4 ಶಾಖೆಗಳಿದ್ದು, ಇದೀಗ 5ನೇ ಶಾಖೆ ಕರ್ಕುಂಜೆಯಲ್ಲಿ ಆರಂಭಗೊಳ್ಳುತ್ತಿದೆ. ಈ ಬಾರಿ ರೂ.26,54,282.05 ಲಾಭ ಗಳಿಸಿದ್ದು, 11.5% ಡಿವಿಡೆಂಡ್ ನೀಡಲಾಗುವುದು ಎಂದರು.

ಸಂಘದಲ್ಲಿ ಒಟ್ಟು 5238 ಸದಸ್ಯರಿದ್ದು, 72,07,915 ಪಾಲು ಬಂಡವಾಳ ಹೊಂದಿರುತ್ತದೆ. ರೂ.22,62,66,212.08 ಠೇವಣಿ ಹೊಂದಿದ್ದು, ರೂ.7,80,57,431.00 ಇತರೆ ಆರ್ಥಿಕ ಸಂಸ್ಥೆಗಳಲ್ಲಿ ವಿನಿಯೋಗ ಮಾಡಲಾಗಿದೆ. ರೂ.,16,04,66,662.10 ಸದಸ್ಯರ ಹೊರಬಾಕಿ ಸಾಲವಿರುತ್ತದೆ.

ನಿರ್ದೇಶಕರುಗಳಾದ ನವೀನ್ ಎನ್., ಬಿ.ಎಂ. ನಾಗರಾಜ ಗಾಣಿಗ, ಶ್ರೀಮತಿ ಶಶಿಕಲಾ ನಾರಾಯಣ, ಶ್ರೀಮತಿ ಜಾನಕಿ, ಪುಟ್ಟಯ್ಯ ಗಾಣಿಗ, ತೇಜ ಗಾಣಿಗ, ಶ್ರೀಧರ ಗಾಣಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ ಗಾಣಿಗ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರಗಳನ್ನು ಮಂಡಿಸಿದರು. ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.

ಸತ್ಯನಾರಾಯಣ ಪ್ರಾರ್ಥಿಸಿ, ನಾಗರಾಜ ಗಾಣಿಗ ವಂದಿಸಿದರು. ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!