Saturday, October 12, 2024

ಹೋಲಿ ಕ್ರಾಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬೈಂದೂರು ಮಹಾಸಭೆ !

ಜನಪ್ರತಿನಿಧಿ (ಬೈಂದೂರು) : ಹೋಲಿ ಕ್ರಾಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬೈಂದೂರು 2023-24ನೇ ಸಾಲಿನ ಸಾಮಾನ್ಯ ಸಭೆಯು (ದಿನಾಂಕ 25-9-2024 ರಂದು) ಬೈಂದೂರಿನ ಸಹಕಾರಿಯ ಪ್ರಧಾನ ಕಛೇರಿ ವಠಾರದಲ್ಲಿ ನಡೆಯಿತು ಸಭೆಯು ಸಹಕಾರಿಯ ಅಧ್ಯಕ್ಷರಾದ ದ್ಯಾನೆಲ್ ನಜರೆತ್ ಇವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ನಮ್ಮ ಸಂಸ್ಥೆಯು ಬೆಳೆಯಲು ನಗುಮೊಗದ ಸೇವೆ ಹಾಗೂ ತಾಳ್ಮೆಯೇ ಕಾರಣ ಎಂದು ತಿಳಿಸಿದರು.

ಸಹಕರಿಯ ಸದಸ್ಯರುಗಳಿಗೆ ಸಕಾಲದಲ್ಲಿ ತ್ವರಿತ ಸೇವೆಯನ್ನು ಒದಗಿಸುವುದೇ ನಮ್ಮ ದ್ಯೇಯ ಎಂದು ತಿಳಿಸುತ್ತಾ  ಈಗಾಗಲೇ ಎರಡು ಶಾಖೆಗಳನ್ನು ಪ್ರಾರಂಭಿಸಿದ್ದು ಮುಂದಿನ ತಿಂಗಳ ಮೊದಲ ವಾರದಲ್ಲಿ ಸಂತೆಕಟ್ಟೆಯಲ್ಲಿ ನೂತನ ಶಾಖೆಯನ್ನು ತೆರೆಯುವುದಾಗಿ ತಿಳಿಸಿದರು. ಈ ವರ್ಷ ಸಹಾಕಾರಿಯ ಅ ತರಗತಿಯ ಸದಸ್ಯರುಗಳಿಗೆ 8.5% ಡಿವಿಡೆಂಡ್ (ಲಾಭಾಂಶ ) ನೀಡುವುದಾಗಿ ಘೋಷಿಸಿದರು.

ವೇದಿಕೆಯಲ್ಲಿ ಸಹಕಾರಿಯ ನಿರ್ದೇಶಕರಾದ ಜೆಸ್ಸಿಂತಾ ಡಿ ನಜರೆತ್,ಮಥಾಯಸ್ ರೆಬೆಲ್ಲೋ, ಪ್ಲಾವಿಯಾ ರೆಬೆಲ್ಲೋ, ರೀನಾ ವಿಲ್ಸನ್ ಗೋಮ್ಸ್, ಬ್ರಾಯನ್ ಡುಮಿಂಗ್ ಡಯಾಸ್, ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ವಿಲಿಯಂ ಗೋಮ್ಸ್, ಉಪ್ಪುಂದ ಶಾಖೆಯ ಶಾಖಾ ವ್ಯವಸ್ಥಾಪಕರಾದ ಉದಯ ಎಸ್. ತ್ರಾಸಿ ಶಾಖೆಯ ಶಾಖಾ ವ್ಯವಸ್ಥಾಪಕರಾದ ಚೇತನ್ ಸೀತಾರಾಮ್ ಗೌಡ ಉಪಸ್ಥಿತರಿದ್ದರು., S. S. L. C ಹಾಗೂ ಪ್. P. U. C ಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು.

ಅನುರಾಧ ಕಾರ್ಯಕ್ರಮವನ್ನು ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ವಿಲಿಯಂ ಗೋಮ್ಸ್ ರವರು ವರದಿ ವಾಚಿಸಿದರು ನಾಗಶ್ರೀ ಸ್ವಾಗತಿಸಿ, ನಾಗರತ್ನ ರವರು ವಂದನಾರ್ಪಣೆ ಗೈದರು,  ಸಹಕಾರಿಯ ಸಿಬ್ಬಂದಿ ವರ್ಗದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!