Sunday, October 13, 2024

ಧರ್ಮಾರ್ಥವಾಗಿ ಭೂಮಾಲಿಕರಿಂದ ಭೂಮಿ ಕೇಳುವಂತಿಲ್ಲ: ಹೈಕೋರ್ಟ್ ಆದೇಶ

‌ದಾನಪತ್ರ ಪಡೆದು ಭೂಮಿ ಪಡೆಯುವ ಸ್ಥಳೀಯಾಡಳಿತದ ಕ್ರಮ ಸರಿಯಲ್ಲ 

(ಜನಪ್ರತಿನಿಧಿ ಪತ್ರಿಕೆ ವರದಿ)
ದಾನಪತ್ರದ ಮೂಲಕ ಭೂಮಿ ಪಡೆದು ಅನುಮತಿ ನೀಡುವ ಸ್ಥಳೀಯಾಡಳಿತ ವಿರುದ್ಧ ಹೈಕೋರ್ಟ್ ಗರಂ ಆಗಿದೆ. ಖಾಸಗಿ ಭೂಮಿ ಕೃಷಿಯೇತರ ಉದ್ದೇಶಕ್ಕೆ ಬಳಸಲು ಸೂಕ್ತ ಪ್ರಾಧಿಕಾರದಿಂದ ಅನುಮತಿ ಪಡೆದ ಮೇಲೆ ಭೂಮಿಯ ಮಾಲೀಕರು ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್ ಪುರಸಭೆ ಮುಂತಾದ ಸ್ಥಳೀಯ ಸಂಸ್ಥೆಗಳಲ್ಲಿ ಸದ್ರಿ ಭೂಮಿಯ ಕುರಿತು ಖಾತೆ ಬರೆಸಲು ಹೋದಾಗ, ಕೃಷಿಯೇತರ ಭೂಮಿಯ ಒಂದಂಶವನ್ನು ಮಾರಾಟ ಮಾಡಲು ಅಪೇಕ್ಷಿಸಿದಾಗ “ಸಿಂಗಲ್ ಲೇ ಔಟ್” ಪ್ಲಾನ್ ನೀಡುವಾಗ ಮತ್ತು ಕಟ್ಟಡ ಪರವಾನಿಗೆ ಪಡೆಯಲು ಹೋದಾಗ ಸ್ಥಳೀಯ ಸಂಸ್ಥೆಗಳು ಭೂಮಿಯ ಅಂಶಿಕ ವಿಸ್ತೀರ್ಣವನ್ನು ಸಾರ್ವಜನಿಕ ರಸ್ತೆ ನಿರ್ಮಿಸುವ

ಸಂಸ್ಥೆಗಳಿಗೆ ಪ್ರತಿಫಲ ಪಡೆಯದೆ ದಾನ ಪತ್ರದ ಮೂಲಕ ಬರೆದು ಕೊಡುವ ಷರತ್ತನ್ನು ವಿಧಿಸುತ್ತಿರುವುದು ಕಳೆದ ಅನೇಕ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಇದು ಸಾಮಾನ್ಯ ಬಡವರಿಗಂತೂ ದೊಡ್ಡ ತೊಂದರೆಯಾಗಿದೆ. ಇನ್ನು ರಸ್ತೆಯ ಬದಿಯಲ್ಲಿ 2, 3 ಸೆಂಟ್ಸು ಜಾಗ ಇದ್ದರೆ ಅದರಲ್ಲಿ ಎರಡು ಸೆಂಟ್ಸ್ ಜಾಗ ಬಿಟ್ಟುಕೊಡಬೇಕು. ಈ ರೀತಿ ಷರತ್ತನ್ನು ವಿಧಿಸುವಾಗ ಅದಕ್ಕೆ ಒಂದು ನಿರ್ದಿಷ್ಟ ಮಾನದಂಡವೆಂಬುವುದೇ ಇಲ್ಲ. ಒಂದೊಂದು ಪ್ರಕರಣದಲ್ಲಿ ಒಂದೊಂದು ಮಾನದಂಡ ಬಳಸಿ ಆದೇಶ ಮಾಡಲಾಗುತ್ತದೆ ಇದರಿಂದ ರಾಜ್ಯಾದಂತ ಸಾವಿರಾರು ಅನುಭವಿಸುತ್ತಿದ್ದಾರೆ. ಅಲ್ಲದೇ ಇದು ಭ್ರಷ್ಟಾಚಾರಕ್ಕೆ ಮತ್ತೊಂದು ಅವಕಾಶ ಕಲ್ಪಸಿದಂತೆ ಕೂಡ ಆಗಿದೆ.

ಈ ರೀತಿಯ ಷರತ್ತು ವಿಧಿಸುವುದು ಕಾನೂನು ಬಾಹಿರ ಎಂದು ಸಾರ್ವಜನಿಕ ವಲಯದಲ್ಲಿ ವಿರೋಧ ವಾಗುತ್ತಾ ಇದ್ದರೂ ನಿರ್ದಿಷ್ಟ ಪ್ರಕರಣವನ್ನು ಹಿಡಿದುಕೊಂಡು ಉಚ್ಚ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಿರಲಿಲ್ಲ. ಆದರೆ ಇತ್ತೀಚಿಗೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಿ ಅನೇಕ ರಿಟ್ ಅರ್ಜಿಗಳು ದಾಖಲಾಗಿ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ 9408/2020, 14095/2021, 14975/2021, 19736/2021, 19737/2021, 18362/2023, 38181 /2024, 35503/2004 ಹಾಗೂ ಇತರ ಪಕರಣಗಳಲ್ಲಿ ಸಹವಾದ ಅದೇಶ ಮಾಡಿ ಕರೀತಿದಾನ ಪತ್ರ ಬರೆದುಕೊಡಬೇಕೆಂದು ಷರತ್ತು ಕಾನೂನು ಹೇಳಿದೆ.

ಉಚ್ಛ ನ್ಯಾಯಾಲಯವು ಅದಕ್ಕೆ ನಿರ್ದಿಷ್ಟ ಕಾರಣ ನೀಡಿದ್ದು ಯಾವುದೇ ಖಾಸಗಿ ಭೂಮಿ ರಸ್ತೆ ನಿರ್ಮಾಣದಂತಹ ಸಾರ್ವಜನಿಕ ಉದ್ದೇಶಕ್ಕೆ ಬಳಸುವುದಕ್ಕೆ ಭೂ ಸ್ವಾಧೀನ ಕಾಯಿದೆಯಡಿಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಕೈಗೊಂಡು ಮಾಲೀಕರಿಗೆ ಪರಿಹಾರ ನೀಡಿಯೇ ಪಡೆಯಬೇಕೇ ಹೊರತು ಧರ್ಮಾರ್ಥವಾಗಿ ಬರೆದುಕೊಡಬೇಕೆಂದು ಖಾಸಗಿ ಭೂಮಿಯ ಮಾಲೀಕರಲ್ಲಿ ಕೇಳುವಂತಿಲ್ಲ ಹಾಗೆ ಷರತ್ತು ವಿಧಿಸುವುದು ಮಾನವ ಹಕ್ಕು ಉಲ್ಲಂಘನೆ ಹಾಗೂ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆ ಎಂದು ಉಚ್ಚ ನ್ಯಾಯಾಲಯ ಸಷ್ಟವಾಗಿ ಹೇಳಿದೆ.

ಇಷ್ಟಾಗಿಯೂ ಕೆಲವು ಸ್ಥಳೀಯ ಸಂಸ್ಥೆಗಳು ಇನ್ನೂ ಅದನ್ನು ಪಾಲಿಸುವುದಕ್ಕೆ ಮೀನ ಮೇಷ ಎಣಿಸುತ್ತಿರುವುದರಿಂದ ಇದರ ಬಗ್ಗೆ ಸಾರ್ವ ಮೇಷ ಸೂಕ್ತ ತಿಳುವಳಿಕೆ ನೀಡಿ ಸ್ಥಳೀಯ ಸಂಸ್ಥೆಗಳ ಈ ಕಾನೂನು ಬಾಹಿರ ನಡೆವಳಿಕೆಯನ್ನು ಒಕ್ಕೊರಲಿನಿಂದ ವಿರೋಧಿಸಬೇಕಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!