spot_img
Wednesday, January 22, 2025
spot_img

ರಾಜ್ಯ ರಾಜಧಾನಿಗೆ ಎರಡನೇ ವಿಮಾನ ನಿಲ್ದಾಣದ ಚರ್ಚೆ | ನೆಲಮಂಗಲ ಅಥವಾ ಹಾರೋಹಳ್ಳಿಯಲ್ಲಿ ಸ್ಥಳ ಫೀಕ್ಸ್‌ !?

ಜನಪ್ರತಿನಿಧಿ (ಬೆಂಗಳೂರು) : ರಾಜಧಾನಿ ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣಕ್ಕೆ ಇನ್ನೂ ಜಾಗ ಎಲ್ಲಿಯೂ ಅಂತಿಮಗೊಂಡಿಲ್ಲ. ವಿಮಾನಗಳನ್ನು ನಿರ್ವಹಿಸಲು ಏರ್ ಸ್ಪೇಸ್ ಇಲ್ಲದಿರುವುದು ಇದಕ್ಕೆ ಮುಖ್ಯ ಸಮಸ್ಯೆ. ಈ ಸಂಬಂಧ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದು ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಎನ್ ಮಂಜುಳಾ ಹೇಳಿದ್ದಾರೆ.

ರಾಜ್ಯ ರಾಜಧಾನಿ ಬೆಂಗಳೂರು ಬೆಳವಣಿಗೆಯಾಗುತ್ತಿದ್ದು, 2ನೇ ವಿಮಾನ ನಿಲ್ದಾಣಕ್ಕಾಗಿ ಹಲವು ಸ್ಥಳಗಳನ್ನು ಗುರುತಿಸಲಾಗಿದೆ, ಆದರೆ ನಾವು ಯಾವುದನ್ನೂ ಅಂತಿಮಗೊಳಿಸಿಲ್ಲ. ನಗರದಲ್ಲಿ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣಗಳ ವ್ಯಾಪ್ತಿಗೆ ಒಳಪಡುವುದರಿಂದ ವಾಯು ಮಾರ್ಗ ಸಂಚಾರ ದಟ್ಟಣೆ ಮೂಲ ಸಮಸ್ಯೆಯಾಗಿದೆ.

ಈ ಸಂಬಂಧ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಾಹಕರು, ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ ಮತ್ತು ರಕ್ಷಣಾ ಅಧಿಕಾರಿಗಳೊಂದಿಗೆ ಯಲಹಂಕದ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ಕಳೆದ ವಾರ ಸರ್ಕಾರ ಮಾತುಕತೆ ನಡೆಸಿದೆ.

ಬೆಂಗಳೂರಿನ ಅಸ್ತಿತ್ವದಲ್ಲಿರುವ ಜಾಗವನ್ನು ಈ ವಿಮಾನ ನಿಲ್ದಾಣಗಳು 360 ಡಿಗ್ರಿಗಳಷ್ಟು ಆವರಿಸಿವೆ. ಅಕ್ಕಪಕ್ಕದ ಪ್ರದೇಶಗಳ ಆಕಾಶ ಮಾರ್ಗವೂ ಸಹ ಟ್ರಾಫಿಕ್ ನಿಂದ ಆವೃತವಾಗಿದೆ. ಏರ್‌ಸ್ಪೇಸ್ ಲಭ್ಯವಾದ ಬಳಿಕವೇ ಹೊಸ ವಿಮಾನ ನಿಲ್ದಾಣದ ಸ್ಥಳವನ್ನು ನಿಗದಿಗೊಳಿಸಬಹುದಾಗಿದೆ ಎಂದು ಮಂಜುಳಾ ಮಾಹಿತಿ ನೀಡಿದ್ದಾರೆ.

ಈ ಭಾಗದಲ್ಲಿ ಸಂಶೋಧನೆ ಮತ್ತು ಇತರ ವಿಮಾನ ಪರೀಕ್ಷೆ ಉದ್ದೇಶಗಳಿಗಾಗಿ ಕೊಯಮತ್ತೂರಿನವರೆಗೆ ವಾಯು ಜಾಗವನ್ನು ಬಳಸುತ್ತಾರೆ ಎಂದು HAL ಹೇಳಿದೆ. BIAL ದೇವನಹಳ್ಳಿಯ ಆಚೆಗೆ 30 ಕಿಲೋಮೀಟರ್‌ಗಳಷ್ಟು ವಾಯುಪ್ರದೇಶವನ್ನು ಬಳಸುತ್ತದೆ, ಆದರೆ ಭಾರತೀಯ ವಾಯುಪಡೆಯು ಹಾಸನದವರೆಗೆ ವಾಯುಪ್ರದೇಶವನ್ನು ಬಳಸುತ್ತಿದೆ.

ಅವರು ನಮಗೆ ಲಭ್ಯವಾಗುವಂತೆ ಮಾಡಬಹುದಾದ ವಾಯು ಜಾಗದ ಬಗ್ಗೆ ನಮಗೆ ಮಾಹಿತಿ ನೀಡಲು ನಾವು ಅವರನ್ನು ಕೇಳಿದ್ದೇವೆ. ಕೆಲವು ರೀತಿಯ ಒಮ್ಮತಕ್ಕೆ ಬರಬೇಕಾಗಿದೆ. ಅವರು 24×7 ವಿಮಾನಗಳನ್ನು ನಿರ್ವಹಿಸುವುದಿಲ್ಲ. ಆದ್ದರಿಂದ, ಉದ್ದೇಶಿತ ವಿಮಾನ ನಿಲ್ದಾಣವು ಕಾರ್ಯನಿರ್ವಹಿಸಲು ಕೆಲವು ಸಮಯವನ್ನು ಲಭ್ಯಗೊಳಿಸಬೇಕಾಗಿದೆ ಎಂದು ಅವರು ಹೇಳಿದರು.

ನಾಗರಿಕ ವಿಮಾನಯಾನ ಸಚಿವಾಲಯ ಅಥವಾ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ನೆರವಿನಿಂದ ಮಾತ್ರ ಸಮಸ್ಯೆಯನ್ನು ಪರಿಹರಿಸಬಹುದು. ನಮ್ಮ ಎರಡನೇ ವಿಮಾನ ನಿಲ್ದಾಣವನ್ನು ಜಾಗವನ್ನು ಅಂತಿಮಗೊಳಿಸಲು ಕೆಲವು ತಾಂತ್ರಿಕ ಸಮಸ್ಯಗಳನ್ನು ಮೊದಲು ಸರಿಪಡಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದ ಎಂದು ಮಂಜುಳಾ ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!