Saturday, October 12, 2024

ನಿಮಗೆ ನ್ಯಾಯ ಸಿಗಲಿ ಎನ್ನುವುದು ನನ್ನ ಬಯಕೆ | ನ್ಯಾಯಾಂಗ ವ್ಯವಸ್ಥೆಗೆ ತಲೆ ಬಾಗಿ : ಸಿಎಂ ಸಿದ್ದರಾಮಯ್ಯಗೆ ಈಶ್ವರಪ್ಪ ಸಲಹೆ

ಜನಪ್ರತಿನಿಧಿ (ಶಿವಮೊಗ್ಗ) : ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್‌ನಲ್ಲಿ ತೀರ್ಪು ಬರುತ್ತಿದ್ದಂತೆ ರಾಜಕೀಯ ವಲಯದಲ್ಲಿ ಆರೋಪ ಪ್ರತ್ಯಾರೋಪ ರೆಕ್ಕೆಪುಕ್ಕ ಪಡೆದುಕೊಂಡಿವೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಮತ್ತೊಂದೆಡೆ ಬಿಜೆಪಿಗೆ ನೈತಿಕತೆಯ ಬಗ್ಗೆ ಮಾತನಾಡುವ ಹಕ್ಕು ಇಲ್ಲ ಎಂದು ಕಾಂಗ್ರೆಸ್ ವಾಗ್ದಾಳಿ ಮಾಡಿದೆ. ಈ ನಡುವೆ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಅವರು ಸಿದ್ದರಾಮಯ್ಯ ಅವರ ಕುಟುಂಬಸ್ಥರ ಮೇಲಿನ ಆರೋಪಕ್ಕೆ ಅನುಕಂಪ ತೋರಿ ಅಚ್ಚರಿ ಮೂಡಿಸಿದ್ದಾರೆ.

ಇಂದು(ಬುಧವಾರ) ಶಿವಮೊಗ್ಗದಲ್ಲಿ ವರದಿಗಾರರರಿಗೆ ಪ್ರತಿಕ್ರಿಯಿಸಿ ಮಾತನಾಡಿದ ಈಶ್ವರಪ್ಪ, ‘ಸಿಎಂ ಸಿದ್ದರಾಮಯ್ಯ ಬಗ್ಗೆ ವೈಯಕ್ತಿಕವಾಗಿ ನಾನು ಏನು ಹೇಳುವುದಿಲ್ಲ. ತೀರ್ಪು ಬರುವ ಮುನ್ನ ನ್ಯಾಯ ಸಿಗುತ್ತದೆಂದು ಸಿಎಂ ಹೇಳುತ್ತಿದ್ದರು. ತೀರ್ಪು ಬಂದ ನಂತರ ತೀರ್ಪಿನ ಬಗ್ಗೆ ಮನ್ನಣೆ ಕೊಡುವುದಿಲ್ಲವೆನ್ನುತ್ತಿದ್ದಾರೆ. ಕೋರ್ಟ್ ತೀರ್ಪಿಗೆ ಸಿದ್ದರಾಮಯ್ಯ ಬದ್ಧರಾಗುತ್ತಾರೋ ಇಲ್ಲವೋ ಗೊತ್ತಿಲ್ಲ. ಭಗವಂತನ ಧಯೆಯಿಂದ ಸಿದ್ದರಾಮಯ್ಯ ಅವರ ಪರವಾಗಿ ನ್ಯಾಯ ಸಿಗಲಿ’ ಎಂದು ಆಶಿಸಿದ್ದಾರೆ.

ಸಿದ್ದರಾಮಯ್ಯ ಅವರ ಪತ್ನಿ ಮುಗ್ದ ಹೆಣ್ಣು ಮಗಳು, ಆಕೆಗೆ ಅನ್ಯಾಯವಾಗಬಾರದು. ಸಾತ್ವಿಕ ಹೆಣ್ಣು ಮಗಳು. ನಾನು ಭಗವಂತನಿಗೆ ಪ್ರಾರ್ಥನೆ ಮಾಡ್ತೇನೆ. ಆ ತಾಯಿಗೆ ಅನ್ಯಾಯ ಆಗಬಾರದು. ಸಹಿ ಮಾಡು ಅಂದರೆ ಮನೆಯವರು ಸಹಿ ಮಾಡುತ್ತಾರೆ. ಆ ತಾಯಿಗೆ ಅನ್ಯಾಯ ಆಗಬಾರದು’ ಎಂದು ಈಶ್ವರಪ್ಪ  ಹೇಳಿದರು.

ನ್ಯಾಯಾಂಗ ವ್ಯವಸ್ಥೆಗೆ ತಲೆಬಾಗಿ : ಸಿಎಂ ಸಿದ್ದರಾಮಯ್ಯಗೆ ಈಶ್ವರಪ್ಪ ಸಲಹೆ

ಸಿದ್ದರಾಮಯ್ಯ ರಾಜೀನಾಮೆ ಕೊಡಲ್ಲ ಅಂತಿದ್ದಾರೆ. ಹಾಗಾದರೆ ಕೋರ್ಟ್ ಮುಚ್ಚುಬಿಡಿ, ಯಾಕೆ ಬೇಕು ಕೋರ್ಟ್. ನಿಮ್ಮ ಪರವಾಗಿ ತೀರ್ಪು ಬಂದರೆ ನ್ಯಾಯ, ನಿಮ್ಮ‌ ವಿರುದ್ಧ ತೀರ್ಪು ಬಂದರೆ ಅನ್ಯಾಯವೆ? ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಸರಿಯಾಗಿ ತೀರ್ಮಾನ ತೆಗೆದುಕೊಳ್ಳಬೇಕು. ಸಿದ್ದರಾಮಯ್ಯನವರೇ ನೀವು ಸುಪ್ರೀಂ ಕೋರ್ಟ್ ಗೆ ಹೋಗಿ. ಆದರೆ ನ್ಯಾಯಾಂಗ ವ್ಯವಸ್ಥೆಗೆ ತಲೆಬಾಗಿ’ ಎಂದು ಸಿದ್ದರಾಮಯ್ಯಗೆ ಈಶ್ವರಪ್ಪ ಸಲಹೆ ನೀಡಿದ್ದಾರೆ.

‘ಸಿದ್ದರಾಮಯ್ಯನವರೇ, ನಿಮಗೆ ನ್ಯಾಯ ಸಿಗಲಿ ಎನ್ನುವುದು ನನ್ನ ಬಯಕೆ. ರಾಜೀನಾಮೆ ಕೊಡುವುದಿಲ್ಲ ಎನ್ನುವುದು ಕಾಂಗ್ರೆಸ್ ಪಕ್ಷಕ್ಕೆ ಶೋಭೆ ತರುವುದಿಲ್ಲ. ನನ್ನ ಮೇಲೆ ಬಂದ ಆರೋಪದಿಂದ ನಾನು ಕೂಡಲೇ ರಾಜೀನಾಮೆ ನೀಡಿದ್ದೇನೆ, ಹಾಗಾಗಿ ನನಗೆ ಈ ಬಗ್ಗೆ ಮಾತನಾಡುವುದಕ್ಕೆ ನೈತಿಕ ಹಕ್ಕಿದೆ. ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ ನ್ಯಾಯಾಂಗ ವ್ಯವಸ್ಥೆಗೆ ತಲೆ ಬಾಗಿ. ಕಾನೂನಿನಲ್ಲಿ ಏನೆಲ್ಲಾ ಅವಕಾಶ ಇದೆ ಅದು ಮಾಡಿ’ ಎಂದು ಸಿದ್ದರಾಮಯ್ಯ ಅವರಿಗೆ ಕಿವಿಮಾತು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!