spot_img
Monday, March 24, 2025
spot_img

ಸಪ್ತಸ್ವರ ವಿವಿಧೋದ್ದೇಶ ಸಹಕಾರ ಸಂಘ ತಲ್ಲೂರು: 65ಕೋಟಿ ಠೇವಣಾತಿ| 14% ಡಿವಿಡೆಂಡ್ ಘೋಷಣೆ 

kundapura: ಸಪ್ತಸ್ವರ ವಿವಿಧೋದ್ದೇಶ ಸಹಕಾರ ಸಂಘ ತಲ್ಲೂರು ಪ್ರಗತಿಯ ಪಥದಲ್ಲಿ ಮುನ್ನೆಡೆಯುತ್ತಿದ್ದು ವರದಿ ವರ್ಷದಲ್ಲಿ ರೂ.65,64,62,487 ವಿವಿಧ ಠೇವಣಾತಿಗಳನ್ನು ಸಂಗ್ರಹಿಸಿದ್ದು, ಒಟ್ಟು ರೂ. 2,85,750 ಪಾಲು ಬಂಡವಾಳವನ್ನು ಹೊಂದಿದೆ. ವರದಿ ವರ್ಷದಲ್ಲಿ 50 ಲಕ್ಷ ಲಾಭ ಗಳಿಸಿದ್ದು, ಶೇ 14 ಡಿವಿಡೆಂಡ್ ನೀಡುವುದಾಗಿ ಸಂಘದ ಅಧ್ಯಕ್ಷರಾದ ಚಂದ್ರ ದೇವಾಡಿಗ ಹರ್ಕೂರು ತಿಳಿಸಿದರು.
ಅವರು ಸೆ.24ರಂದು ತಲ್ಲೂರು ಜೈ ದುರ್ಗಾಮಾತಾ ಕಾಂಪ್ಲೆಕ್ಸ್‍ನ ಸಭಾಭವನದಲ್ಲಿ ನಡೆದ ಸಪ್ತಸ್ವರ ವಿವಿಧೋದ್ದೇಶ ಸಹಕಾರ ಸಂಘ ತಲ್ಲೂರು ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘವು ಒಟ್ಟು 17,53,369.78 ವಿವಿಧ ನಿಧಿಗಳನ್ನು ಹೊಂದಿದೆ. ರೂ.3,12,443.05 ಸವಕಳಿ ನಿಧಿಯನ್ನು ಹೊಂದಿದೆ. ಸದಸ್ಯರಿಗೆ ವಿವಿಧ ಉದ್ದೇಶಗಳಿಗೆ ರೂ.13,31,26,787 ಸಾಲ ನೀಡಲಾಗಿದೆ. ವಿವಿಧ ಬ್ಯಾಂಕ್ ಖಾತೆಗಳಲ್ಲಿ ಒಟ್ಟು ರೂ.10,50,76,476.91 ಹೊಂದಿದೆ. ರೂ.9,16,23,938 ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಠೇವಣಿಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಭಾರತೀಯ ಯೋಧ ಭರತ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷರಾದ ಚಂದ್ರಶೇಖರ ದೇವಾಡಿಗ ನಾಡ, ನಿರ್ದೇಶಕರಾದ ಎಮ್.ಸಂಜೀವ ದೇವಾಡಿಗ ತಲ್ಲೂರು, ಬಾಬು ದೇವಾಡಿಗ ಹೆಮ್ಮಾಡಿ, ಬಸವ ದೇವಾಡಿಗ ಉಪ್ಪಿನಕುದ್ರು, ಕುಷ್ಟ ದೇವಾಡಿಗ ಹಟ್ಟಿಯಂಗಡಿ, ರಾಜೇಶ ದೇವಾಡಿಗ ತ್ರಾಸಿ, ಶಾರದಾ ದೇವಾಡಿಗ ನಾಗೂರು, ಶೀಲಾವತಿ ದೇವಾಡಿಗ ಪಡುಕೋಣೆ, ಜಯಂತಿ ದೇವಾಡಿಗ ಬಡಾಕೆರೆ, ಸುಮ ದೇವಾಡಿಗ ಹೆಮ್ಮಾಡಿ ಉಪಸ್ಥಿತರಿದ್ದರು.
ಸುಮ ದೇವಾಡಿಗ, ಶೀಲಾವತಿ ದೇವಾಡಿಗ ಪ್ರಾರ್ಥನೆ ಮಾಡಿದರು. ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶಾಲ ದೇವಾಡಿಗ ತಲ್ಲೂರು ಸ್ವಾಗತಿಸಿ, ವರದಿ ಮಂಡಿಸಿದರು. ದೀಪಿಕಾ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿ, ಶೀಲಾವತಿ ದೇವಾಡಿಗ ವಂದಿಸಿದರು.

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!