Saturday, October 12, 2024

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ 74 ಲಕ್ಷ ಲಾಭ : ಶೇ.13 ಡಿವಿಡೆಂಡ್ ಘೋಷಣೆ

ಕುಂದಾಪುರ: ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರು ಗ್ರಾಮಗಳ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘವು ಒಟ್ಟು 7658 ಸದಸ್ಯರನ್ನು ಹೊಂದಿದ್ದು, ರೂ.2,04,17,050 ಪಾಲು ಬಂಡವಾಳವನ್ನು ಹೊಂದಿದೆ. ವರದಿ ವರ್ಷದ ಅಂತ್ಯಕ್ಕೆ ವಿವಿಧ ಠೇವಣಾತಿಗಳಿಂದ ರೂ.38,99,58,237 ಠೇವಣಾತಿಗಳನ್ನು ಸಂಗ್ರಹಿಸಿದೆ. ವಾರ್ಷಿಕ ರೂ.74,62,132.11 ನಿವ್ವಳ ಲಾಭ ಗಳಿಸಿದೆ. ಶೇ.13 ಪಾಲು ಮುನಾಫೆ ನೀಡಲು ನಿರ್ಧರಿಸಲಾಗಿದೆ ಎಂದು ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಂ.ಮಹೇಶ ಹೆಗ್ಡೆ ಹೇಳಿದರು.

ಅವರು ಸೆ.25ರಂದು ಬಿದ್ಕಲ್‍ಕಟ್ಟೆಯ ಶ್ರೀ ಮಹಾಲಕ್ಷ್ಮೀ ಸಭಾಭವನದಲ್ಲಿ ನಡೆದ ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘವು ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸುತ್ತಿದ್ದು ವರದಿ ಸಾಲಿನಲ್ಲಿ 15.97 ಠೇವಣಿ ಸಂಗ್ರಹದಲ್ಲಿ ಹೆಚ್ಚಳವಾಗಿದೆ. ರೂ.35,69,000 ಅಲ್ಪಾವಧಿ ಸಾಲ, ರೂ.5,79,68,142 ಮಧ್ಯಮಾವಧಿ ಸಾಲ, ರೂ.13,78,04,617 ದೀರ್ಘಾವಧಿ ಸಾಲ, ರೂ.46,98,88,892 ಇತರೆ ಸಾಲ ನೀಡಲಾಗಿದೆ. ವರದಿ ಸಾಲಿನಲ್ಲಿ ಶೇ.99.07 ಸಾಲ ಮರುಪಾವತಿ ಆಗಿದೆ. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ರೂ.16,46,68,100 ಸಾಲವನ್ನು ಪಡೆದು ಸದಸ್ಯರ ವಿವಿಧ ಉದ್ದೇಶಗಳಿಗೆ ನೀಡಲಾಗಿದೆ ಎಂದರು.

ಸಂಘದ ನಿಧಿ ಮತ್ತು ಧನ ವಿನಿಯೋಗ ಒಟ್ಟು ರೂ.17,76,07,993.71 ವಿನಿಯೋಗಿಸಲಾಗಿದೆ. ವರದಿ ವರ್ಷದಲ್ಲಿ ವಿವಿಧ ಖಾತೆಗಳಿಗೆ ಸಂಬಂಧಿಸಿದಂತೆ ರೂ.92,86,945 ಕಾದಿರಿಸಲಾಗಿದೆ. ಸಂಘದ ವ್ಯಾಪಾರ ವಹಿವಾಟು ಲಾಭವು ರೂ.5,99,911.37 ಆಗಿದೆ. ಸಂಘದ ಆಡಿಟ್ ವರ್ಗೀಕರಣದಲ್ಲಿ ‘ಎ’ ತರಗತಿ ಪಡೆದಿದೆ. ಸಂಘದ ವ್ಯಾಪ್ತಿಯಲ್ಲಿ ಒಟ್ಟು 157 ಗುಂಪುಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

ಈ ಸಂದರ್ಭದಲ್ಲಿ ಕುಂದಾಪುರ ಉಪ ವಿಭಾಗದಲ್ಲಿ ಸಹಾಯಕ ನಿಬಂಧಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದ ಅರುಣ್ ಕುಮಾರ್ ಎಸ್.ವಿ ಹಾಗೂ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್ ಕಟ್ಟೆಯ ಉಪಪ್ರಾಂಶುಪಾಲರಾದ ಕರುಣಾಕರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.

ಸಂಘದ ಉಪಾಧ್ಯಕ್ಷ ಸಿ.ಜಗನ್ನಾಥ ಶೆಟ್ಟಿ ಚಿಟ್ಟೆಬೈಲು, ನಿರ್ದೇಶಕರಾದ ಹೆಚ್.ದೀನಪಾಲ ಶೆಟ್ಟಿ, ಹೆಚ್.ಹರಿಪ್ರಸಾದ್ ಶೆಟ್ಟಿ, ಎಂ. ದಿನೇಶ ಹೆಗ್ಡೆ, ಲವಕರ ಶೆಟ್ಟಿ, ಹೆಚ್.ಬಾಲಕೃಷ್ಣ ಹೆಗ್ಡೆ, ಪ್ರಶಾಂತ್, ಅನಿಲಕುಮಾರ್ ಶೆಟ್ಟಿ, ಶ್ರೀಮತಿ ಉಷಾ ಶೆಟ್ಟಿ, ಶ್ರೀಮತಿ ಚೈತ್ರಾ ಅಡಪ, ಗಣೇಶ, ರಾಜು, ವೃತ್ತಿಪರ ನಿರ್ದೇಶಕರಾದ ಉದಯ ಕುಲಾಲ, ದ.ಕ ಜಿಲ್ಲಾ ಕೇಂದ್ರ ಬ್ಯಾಂಕ್ ವಲಯ ಮೇಲ್ವಿಚಾರಕ ಸಂದೀಪ್ ಶೆಟ್ಟಿ ಉಪಸ್ಥಿತರಿದ್ದರು.

ನಿರ್ದೇಶಕ ಪ್ರಶಾಂತ್ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾರ್ವತಿ ಎಂ ವರದಿ ಮಂಡಿಸಿದರು. ಸಿಬ್ಬಂದಿ ರಂಜಿತ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!