spot_img
Wednesday, January 22, 2025
spot_img

ನಿರಂಜನ ನೂರು : ರಂಗ ಓದು ಸಂವಾದ ಕಾರ್ಯಕ್ರಮ

ಜನಪ್ರತಿನಿಧಿ (ಕುಂದಾಪುರ) : ನಿರಂಜನರ ನೂರನೇ ವರ್ಷಾಚರಣೆ ಸಂದರ್ಭ ಕನ್ನಡ ಸಾಂಸ್ಕೃತಿಕ ಸಾಹಿತ್ಯಿಕ ವಲಯದಲ್ಲಿ ಅವರ ಕುರಿತ ನಿರ್ಲಕ್ಷ್ಯ ಕಂಡುಬರುತ್ತಿದೆ ಅಂತ ಇಲ್ಲಿನ ಸಾಂಸ್ಕೃತಿಕ ಸಂಘಟನೆ ಸಮುದಾಯ ಕುಂದಾಪುರ ,ಕರ್ನಾಟಕ ದಲಿತ ಸಂಘರ್ಷ ಸಮಿತಿ ಕುಂದಾಪುರ ತಾಲೋಕು ಘಟಕ ಮತ್ತು ಅಕ್ಷರ ಸಾಂಸ್ಕೃತಿಕ ಸಂಸ್ಥೆ ವಡೇರಹೋಬಳಿ ಜಂಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ʼನಿರಂಜನ ನೂರು : ರಂಗ ಓದುʼ ಕಾರ್ಯಕ್ರಮ‌ದ ಸಂವಾದ ಕಾರ್ಯಕ್ರಮ‌ದಲ್ಲಿ ಅಭಿಪ್ರಾಯ ವ್ಯಕ್ತವಾಯಿತು‌.

ನಿರಂಜನರ ಕಿರುಪರಿಚಯದೊಂದಿಗೆ ಸಂವಾದವನ್ನು ಕವಿ,ನಾಟಕಕಾರ ಸಚಿನ್ ಅಂಕೋಲ ನಡೆಸಿಕೊಟ್ಟರು. ಪ್ರಾಧ್ಯಾಪಕ ಜಯಪ್ರಕಾಶ್ ಶೆಟ್ಟಿಯವರು ಮಾತನಾಡಿ, ಕಯ್ಯೂರು ಹೋರಾಟ ಕೂಡ ಸ್ವಾತಂತ್ರ್ಯ ಹೋರಾಟದ ಭಿನ್ನ ಮಾದರಿ ಎಂದು ವಿವರಿಸಿದರು.

ಸಂವಾದಕ್ಕೂ ಮುನ್ನ ನಿರಂಜನರ ಧ್ವನಿ ಕಥೆಯನ್ನು ರಂಗಕರ್ಮಿ ವಾಸುದೇವ ಗಂಗೇರರ ನಿರ್ದೇಶನದಲ್ಲಿ ರಂಗ ಓದು ಮಾದರಿಯಲ್ಲಿ ಸಮುದಾಯ ಸಂಗಾತಿಗಳು ಪ್ರಸ್ತುತಪಡಿಸಿದರು.

ಡಾ.ಸದಾನಂದ ಬೈಂದೂರು, ಗಣೇಶ ಶೆಟ್ಟಿ, ಚಿನ್ನ ವಿ.ಗಂಗೇರ, ಸ್ಮಿತಾ, ಕಿರಣ, ಲಂಕೇಶ್, ಸಂಧ್ಯಾ ಭಟ್, ಶಂಕರ ಆನಗಳ್ಳಿ ಕತೆಯನ್ನು ಅಭಿನಯಿಸಿ ಓದಿದರು. ಹಿನ್ನೆಲೆ ಸಂಗೀತದಲ್ಲಿ ಕೆ.ಎಂ.ಬಾಲಕೃಷ್ಣ ಸಹಕರಿಸಿದರು.

ಕಾರ್ಯಕ್ರಮ ವಾಸುದೇವ ಗಂಗೇರ ರಾಗ ಸಂಯೋಜನೆಯ ಸಂವಿಧಾನ ಪ್ರಸ್ತಾವನೆಯ ಹಾಡಿನೊಂದಿಗೆ ಆರಂಭವಾಯಿತು.

ಸಮುದಾಯ ಕುಂದಾಪುರ ಅಧ್ಯಕ್ಷ ಡಾ.ಸದಾನಂದ ಬೈಂದೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಿಮ್ಮಪ್ಪ ಗುಲ್ವಾಡಿ ಕಾರ್ಯಕ್ರಮ ನಿರೂಪಿಸಿದರು. ಅಕ್ಷರ ಸಾಂಸ್ಕೃತಿಕ ಸಂಸ್ಥೆಯ ಕಾರ್ಯದರ್ಶಿ ರವಿ ವಿ.ಎಂ. ವಂದನಾರ್ಪಣೆ ಸಲ್ಲಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!