Saturday, October 12, 2024

ಅಖಿಲ ಕರ್ನಾಟಕ ಪದ್ಮಬ್ರಾಹ್ಮಣ ಪುರೋಹಿತ ಸಂಘದ ಅಧ್ಯಕ್ಷರಾಗಿ ಡಾ.ಬಸವರಾಜ್ ಶೆಟ್ಟಿಗಾರ್ ಪುನರಾಯ್ಕೆ

ಕುಂದಾಪುರ: ಅಖಿಲ ಭಾರತ ಪದ್ಮಬ್ರಾಹ್ಮಣ ಪರೋಹಿತ ಸಂಘ (ರಿ.) ಇದರ ಕರ್ನಾಟಕ ರಾಜ್ಯದ ಪದ್ಮಬ್ರಾಹ್ಮಣ ಪುರೋಹಿತ ಸಂಘದ ರಾಜ್ಯಾಧ್ಯಕ್ಷರಾಗಿ ವಾಸ್ತುತಜ್ಞ, ಜ್ಯೋತಿಷಿ ಡಾ. ಬಸವರಾಜ್ ಶೆಟ್ಟಿಗಾರ್ ಕೋಟೇಶ್ವರ ಇವರನ್ನು 3 ವರ್ಷಗಳ ಅವಧಿಗೆ ಅಧ್ಯಕ್ಷರನ್ನಾಗಿ ಅಖಿಲ ಭಾರತ ಪದ್ಮಬ್ರಾಹ್ಮಣ ಪುರೋಹಿತ ಸಂಘದ ಅಧ್ಯಕ್ಷರಾದ ಬ್ರಹ್ಮಶ್ರೀ ಬೋಜ್ಜನ್ನ ಪಂತುಲು ಅವರು ಆಯ್ಕೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಆಡೆಪು ಹರೀಶ್, ಬ್ರಹ್ಮಶ್ರೀ ಪುಂಡಲೀಕಾನಂದ ತಾಟಿಪಾಮುಲು ಪಂತುಲು, ಕರ್ನಾಟಕದ ದತ್ತಾತ್ರೇಯ ಮಠದ ಆಸ್ತಾನ ವಿದ್ವಾಂಸರಾದ ಕೇಶವ ಮೂರ್ತಿ ಭಾರ್ಗಾವಾಚಾರ್ಯ, ಕೋಶಾಧಿಕಾರಿ ಹೈದರಬಾದ್ ತೆಲಂಗಾಣದ ರಮೇಶ್ ಋಷಿ ಉಪಸ್ಥಿತರಿದ್ದರು.

ವಾಸ್ತುತಜ್ಞ ಬಸವರಾಜ್ ಶೆಟ್ಟಿಗಾರ್‌ರವರು ಕೇರಳ ಪಯ್ಯನೂರು ಎಂಬಲ್ಲಿ ಅಧುನಿಕ ಜ್ಯೋತಿಷ್ಯ, ವಾಸ್ತುಶಾಸ್ತ್ರವನ್ನು ಅಧ್ಯಯನ ಮಾಡಿದ್ದು ಮದುವೆ, ಗೃಹಪ್ರವೇಶ, ಗಣಪತಿ ಹೋಮ ಇತರ ಪೂಜೆ ಪುರಸ್ಕಾರ, ಹೋಮ ಹವನಾದಿಗಳನ್ನು ಮಾಡುವುದರೊಂದಿಗೆ ತಾಂಬೂಲಪ್ರಶ್ನೆ, ಆರೂಢ ಪ್ರಶ್ನೆ, ಸ್ವರ್ಣಪ್ರಶ್ನೆ ಇಡುವುದರೊಂದಿಗೆ ಲಕ್ಷಾಂತರ ಜಾತಕ ಪರಿಶೀಲನೆ ಮತ್ತು ರಚನೆ ಮಾಡಿ ದೇಶ ವಿದೇಶದೆಲ್ಲೆಡೆ ಜನಾನುರಾಗಿಯಾಗಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!