spot_img
Wednesday, April 1, 2026
spot_img

ಜಡ್ಕಲ್, ಮುದೂರು ಗ್ರಾಮದಲ್ಲಿ ಕಸ್ತೂರಿ ರಂಗನ್ ವರದಿ ಆತಂಕ: ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ, ಸಂವಾದ

ಬೈಂದೂರು: ಕಸ್ತೂರಿ ರಂಗನ್ ವರದಿ ಅನುಷ್ಠಾನ ಮತ್ತು ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯ ಆತಂಕದಲ್ಲಿರುವ ಜಡ್ಕಲ್, ಮುದೂರು ಗ್ರಾಮಕ್ಕೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ ನೀಡಿ, ಅಲ್ಲಿನ ನಿವಾಸಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಶಾಸಕ ಗಂಟಿಹೊಳೆ, ಮೀಸಲು ಅರಣ್ಯ ಮತ್ತು ಬಫರ್ ಝೋನ್ ಪ್ರದೇಶಗಳಲ್ಲಿ ವಾಸಮಾಡುತ್ತಿರುವ ನಿವಾಸಿಗಳಿಗೆ ಕಸ್ತೂರಿ ರಂಗನ್ ವರದಿ ಅನುಷ್ಠಾನದಿಂದ ಆಗಬಹುದಾದ ಸಮಸ್ಯೆಗಳಿಗೆ ಭಯಗೊಂಡಿರುವ ಜಡ್ಕಲ್, ಮುದೂರು ಗ್ರಾಮದ ಜನರು ಈಗಾಗಲೇ ಅಸಮಾಧಾನ ಹೊರಹಾಕಿದ್ದಾರೆ. ಜೊತೆಗೆ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ಮುಟ್ಟಿಸುವ ಮೂಲಕ ಉಡುಪಿ ಜಿಲ್ಲೆಯಲ್ಲಿ ಮೊದಲ ಹೋರಾಟಕ್ಕೆ ಮುನ್ನುಡಿ ಬರೆದಂತಾಗಿದೆ. ಈ ಪ್ರತಿಭಟನೆ ಕಿಚ್ಚು ಇಡೀ ಉಡುಪಿ ಜಿಲ್ಲೆಗೆ ಪಸರಿಸಿ. ಒಂದು ಜನಂದೋಲನವಾಗಿ ಪರಿವರ್ತನೆಗೊಂಡಾಗ ನಮ್ಮ ಹೋರಾಟಕ್ಕೆ ನಿಶ್ಚಿತವಾಗಿ ಫಲ ದೊರೆಯಲಿದೆ. ಈ ಹೋರಾಟದ ನಮ್ಮೆಲ್ಲರ ಹೋರಾಟವಾಗಬೇಕಿದೆ. ಯಾವುದೇ ಮಟ್ಟದ ಹೋರಾಟಕ್ಕೆ ಎಲ್ಲಿಗೆ ಕರೆದರೂ ನಿಮ್ಮ ಜೊತೆಗಿದ್ದೇನೆ ಎನ್ನುವ ಭರವಸೆ ನೀಡಿದರು.

ಪ್ರತಿಭಟನೆಗೆ ಒಂದು ವಿಶೇಷ ಶಕ್ತಿ ಇದೆ. ಪಕ್ಷಾತೀತವಾಗಿ ಆರಂಭಗೊಂಡ ಈ ಹೋರಾಟ ಇತರ ಗ್ರಾಮದ ಜನರಿಗೂ ಮಾದರಿಯಾಗಲಿದೆ ಎಂದವರು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಪರಿಸರ ಸೂಕ್ಷ್ಮ ಪ್ರದೇಶವೂ ಜನವಸತಿ ಪ್ರದೇಶದಿಂದ ಹೊರಗಿರಬೇಕು. ಕಾಡಿನ ಒಳಗೆ ಹಲವಾರು ವರ್ಷದಿಂದ ವಾಸವಾಗಿರುವ ಕುಟುಂಬಕ್ಕೆ, ಕೃಷಿ ಜಾಗಕ್ಕೆ ಸರಿಯಾದ ಪರಿಹಾರ ಕೊಡಬೇಕು. ಸೂಕ್ಷ್ಮ ವಲಯ ವನ್ನು ಜೀರೋ ಮಾಡಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಶಾಸಕರ ಮುಂದಿಡಲಾಯಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!