Sunday, October 13, 2024

ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ: ಬೆಳ್ಳಿಹಬ್ಬ ಅರ್ಥಪೂರ್ಣವಾಗಿ ಆಚರಿಸಲು ಚಿಂತನೆ

ಹೆಮ್ಮಾಡಿ, ಸೆ.23: ರಜತ ಮಹೋತ್ಸವದ ಸಂಭ್ರಮದಲ್ಲಿರುವ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸೆ.23ರಂದು ಹೆಮ್ಮಾಡಿಯಲ್ಲಿರುವ ಸಂಘದ ಮತ್ಸ್ಯಜ್ಯೋತಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಭಾಸ್ಕರ ಕೆ.ನಾಯ್ಕ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅಕ್ಟೋಬರ್ 4-1999ರಂದು ವಿದ್ಯುಕ್ತವಾಗಿ ಕಾರ್ಯಾರಂಭಿಸಿದ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಉಡುಪಿ ಜಿಲ್ಲೆಯ ಅತ್ಯುತ್ತಮ ಮೀನುಗಾರರ ಸಹಕಾರಿ ಸಂಘ ಪ್ರಶಸ್ತಿ, ರಾಷ್ಟ್ರೀಯ ಅತ್ಯುತ್ತಮ ಸಹಕಾರಿ ಸಂಘ ಎನ್.ಸಿ.ಡಿ.ಸಿ ರಾಷ್ಟ್ರೀಯ ಪ್ರಶಸ್ತಿ, 2023ರ ವಿಶ್ವ ಮೀನುಗಾರಿಕಾ ದಿನಾಚರಣೆ ಸಂದರ್ಭದಲ್ಲಿ ಪ್ರಶಂಸ ಪತ್ರವನ್ನು ಪಡೆದಿದೆ. ಈ ವರ್ಷ ರಜತ ಮಹೋತ್ಸವ ವರ್ಷಾಚರಣೆಯನ್ನು ಆಚರಿಸುತ್ತಿದ್ದು ಹಲವಾರು ಮಹತ್ವಕಾಂಕ್ಷಿ ಕಾರ್ಯಯೋಜನೆಗಳನ್ನು ಕೈಗೆತ್ತಿಕೊಳ್ಳಲಿದೆ ಎಂದು ಸಭೆಗೆ ತಿಳಿಸಲಾಯಿತು.

ಸಂಘದ ವಾರ್ಷಿಕ ವರದಿಯನ್ನು ಮಂಡಿಸಿದ ಮುಖ್ಯಕಾರ್ಯನಿರ್ವಹಣಾಧಿಕಾರಿ ಉದಯ ಕುಮಾರ್ ಹಟ್ಟಿಯಂಗಡಿ, ಸಂಘವು 2023-24ರವರೆಗೆ 25 ಸಹಕಾರಿ ವರ್ಷಗಳನ್ನು ಪೂರೈಸಿದ್ದು ವರದಿ ವರ್ಷಾಂತ್ಯಕ್ಕೆ ಒಟ್ಟು 26,173 ಸದಸ್ಯರಿದ್ದಾರೆ. ಒಟ್ಟು ರೂ.1,39,45,055 ಪಾಲು ಬಂಡವಾಳವನ್ನು ಹೊಂದಿದೆ. ವರದಿ ವರ್ಷದ ಅಂತ್ಯಕ್ಕೆ ರೂ.52,25,45,397 ಠೇವಣಾತಿಯನ್ನು ಸಂಗ್ರಹಿಸಿದೆ. ಕಳೆದ ಬಾರಿಗಿಂತ ಠೇವಣಾತಿ ಸಂಗ್ರಹದಲ್ಲಿ ಹೆಚ್ಚಳವಾಗಿದೆ. 2023-24ನೇ ಸಾಲಿನ ಆರ್ಥಿಕ ವರ್ಷದಲ್ಲಿ ಸದಸ್ಯರ ವಿವಿಧ ಉದ್ದೇಶಗಳಿಗೆ ರೂ.48,92,74,915 ಸಾಲವನ್ನು ನೀಡಲಾಗಿದೆ. ವರದಿ ವರ್ಷದಲ್ಲಿ ಸಂಘವು ರೂ.60,15,061 ನಿವ್ವಳ ಲಾಭವನ್ನು ಹೊಂದಿದೆ ಎಂದರು.

ಸಂಘವು 13 ಬ್ಯಾಂಕುಗಳಲ್ಲಿ ಉಳಿತಾಯ ಖಾತೆಗಳನ್ನು ತೆರೆದಿದ್ದು ಒಟ್ಟು ರೂ.36,96,101 ಮೊತ್ತವನ್ನು ಹೊಂದಿದೆ. ವರ್ಷಾಂತ್ಯಕ್ಕೆ ರೂ.6,34,99,452 ವಿವಿಧ ನಿಧಿಗಳನ್ನು ಹೊಂದಿದೆ ಎಂದರು.

ವರದಿ ವರ್ಷದಲ್ಲಿ ಒಟ್ಟು 53 ಮಂದಿ ಸದಸ್ಯರು ಮರಣ ಹೊಂದಿದ್ದು ಅವರ ವಾರಿಸುದಾರರಿಗೆ ಒಟ್ಟು ರೂ.4,55,316 ಮರಣ ಪರಿಹಾರ ನಿಧಿಯಿಂದ ಸಂದಾಯವಾಗಿದೆ. ಆರ್ಥಿಕ ವರ್ಷದಲ್ಲಿ ರೂ.25,000 ವೈದ್ಯಕೀಯ ನೆರವು ವಿತರಿಸಲಾಗಿದೆ. 3,42,000 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ರೂಪದಲ್ಲಿ ನೀಡಲಾಗಿದೆ ಎಂದರು.

ಸಂಘವು 25ನೇ ವರ್ಷದ ಸಂಭ್ರಮಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳಲು ನಿರ್ಧರಿಸಲಾಗಿದೆ. ಸಂಘದ ಬೆಳವಣಿಗೆಯಲ್ಲಿ ಸ್ವಸಹಾಯ ಗುಂಪುಗಳ ಸದಸ್ಯರ ಪಾತ್ರ ಮಹತ್ವದ್ದಾಗಿದ್ದು ಸಾಧನೆ ಮಾಡಿದ ಸ್ವಸಹಾಯ ಗುಂಪುಗಳನ್ನು ಗುರುತಿಸುವುದು, ದಾನಿಗಳ ಮೂಲಕ ಸಮವಸ್ತ್ರ ನೀಡುವುದು, ಹಿರಿಯ ಮೀನುಮಾರಾಟ ಮಾಡುವ ಮಹಿಳೆಯರನ್ನು ಗೌರವಿಸಲಾಗುವುದು, ಸರಕಾರಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಕಾರ್ಯಾಗಾರ ಸೇರಿದಂತೆ ಹಲವಾರು ಯೋಜನೆಗಳ ಆರಂಭಿಸಲು ಚಿಂತನೆ ನಡೆಸಲಾಗುತ್ತಿದೆ ಎಂದರು.

ಈ ಸಾಲಿನ ಡಿವಿಡೆಂಡ್ ಮೊತ್ತವನ್ನು ಬೆಳ್ಳಿಹಬ್ಬದ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲು ನಿರ್ಣಯಿಸಲಾಯಿತು. ಸಂಘದ ಸದಸ್ಯರು ವಿವಿಧ ಸಲಹೆಗಳನ್ನು ನೀಡಿದರು.

ಸಂಘದ ವಸಂತ ಮೊಗವೀರ, ನಿರ್ದೇಶಕರುಗಳಾದ ಚಂದ್ರ ನಾಯ್ಕ್, ಶ್ರೀಮತಿ ಶೋಭಾ ಜಿ ಪುತ್ರನ್, ರಾಜೀವ ಎನ್ ಶ್ರೀಯಾನ್, ಶ್ರೀಮತಿ ಬೇಬಿ ಜಿ ನಾಯ್ಕ್, ಶ್ರೀಮತಿ ಲಲಿತಾ ಮೊಗವೀರ, ಶಂಕರ ಮೊಗವೀರ ಹಾಲಾಡಿ, ನಾಗೇಶ ಮೊಗವೀರ, ಭಾಸ್ಕರ ಮೊಗವೀರ ಕಂಡ್ಲೂರು ಉಪಸ್ಥಿತರಿದ್ದರು.

ವಂಡ್ಸೆ ಶಾಖೆಯ ಗಣೇಶ ಬಳೆಗಾರ್ ಲೆಕ್ಕಪರಿಶೋಧನಾ ವರದಿ, ಶಂಕರನಾರಾಯಣ ಶಾಖೆಯ ಸಂತೋಷ್ ಆರ್.ಎಂ ಜಮಾ ಖರ್ಚಿನ ವರದಿ, ಕುಂದಾಪುರ ಶಾಖೆಯ ಜಲಜ ಆರ್ ರಾವ್ ಅಂದಾಜು ಅಯವ್ಯಯ ಬಜೆಟ್ ಮಂಡಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!