Thursday, November 21, 2024

ಮಂಟಪ ಚಂದ್ರಶೇಖರ ಉಪಾಧ್ಯ ನಿಧನ

ಸಾಲಿಗ್ರಾಮದ ಮಂಟಪ ಕುಟುಂಬದ ಹಿರಿಯರಾದ ಮಂಟಪ ಚಂದ್ರಶೇಖರ ಉಪಾಧ್ಯ (92)  ಸಪ್ಟಂಬರ್ 19ರಂದು ಶಿವಮೊಗ್ಗದಲ್ಲಿ ನಿಧನ ಹೊಂದಿದರು.
ಕೃಷಿಕರಾಗಿದ್ದ ಇವರು ಯೋಗ ಸಾಧಕರೂ, ರುಚಿಶುದ್ಧಿಯ ಉತ್ತಮ ಯಕ್ಷಗಾನ ಕಲಾಸ್ವಾದಕರೂ ಆಗಿದ್ದರು. ಉಡುಪಿಯಲ್ಲಿದ್ದಾಗ ಸಂಸ್ಥೆಯ ಕಲಾ ಕಾರ್ಯಕ್ರಮದಲ್ಲಿ ಪ್ರೇಕ್ಷಕರಾಗಿ ಭಾಗವಹಿಸುತ್ತಿದ್ದರು. ಅವರು ಐವರು ಪುತ್ರರು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅವರ ಮಕ್ಕಳೆಲ್ಲ ಯಕ್ಷಗಾನ ಕಲಾರಂಗದ ಪೋಷಕರು. ತಂದೆಯ ಯಕ್ಷಗಾನ ಪ್ರೀತಿ, ಸಾಮಾಜಿಕ ಕಾಳಜಿ, ಪರಿಶ್ರಮದ ದುಡಿಮೆ, ಶಿಸ್ತಿನಬದುಕು ಮಕ್ಕಳಲ್ಲಿ ಹರಿದು ಬಂದಿದೆ. ತಮ್ಮ ವೃತ್ತಿಯೊಂದಿಗೆ ಯಕ್ಷಗಾನ ಕಲಾ ಪ್ರಕಾರಕ್ಕೆ ಮೌಲಿಕ ಕೊಡುಗೆ ನೀಡಿದ್ದಾರೆ. ಹಿರಿಯರಾದ ಪ್ರಭಾಕರ ಉಪಾಧ್ಯರು ಬೆಂಗಳೂರಿನಲ್ಲಿ ಉದ್ಯಮಿ, ಶ್ರೇಷ್ಠ ಸ್ತ್ರೀವೇಷಧಾರಿಯಾದ ಅವರು ಡಾ. ಆರ್.ಗಣೇಶರ ಏಕವ್ಯಕ್ತಿ ಯಕ್ಷಗಾನ ಪರಿಕಲ್ಪನೆಯನ್ನು ಸಾಕಾರಗೊಳಿಸಿದವರು. ಡಾ.ರತ್ನಾಕರ ಉಪಾಧ್ಯರು ಶಿವಮೊಗ್ಗದಲ್ಲಿ ಪ್ರಸಿದ್ದ ವೈದ್ಯರು, ಯಕ್ಷಗಾನ ಸಂಘಟಕರು,ನಿರಂತರ 24ಗಂಟೆ ಯಕ್ಷಗಾನವೂ ಸೇರಿದಂತೆ ಹಲವು ಹೊಸ ಪ್ರಯೋಗಗಳಿಗೆ ಕಾರಣರಾದವರು. ನಟರಾಜ ಉಪಾಧ್ಯರು ವಿದೇಶದಲ್ಲಿ ಇಂಜನಿಯರ್ ಆಗಿದ್ದವರು. ಈಗ   ಬೆಂಗಳೂರು ನಿವಾಸಿ,ಯಕ್ಷ ವಾಹಿನಿಯ ಮೂಲಕ ಡಿಜಿಟಲ್ ಹಸ್ತಪ್ರತಿ ಸಂಗ್ರಹಕ್ಕೆ ದೊಡ್ಡ ಕೊಡುಗೆ ನೀಡಿದವರು, ಡಾ. ನಾಗರಾಜ ಉಪಾಧ್ಯರು ಮಣಿಪಾಲದ ಎಂ. ಐ. ಟಿಯಲ್ಲಿ ಉಪನ್ಯಾಸಕರು, ಸಹೃದಯ ಕಲಾಸಕ್ತರು. ಡಾ. ಮನೋಹರ ಉಪಾಧ್ಯರು ಮಂಗಳೂರಿನಲ್ಲಿ ಪಶುವೖದ್ಯರಾಗಿ ಖ್ಯಾತರು, ಯಕ್ಷಗಾನ ಛಾಯಾಚಿತ್ರಗ್ರಾಹಕ ಮತ್ತು ಕಲಾಪೋಷಕರು. ಮಂಟಪ ಚಂದ್ರಶೇಖರರ ನಿಧನಕ್ಕೆ ಉಡುಪಿಯ ಯಕ್ಷಗಾನ ಕಲಾರಂಗ ಗಾಢ ಸಂತಾಪ ವ್ಯಕ್ತಪಡಿಸಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!