spot_img
Wednesday, January 22, 2025
spot_img

ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ಕಿರಿಮಂಜೇಶ್ವರ 43 ಲಕ್ಷ ಲಾಭ: ಶೇ.15% ಡಿವಿಡೆಂಡ್ ಘೋಷಣೆ


ಬೈಂದೂರು, ಸೆ.21: ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ಕಿರಿಮಂಜೇಶ್ವರ ವರದಿ ವರ್ಷದ ಅಂತ್ಯಕ್ಕೆ ರೂ.53,61,280 ಸದಸ್ಯರ ಪಾಲು ಬಂಡವಾಳವನ್ನು ಹೊಂದಿ, ರೂ.53,89,33,940 ಠೇವಣಿಗಳನ್ನು ಸಂಗ್ರಹಿಸಿ, ವರ್ಷಾಂತ್ಯಕ್ಕೆ ರೂ.26,96,02,844.59ಗಳಷ್ಟು ಠೇವಣಿಗಳನ್ನು ಹೊಂದಿದೆ. ಸಂಘವು ವರದಿ ಸಾಲಿನಲ್ಲಿ ರೂ.43,91,140.91 ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣ ಉಡುಪ ಹೇಳಿದರು.
ಅವರು ಸೆ.21 ಶನಿವಾರ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ನಿ., ಕಿರಿಮಂಜೇಶ್ವರ ಇದರ 2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘವು ವರದಿ ವರ್ಷದಲ್ಲಿ ರೂ.16,51,92,431ಗಳಷ್ಟು ವಿವಿಧ ಸಾಲಗಳನ್ನು ನೀಡಿದೆ. ರೂ.21,94,18,455 ಹೊರಬಾಕಿ ಸಾಲವಾಗಿರುತ್ತದೆ. ಶೇ.90.98% ಸಾಲ ವಸೂಲಾತಿ ಆಗಿದೆ ಎಂದರು.
ಸಂಘವು ಪಡಿತರ ವ್ಯಾಪಾರ ವಹಿವಾಟು ಮಾಡುತ್ತಿದ್ದು ರೂ.1,22,165.30 ವ್ಯಾಪಾರ ಲಾಭ ಗಳಿಸಿದೆ. ಸಂಘವು ಹೇರಂಜಾಲು ಗ್ರಾಮದಲ್ಲಿ ಕೃಷಿ ನಿವೇಶನದಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳ ಮಾರಾಟದಿಂದ 1,15,765 ಬಂದಿದ್ದು, ಗೊಬ್ಬರ ಖರೀದಿ, ಕೂಲಿ, ಸಾರಿಗೆ ಹಾಗು ವಿದ್ಯುತ್‍ಗಾಗಿ ಒಟ್ಟು ರೂ.1,93,915 ವ್ಯಯಿಸಿದ್ದು ರೂ.78,150 ನಷ್ಟವಾಗಿರುತ್ತದೆ ಎಂದರು.
ಸಂಘವು ವರದಿ ವರ್ಷದ ಅಂತ್ಯಕ್ಕೆ ವಿವಿಧ ಸಹಕಾರಿ ಸಂಘ ಹಾಗೂ ಆರ್ಥಿಕ ಸಂಸ್ಥೆಗಳಲ್ಲಿ ರೂ.10,86,49,181 ವಿನಿಯೋಗ ಮಾಡಿದ್ದು ಒಟ್ಟು ರೂ.4,70,53,862.32 ಮೊತ್ತದ ವಿವಿಧ ನಿಧಿಗಳು ಹಾಗೂ ರೂ.1,35,00,745.64 ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳನ್ನು ಸಂಘವು ಹೊಂದಿದೆ. ಸದಸ್ಯರು ಪಡೆದ ಸಾಲಗಳನ್ನು ವಾಯಿದೆಗೆ ಸರಿಯಾಗಿ ಮರುಪಾವತಿಸಿದರೆ ಶೇ.2ರ ಬಡ್ಡಿ ರಿಯಾಯತಿ ನೀಡುತ್ತಿದ್ದು ವರದಿ ವರ್ಷದಲ್ಲಿ ಬಡ್ಡಿ ರಿಯಾಯಿತಿಯಿಂದಾಗಿ ರೂ.11,87,430 ನೀಡಲಾಗಿದೆ ಎಂದರು.
ವರದಿ ವರ್ಷದಲ್ಲಿ 73 ಮಹಿಳಾ ಸ್ವ-ಸಹಾಯ ಗುಂಪುಗಳನ್ನು ರಚಿಸಿದ್ದು ಮಹಿಳಾ ಸಶಕ್ತೀಕರಣಕ್ಕಾಗಿ ರೂ.3,30,50,000 ಸಾಲ ನೀಡಲಾಗಿದೆ. ಕೇವಲ 11% ಬಡ್ಡಿ ದರದಲ್ಲಿ ಸ್ವ-ಸಹಾಯ ಗುಂಪುಗಳಿಗೆ ಸಾಲ ನೀಡುತ್ತಿದೆ ಎಂದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಶ್ರೀಮತಿ ಗಾಯತ್ರಿ ಜಿ.ಶ್ಯಾನುಭಾಗ್, ನಿರ್ದೇಶಕರಾದ ಶ್ರೀಮತಿ ಬಿ.ರತ್ನ ಹೆಬ್ಬಾರ್, ಶ್ರೀಮತಿ ನಾಗವೇಣಿ ಕಾರಂತ, ಶ್ರೀಮತಿ ಪುಷ್ಪಲತಾ ಶ್ಯಾನುಭೋಗ್, ಶ್ರೀಮತಿ ಶಾರದ, ಶ್ರೀಮತಿ ವಸಂತಿ ಪೂಜಾರಿ, ಶ್ರೀಮತಿ ಜಯಲಕ್ಷ್ಮೀ ಹೊಳ್ಳ, ಶ್ರೀಮತಿ ಕಮಲಾಕ್ಷಿ ವಿ ನಾವಡ, ಶ್ರೀಮತಿ ನಾಗವೇಣಿ ಕೆದ್ಲಾಯ, ಶ್ರೀಮತಿ ರೇಣುಕಾ ನಾಯರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ಸದಸ್ಯರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು .ಎಸ್.ಎಸ್.ಎಲ್.ಸಿಯಲ್ಲಿ ನಾಗಶ್ರೀ ಉಪ್ಪುಂದ, ರಾಗಿಣಿ ಕಾಲ್ತೋಡು, ದ್ವಿತೀಯ ಪಿಯೂಸಿಯಲ್ಲಿ ಶರಣ್ಯ ಆರ್, ಮೇಘನಾ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಹೇಮಾ ಹೊಳ್ಳ ಪ್ರಾರ್ಥನೆ ಮಾಡಿದರು. ಸಂಘದ ಅಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣ ಉಡುಪ ಸ್ವಾಗತಿಸಿದರು. ಸುಮಂಗಲ ಪ್ರಭು ವರದಿ ಮಂಡಿಸಿದರು, ಸಂಘದ ಪ್ರಧಾನ ವ್ಯವಸ್ಥಾಪಕ ರಾಘವೇಂದ್ರ ಕೆ. ಅಯವ್ಯಯ ಮಂಡಿಸಿದರು. ರಾಘವೇಂದ್ರ ಖಾರ್ವಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!