Sunday, October 13, 2024

ಸಹಕಾರಿ ಸದಸ್ಯೆಗೆ ಮನೆ ನಿರ್ಮಾಣ ಮಾಡಿಕೊಟ್ಟ ಕೋಡಿ ಕನ್ಯಾಣದ ಶ್ರೀ ರಾಮಾಂಜನೇಯ ಸೌಹಾರ್ದ ಸಹಕಾರಿ ಸಂಘ

ಸಾಸ್ತಾನ: ಉಡುಪಿ ಜಿಲ್ಲೆಗೆ ರಾಮಾಂಜನೇಯ ಸೌಹಾರ್ದ ಸಹಕಾರಿ ಸಂಘವು ಸಿಂಧೂರವಿದ್ದಂತೆ. ಸಹಕಾರಿ ಕ್ಷೇತ್ರದಲ್ಲಿ ಈ ಸೌಹಾರ್ದ ಸಹಕಾರಿ ಸಂಘ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ನಿರ್ದೇಶಕ ಮಂಜುನಾಥ್ ಎಸ್ ಕೆ ಹೇಳಿದರು.

ಶನಿವಾರ ಕೋಡಿಯ ರಾಮಾಂಜನೇಯ ಸೌಹಾರ್ದ ಸಹಕಾರಿ ಸಂಘದ ಸದಸ್ಯೆ ಭವಾನಿ ಜಿ.ನಾಯಕ್ ಬಡ ಕುಟುಂಬಕ್ಕೆ ಹೊಸ ಸೂರು ಕಲ್ಪಿಸಿದ್ದು ಅದನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಸಹಕಾರಿ ರಂಗ ಸ್ಥಾಪಿಸಿ ಬಡವರ ಕಣ್ಣಿರೊರೆಸುವ ಕಾಯಕ ಅತ್ಯಂತ ಶ್ರೇಷ್ಠವಾದ ಕಾರ್ಯವಾಗಿದೆ. ಸಹಕಾರಿ ರಂಗ ವ್ಯವಹಾರಕ್ಕೆ ಸೀಮಿತಗೊಳ್ಳದೆ ಅಶಕ್ತರಿಗೆ ಮಿಡಿಯುತ್ತಿದೆ ಎಂದರೆ ಈ ಕ್ಷೇತ್ರ ಬದಲಾವಣೆಯ ಪರ್ವವನ್ನು ಕಾಣುತ್ತಿದೆ ಎಂದರ್ಥ. ಸಹಕಾರಿ ರಂಗ ಸಮತಾವಾದ ಚಿಂತನೆಯೊಂದಿಗೆ ಗ್ರಾಮೀಣ ಜನಸಾಮಾನ್ಯರ ಬವಣೆಯನ್ನು ನೀಗಿಸುತ್ತಿದೆ. ದಶಮಾನೋತ್ಸವ ಸಂಭ್ರಮದಲ್ಲಿರುವ ಈ ಸಂಘ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಲಿ ಎಂದು ಹಾರೈಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರಾಮಾಂಜನೇಯ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರು ಶಂಭು ಪೂಜಾರಿ ಮಾತನಾಡಿ ನಮ್ಮ ಸಂಸ್ಥೆ ಸಮಾಜಮುಖಿ ಕಾರ್ಯಗಳಿಗೆ ಸದಾ ಕಟ್ಟಿಬದ್ಧರಾಗಿದ್ದೇವೆ ಲಾಭಗಳಿಸುವುದರೊಂದಿಗೆ ಇಂತಹ ಮಾನವೀಯ ಕೈಂಕರ್ಯ ಸಾಕ್ಷಿಯಾಗುತ್ತಲೇ ಇರುತ್ತೇವೆಂದರು.

ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ಅಧ್ಯಕ್ಷ ಅಂಪಾರು ಜಗನ್ನಾಥ ಶೆಟ್ಟಿಯವರು ಮಾತನಾಡಿ ಉಡುಪಿ ಜಿಲ್ಲೆಯಲ್ಲೇ ರಾಮಾಂಜನೇಯ ಸೌಹಾರ್ದ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದಕ್ಕೆ ಹೆಮ್ಮೆಯಾಗುತ್ತದೆ ಎಂದರು.

ಈ ವೇಳೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ಅಭಿವೃದ್ಧಿ ಅಧಿಕಾರಿ ವಿಜಯ ಬಿ.ಎಸ್, ಧಾರ್ಮಿಕ ಮುಖಂಡ ಮಾಧವ ಉಪಾಧ್ಯಾ, ಕೋಡಿ ಗ್ರಾ.ಪಂ ಅಧ್ಯಕ್ಷೆ ಗೀತಾ ಖಾರ್ವಿ, ಕೋಡಿ ಕನ್ಯಾಣ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ್ ಮೆಂಡನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಸದಸ್ಯರು ಕೃಷ್ಣ ಪೂಜಾರಿ. ಪಿ, ಕಾಮಾಕ್ಷಿ ಸೌಹಾರ್ದ ಸಹಕಾರಿ ಸಂಘ ಬೈಂದೂರು ಸಿ ಇ ಒ ಶ್ರೀನಿವಾಸ, ಭಾರತ್ ವಿಕಾಸ್ ಸೌಹಾರ್ದ ಸಹಕಾರಿ ಸಿ‌ಇ‌ಒ ರಾಜು, ಕಾಮಧೇನು ಸಹಕಾರಿ ಸಂಘ ಹಂದಟ್ಟು ಸಿ‌ಇ‌ಒ ಸತೀಶ್ ನಾಯ್ಕ್, ಅಗ್ರಜ ಸೌಹಾರ್ದ ಸಹಕಾರಿ ಸಂಘ ಉಡುಪಿ ಇದರ ಸಿ ಇ‌ಒ ಗಣೇಶ್ ಕೋಟ್ಯಾನ್, ಪಂಚಗಂಗಾವಳಿ ಸೌಹಾರ್ದ ಸಹಕಾರಿ ಸಂಘ ಗಂಗೊಳ್ಳಿ ಸಿ‌ಇ‌ಒ ಸುಬ್ರಹ್ಮಣ್ಯ, ವರಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ಉಪ್ಪುಂದ ಇದರ ಸಿ‌ಇ‌ಒ ಸುಧಾಕರ್, ಸನ್ನಿಧಿ ಮಹಿಳಾ ಸೌಹಾರ್ದ ಸಹಕಾರಿ ಸಂಘ ಪಾಂಡೇಶ್ವರ ಸಿ‌ಇ‌ಒ ಸುದರ್ಶನ್, ಸಾರಸ್ಚತ ಸೌಹಾರ್ದ ಸಹಕಾರಿ ಸಂಘ ಮಣಿಪಾಲ ಸಿ‌ಇ‌ಒ ಭುವನೇಶ್ ಪ್ರಭು, ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟದ ಸಿ‌ಇ‌ಒ ಲೋಹಿತ್ ಸಾಲಿಯಾನ್,ಆತ್ಮಿಕ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಘುರಾಮ ಮರಕಾಲ, ಕೋಡಿ ಮೀನುಗಾರ ಸಹಕಾರಿ ಸಂಘದ ನಿರ್ದೇಶಕರುಗಳು, ಉಡುಪಿ ಜಿಲ್ಲಾ ವಿವಿಧ ಸಹಕಾರಿ ಸಂಸ್ಥೆಗಳ ನಿರ್ದೇಶಕರು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಸಂಧರ್ಭ ರಾಮಾಂಜನೇಯ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಮಹಾಬಲ ಕುಂದರ ಮತ್ತು ನಿರ್ದೇಶಕರು, ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಗೃಹ ನಿರ್ಮಾಣಕ್ಕೆ ಸಹಕರಿಸಿದ ಉದ್ಯಮಿ ಅಂತೋನಿ ಡಿಸೋಜ ಇವರನ್ನು ಸನ್ಮಾನಿಸಲಾಯಿತು. ರಾಮಾಂಜನೇಯ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಘವೇಂದ್ರ ಕರ್ಕೇರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸೌಹಾರ್ದ ಸಹಕಾರಿ ಹೊಸ ಮೈಲಿಗಲ್ಲು:

ಹತ್ತಾರು ವರ್ಷಗಳಿಂದ ಬದುಕಿಗೊಂದು ಸೂರು ಕಟ್ಟಿಕೊಳ್ಳಬೇಕು ಎಂಬ ಮಹದಾಸೆ ಹೊಂದಿದ್ದ ಕೋಡಿ ಕನ್ಯಾನದ ಭವಾನಿ ಜಿ ನಾಯಕ್ ಕುಟುಂಬಕ್ಕೆ ಗೃಹ ನಿರ್ಮಿಸೋದು ಕನಸಾಗಿಯೇ ಉಳಿದಿತ್ತು. ವಾಸ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ತುಂಬಾ ಹಳೆಯದಾದ ಮನೆಯಲ್ಲಿ ವಾಸವಿದ್ದ ಭವಾನಿ ಕುಟುಂಬದ ಸಂಕಷ್ಟ ಅರಿತ ಶ್ರೀ ರಾಮಾಂಜನೇಯ ಸೌಹಾರ್ದ ಕೋಡಿ ಕನ್ಯಾಣ ಗೃಹ ನಿರ್ಮಾಣ ಮಾಡಿಕೊಡುವ ಕೈಂಕರ್ಯಕ್ಕೆ ಮುಂದಾಗಿತ್ತು.

ಊರಿನ ಸಂಘ ಸಂಸ್ಥೆಗಳ ಹಾಗೂ ಪೋಷಕ ದಾನಿಗಳ ಸಹಕಾರವನ್ನು ಪಡೆದು ಸೌಹಾರ್ದ ಸಂಸ್ಥೆ ತಮ್ಮ ಗ್ರಾಹಕರಿಗೆ ಒಂದು ಸೂರು ನಿರ್ಮಿಸಿ ಕೊಟ್ಟಿರೋದು ಸಹಕಾರ ಕ್ಷೇತ್ರದಲ್ಲಿ ಹೊಸ ಭಾಷ್ಯಾಕ್ಕೆ ಕಾರಣವಾಗಿದೆ. ಕೇವಲ ಲಾಭ ಗಳಿಸುವುದೆ ಸಂಘದ ಪ್ರಮುಖ ಉದ್ದೇಶವಾಗಿಸಿಕೊಳ್ಳದೆ ಈ ಸೌಹಾರ್ದ ಸಹಕಾರಿ ಸಂಘ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ತಥಾಸ್ತು ಎಂಬ ಯೋಜನೆಯನ್ನು ಸೃಷ್ಟಿಸಿ ಆ ಯೋಜನೆಯ ಮೂಲಕ ಸದಸ್ಯೆಯ ಕನಸು ನನಸು ಮಾಡಿದೆ.

 

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!