Sunday, October 13, 2024

ಯಕ್ಷಗಾನದಲ್ಲಿ ಪೂರ್ವರಂಗ ಅತ್ಯಂತ ಮುಖ್ಯ-ಹಂದಾಡಿ ಅಂದ್ರು ಡಿಸಿಲ್ವ

ಗುಂಡ್ಮಿ: ಯಕ್ಷಗಾನ ಕಲಾ ಪ್ರೇಮಿಗಳ ಜೀವ. ಯಕ್ಷಗಾನದಲ್ಲಿ ಪೂರ್ವರಂಗ ಅತ್ಯಂತ ಮುಖ್ಯವಾಗಿತ್ತು. ಹಿಂದಿನ ಕಾಲದಲ್ಲಿ ಪೂರ್ವರಂಗದಲ್ಲಿಯೇ ಹೆಚ್ಚಿನ ಕಲಾವಿದರು ಪಳಗಿ ಮುಖ್ಯ ವೇಷಧಾರಿಗಳಾಗುತ್ತಿದ್ದರು. ಪ್ರಸ್ತುತ ಕಾಲಘಟ್ಟದಲ್ಲಿ ಯಕ್ಷಗಾನ ಫಾಸ್ಟ್ ಫುಡ್ ತರಹ ಆಗಿಹೋಗಿದೆ. ಪೂರ್ವರಂಗದ ಯಾವುದೇ ಭಾಗಗಳಿಲ್ಲದೇ ನೇರವಾಗಿ ಪ್ರಸಂಗ ಪ್ರಸ್ತುತಿಗೆ ಯಕ್ಷಗಾನ ಮೊದಲಾಗುತ್ತಿದ್ದಾರೆ. ಪೂರ್ವರಂಗವನ್ನು ಕೇಳುವ, ಮಾಡುವ, ನೋಡುವ ಸಹನೆ ಯಾರಲ್ಲಿಯೂ ಇಲ್ಲ. ಯಶಸ್ವೀ ಕಲಾವೃಂದ ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಯಕ್ಷಗಾನ ಅಭಿಮಾನಿ ಅಂದ್ರು ಡಿಸಿಲ್ವಾ ಅಭಿಪ್ರಾಯಪಟ್ಟರು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡ್ಮಿ, ಸಾಸ್ತಾನದಲ್ಲಿ ಯಶಸ್ವೀ ಕಲಾವೃಂದ (ರಿ.)ಕೊಮೆ ತೆಕ್ಕಟ್ಟೆ ಸಂಯೋಜನೆಯಲ್ಲಿ ಶಾಲೆಗಳಲ್ಲಿ ಒಡ್ಡೋಲಗ ಕಾರ್ಯಕ್ರಮವನ್ನು ಸೆಪ್ಟೆಂಬರ್ ೧೭ರಂದು ಮರು ಚಾಲನೆಯನ್ನು ದೀವಟಿಕೆಗೆ ಎಣ್ಣೆ ಹಾಕುವುದರ ಮೂಲಕ ಉದ್ಘಾಟಿಸಿ ಮಾತನ್ನಾಡಿದರು.

ಪಟ್ಟಣ ಪಂಚಾಯತ್ ಸದಸ್ಯರಾದ ಸುಲತಾ ಹೆಗ್ಡೆ ಮಾತನ್ನಾಡಿ, ಮಕ್ಕಳ ಮೂಲಕ ಮಕ್ಕಳಿಗೆ ಕಲೆಯನ್ನು ಬಿತ್ತರಿಸುವ ಕೆಲಸ ಬಹಳ ಸಂತೋಷವಾಗುತ್ತದೆ. ಮಕ್ಕಳಿಗೆ ಈ ಕಾರ್ಯಕ್ರಮ ಅತ್ಯಂತ ಹತ್ತಿರವಾಗುತ್ತದೆ. ಮಕ್ಕಳು ಪ್ರಬುದ್ಧ ಕಲಾವಿದರಾಗಿ ಸಮಾಜಕ್ಕೆ ಕೊಡುಗೆಯಾಗಿಸುವ ಸಂಸ್ಥೆಯ ಕೆಲಸವನ್ನು ಮೆಚ್ಚಲೇ ಬೇಕು. ಸರಕಾರಿ ಶಾಲೆಗಳನ್ನೇ ಆಯ್ದುಕೊಂಡು ಮಕ್ಕಳಿಗೆ ಕಲೆಯನ್ನು ಪರಿಚಯಿಸುತ್ತಿರುವುದು ಸಂಸ್ಥೆಯ ಬಗೆಗೆ ಹೆಮ್ಮೆ ಮೂಡಿಸುತ್ತದೆ. ಒಳಿತಾಗಲಿ ಎಂದರು.

ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಕೋಟ ಸುದರ್ಶನ ಉರಾಳ, ಎಸ್.ಡಿ.ಎಮ್.ಸಿ ಅಧ್ಯಕ್ಷೆ ವಿಜಯಲಕ್ಷ್ಮಿ, ರೊ. ಲೀಲಾವತಿ ಗಂಗಾಧರ, ರವೀಂದ್ರ ಕಾಮತ್, ರೊ. ಮನೋಜ್ ಕುಮಾರ್, ಮುಖ್ಯೋಪಾಧ್ಯಾಯರಾದ ಉಷಾ ಉಪಸ್ಥಿತರಿದ್ದರು. ಗುಲಾಬಿ ವಂದಿಸಿದರು. ಶ್ರೀಮತಿ ರವಿಕಲಾ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!